ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಕೆರೆಗೆ ಬಿದ್ದ ಆನೆ ಸಾವು

ಸಮೀಪದ ಸರಗೂರು ಬಳಿ ಆಹಾರ ಅರಸಿ ಬಂದಿದ್ದ ಗಂಡಾನೆಯೊಂದು ಆಕಸ್ಮಿಕವಾಗಿ ಧನಗೆರೆಕಟ್ಟೆ ಕೆರೆಗೆ ಬಿದ್ದು ಬುಧವಾರ...

ಕೊಳ್ಳೆಗಾಲ: ಸಮೀಪದ ಸರಗೂರು ಬಳಿ ಆಹಾರ ಅರಸಿ ಬಂದಿದ್ದ ಗಂಡಾನೆಯೊಂದು ಆಕಸ್ಮಿಕವಾಗಿ ಧನಗೆರೆಕಟ್ಟೆ ಕೆರೆಗೆ ಬಿದ್ದು ಬುಧವಾರ ಮೃತಪಟ್ಟಿದೆ. 
ಸರಗೂರಿನ ಬಳಿಯ ಜಮೀನಿನ ಪೊದೆಯಲ್ಲಿ ಮಂಗಳವಾರ ರಾತ್ರಿ ಬೀಡುಬಿಟ್ಟಿದ್ದ ನಾಲ್ಕು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಓಡಿಸುವ ಪ್ರಯತ್ನದಲ್ಲಿದ್ದಾಗ ಗಂಡಾನೆಯೊಂದು ಓಡುವ ಭರದಲ್ಲಿ ಕಾಲು ಜಾರಿ ಕೆರೆಗೆ ಬಿದ್ದಿದೆ. 
ಕಾಡಿನಿಂದ ಆಹಾರವನ್ನರಸಿ ಬಂದಿದ್ದ ಆನೆಗಳು ಹೊಲದಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ತುಳಿದು ನಾಶಪಡಿಸಿದ್ದವು. ಇದರಿಂದ ಆತಂಕಗೊಂಡ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. 
ಈ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ಅಮರ ನಾರಾಯಣ್, ಅರಣ್ಯ ಇಲಾಖೆಯ ಎಸಿಎಫ್  ಶಿವರಾಮಯ್ಯ, ಫಾರೆಸ್ಟರ್ ಶಿವಕುಮಾರ್ ನೇತೃತ್ವದಲ್ಲಿ ಎರಡೂ ಇಲಾಖೆಗಳ ಸಿಬ್ಬಂದಿ ಕಾರ್ಯಾಚರಣೆ ನಡೆಸುವಾಗ ಘಟನೆ ಸಂಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!