ಮಾಜಿ ಸಚಿವಸುರೇಶ್ ಕುಮಾರ್ 
ಜಿಲ್ಲಾ ಸುದ್ದಿ

ಲೋಕಾಕ್ಕೆ ಪ್ರಾಮಾಣಿಕ ವ್ಯಕ್ತಿ ತಪ್ಪಿಸಿದ ಕಾಂಗ್ರೆಸ್ : ಮಾಜಿ ಸಚಿವ ಸುರೇಶ್ ಕುಮಾರ್ ಟೀಕೆ

ಕಾಂಗ್ರೆಸ್ ಸರ್ಕಾರದ ರಾಜಕೀಯದಿಂದಾಗಿ ರಾಜ್ಯಕ್ಕೆ ದೊರೆಯುತ್ತಿದ್ದ ಅತ್ಯುತ್ತಮ, ಪ್ರಾಮಾಣಿಕ ಲೋಕಾಯುಕ್ತರೊಬ್ಬರು ತಪ್ಪಿ ಹೋದರು ಎಂದು ಬಿಜೆಪಿ ಮಾಜಿ ಸಚಿವ ಸುರೇಶ್ ಕುಮಾರ್ ಆರೋಪಿಸಿದ್ದಾರೆ.

ಉಡುಪಿ: ಕಾಂಗ್ರೆಸ್ ಸರ್ಕಾರದ ರಾಜಕೀಯದಿಂದಾಗಿ ರಾಜ್ಯಕ್ಕೆ ದೊರೆಯುತ್ತಿದ್ದ ಅತ್ಯುತ್ತಮ, ಪ್ರಾಮಾಣಿಕ ಲೋಕಾಯುಕ್ತರೊಬ್ಬರು ತಪ್ಪಿ ಹೋದರು ಎಂದು ಬಿಜೆಪಿ ಮಾಜಿ ಸಚಿವ ಸುರೇಶ್ ಕುಮಾರ್ ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ನಡೆದ ಸಭೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಅವರೇ ಜಸ್ಟೀಸ್ ವಿಕ್ರಮ್  ಜಿತ್ ಸೆನ್ ಅವರ ಹೆಸರನ್ನು ಸೂಚಿಸಿದ್ದರು. ಇದಕ್ಕೆ ವಿಪಕ್ಷ ಬಿಜೆಪಿ ನಾಯಕರ, ಮೇಲ್ಮನೆ ಸಭಾಪತಿಗಳ ಒಪ್ಪಿಗೆಯೂ ಇತ್ತು, ಖುದ್ದು ಕಾನೂನು ಸಚಿವ ಜಯಚಂದ್ರ ಅವರೇ ಜಸ್ಟೀಸ್ ಸೆನ್ ಅವರಿಗೆ ಕರೆ ಮಾಡಿ ಲೋಕಾಯುಕ್ತ ಹುದ್ದೆಗೆ ಆಹ್ವಾನಿಸಿದ್ದರು. ಇದಕ್ಕೆ ಜಸ್ಟಿಸ್ ಸೆನ್ ಕೂಡ ಒಪ್ಪಿದ್ದರು.

ಆದರೆ, ಇದೀಗ ಕಾಂಗ್ರೆಸ್ ನಾಯಕರು ಬೇರೊಬ್ಬರನ್ನು ಲೋಕಾಯುಕ್ತ ಹುದ್ದೆಗೆ ತರುವುದಕ್ಕೆ ರಾಜಕೀಯ ನಡೆಸುತ್ತಿದ್ದಾರೆ. ಇದರಿಂದ ಮುಜುಗರಕ್ಕೆ ಒಳಗಾದ ಜಸ್ಟೀಸ್ ಸೆನ್ ಅವರು ಲೋಕಾಯುಕ್ತ ಹುದ್ದೆಯ ಪ್ರಸ್ತಾಪದಿಂದ ತಾವಾಗಿಯೇ ಹಿಂದಕ್ಕೆ ಸರಿದಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ರಾಜಕೀಯದಿಂದಾಗಿ ಜಸ್ಟೀಸ್ ಸೇನ್ ಅಂತಹ ಅತ್ಯುತ್ತಮ ವ್ಯಕ್ತಿ ಲೋಕಾಯುಕ್ತರಾಗುವುದು ತಪ್ಪಿದೆ ಎಂದು ಹೇಳಿದರು.

ಸರ್ಕಾರ ಲೋಕಾಯುಕ್ತ ಸ್ಥಾನಕ್ಕೆ ಸೂಚಿಸುತ್ತಿರುವ ಇನ್ನೊಬ್ಬರ ಮೇಲೆಯೂ ಸಾಕಷ್ಟು ಆಪಾದನೆಗಳಿವೆ ಎಂದು ಸುರೇಶ್ ಕುಮಾರ್, ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಜಸ್ಟೀಸ್ ನಾಯಕ್ ಅವರು ಲೋಕಾಯುಕ್ತರಾಗುವುದನ್ನು ತಾವು ವಿರೋಧಿಸುತ್ತಿಲ್ಲ, ವಿಪಕ್ಷಗಳ ಕೆಲಸ ವಿರೋಧಿಸುವುದಲ್ಲ. ಹೈಕೋರ್ಟ್ ನ್ಯಾಯಮೂರ್ತಿಯೇ ಸೂಚಿಸಿರುವ ಹೆಸರು ಜಸ್ಟೀಸ್ ಸೆನ್ ಅದನ್ನು ವಿಪಕ್ಷ ಬಿಜೆಪಿಯ ನಾಯಕರು ಬೆಂಬಲಿಸಿದ್ದಾರೆ ಎಂದು ಅವರು ಸ್ಪಷ್ಟೀಕರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!