ಮುಖ್ಯಮಂತ್ರಿ ಸಿದ್ದರಾಮಯ್ಯ 
ಜಿಲ್ಲಾ ಸುದ್ದಿ

ಗವರ್ನರ್ ಮನವೊಲಿಕೆ ಕಸರತ್ತು

ಲೋಕಾಯುಕ್ತ ಹುದ್ದೆಗೆ ನ್ಯಾ.ಎಸ್.ಆರ್.ನಾಯಕ್ ಅವರನ್ನು ನೇಮಿಸಲು ನಿರ್ಧರಿಸಿದಂತಿರುವ ರಾಜ್ಯ ಸರ್ಕಾರ ಅವರ ಹೆಸರನ್ನು ಶಿಫಾರಸು...

ಬೆಂಗಳೂರು: ಲೋಕಾಯುಕ್ತ ಹುದ್ದೆಗೆ ನ್ಯಾ.ಎಸ್.ಆರ್.ನಾಯಕ್ ಅವರನ್ನು ನೇಮಿಸಲು  ನಿರ್ಧರಿಸಿದಂತಿರುವ ರಾಜ್ಯ ಸರ್ಕಾರ, ಅವರ ಹೆಸರನ್ನು ಶಿಫಾರಸು ಮಾಡುವ ಮುನ್ನ      ರಾಜ್ಯಪಾಲರ ಮನವೊಲಿಸುವ ಕಸರತ್ತು ನಡೆಸುವ ಸಾಧ್ಯತೆಗಳು ಹೆಚ್ಚಿವೆ.

ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರ ಪರ-ವಿರೋಧ ಅಭಿಪ್ರಾಯಗಳು  ವ್ಯಕ್ತವಾಗುತ್ತಿರುವುದರ ನಡುವೆಯೇ ನಾಯಕ್ ಅವರು ಕಾನೂನು ಉಲ್ಲಂಘಿಸಿ  ಹಾಗೂ ತಪ್ಪು ಮಾಹಿತಿಗಳನ್ನು ನೀಡಿ ನಿವೇಶನಗಳನ್ನು ಪಡೆದಿದ್ದಾರೆ ಎಂಬುದರ ಬಗ್ಗೆ ಲೋಕಾಯುಕ್ತ ಹಾಗೂ  ರಾಜ್ಯಪಾಲರಿಗೆ ಜನಾಧಿಕಾರ ಸಂಘರ್ಷ ಪರಿಷತ್ ದೂರು ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ ಎಚ್ಚರಿಕೆ ಹೆಜ್ಜೆಗಳನ್ನಿಡಲು ಹೊರಟಿದೆ.

ಎಸ್.ಆರ್. ನಾಯಕ್ ಹೆಸರನ್ನು ಸರ್ಕಾರ ಶಿಫಾರಸು ಮಾಡಿದಾಗ ರಾಜ್ಯಪಾಲ ವಾಲಾ ಆ   ಹೆಸರನ್ನು ತಿರಸ್ಕರಿಸಿದರೆ ಆಗ ಸರ್ಕಾರ ಮುಜುಗರ ಅನುಭವಿಸಬೇಕಾಗುತ್ತದೆ. ಈಗಾಗಲೇ  ಉಪ ಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾ.ಕೆ.ಎಲ್.ಮಂಜುನಾಥ್ ಅವರ ಹೆಸರನ್ನು 3 ಬಾರಿ  ಶಿಫಾರಸು ಮಾಡಿದರೂ ರಾಜ್ಯಪಾಲರು ಸಮ್ಮತಿ ನೀಡಲಿಲ್ಲ. ಈ  ವಿಷಯದಲ್ಲಿ ರಾಜಭವನ ಹಾಗೂ ಸರ್ಕಾರದ ನಡುವೆ ತಿಕ್ಕಾಟ ನಡೆದಿತ್ತು. ಅಂತಿಮವಾಗಿ  ನ್ಯಾ.ಕೆ.ಎಲ್.ಮಂಜುನಾಥ್ ಬದಲಿಗೆ ಸರ್ಕಾರ ನ್ಯಾ.ಆನಂದ್ ಅವರ ಹೆಸರನ್ನು ಶಿಫಾರಸು  ಮಾಡಿದಾಗ ರಾಜ್ಯಪಾಲರು ಒಪ್ಪಿಗೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮತ್ತೆ ರಾಜಭವನದಿಂದ ಅಂತದೇ ಪ್ರಸಂಗ ಎದುರಾಗಬಾರದೆಂಬ   ಉದ್ದೇಶದಿಂದ ನ್ಯಾ.ಎಸ್.ಆರ್.ನಾಯಕ್ ಹೆಸರನ್ನು ಶಿಫಾರಸು ಮಾಡುವ ಮುನ್ನ  ಮುಖ್ಯಮಂತ್ರಿ   ರಾಜ್ಯಪಾಲ ವಿ.ಆರ್.ವಾಲಾರನ್ನು ಭೇಟಿಯಾಗಿ ಮನದಟ್ಟು ಮಾಡಿಕೊಡುವ ಸಾಧ್ಯತೆಗಳಿವೆ. ಬಹುತೇಕ ಸೋಮವಾರ ಇಲ್ಲವೇ ಮಂಗಳವಾರ ಮುಖ್ಯಮಂತ್ರಿ ರಾಜಭವನಕ್ಕೆ ಭೇಟಿ  ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.

ಕಳೆದ ತಿಂಗಳು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ  ಸಭೆಯಲ್ಲಿ ಲೋಕಾಯುಕ್ತ ಹುದ್ದೆಗೆ  ನಿವೃತ್ತ ಮುಖ್ಯ ನ್ಯಾ.ವಿಕ್ರಮ್ ಜಿತ್ ಸೆನ್ ಹಾಗೂ ನ್ಯಾ.ಎಸ್.ಆರ್.ನಾಯಕ್ ಅವರ ಹೆಸರು  ಪ್ರಸ್ತಾಪವಾಗಿದ್ದವು. ಈ ಮಧ್ಯೆ ಲೋಕಾಯುಕ್ತರನ್ನಾಗಿ ಕನ್ನಡಿಗರನ್ನೇ ನೇಮಿಸಬೇಕೆಂಬ  ಒತ್ತಡವಿದೆ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆಯೇ   ವಿಕ್ರಮ್ ಜಿತ್ ಸೆನ್ ಅವರು ತಮಗೆ ಹುದ್ದೆ ಬೇಡವೆಂದು ತಿರಸ್ಕರಿಸಿದ್ದರಿಂದ ಅಂತಿಮವಾಗಿ  ಎಸ್.ಆರ್.ನಾಯಕ್ ಅವರ ಒಬ್ಬರು ಹೆಸರು ಮಾತ್ರ ಉಳಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ