ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಹಿರಿಯ ನಾಗರಿಕರ ಮೇಲೆ ಹೆಚ್ಚಾಗುತ್ತಿದೆ ದೌರ್ಜನ್ಯ

ಕುಟುಂಬದವರಿಂದಲೇ ದೌರ್ಜನ್ಯ ಅನುಭವಿಸುತ್ತಿದ್ದೇವೆ ಎಂದು ದೂರು ಕೊಡುವ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕೆಲವೇ ಕೆಲವು...

ಬೆಂಗಳೂರು: ಕುಟುಂಬದವರಿಂದಲೇ ದೌರ್ಜನ್ಯ ಅನುಭವಿಸುತ್ತಿದ್ದೇವೆ ಎಂದು ದೂರು ಕೊಡುವ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕೆಲವೇ ಕೆಲವು ಮಂದಿ ಮಾತ್ರ ತಮಗಾಗುವ ದೌರ್ಜನ್ಯದ ಬಗ್ಗೆ ದೂರು ನೀಡುತ್ತಾರೆ. ಹೆಚ್ಚಿನವರು ದೌರ್ಜನ್ಯಗಳನ್ನು ಸಹಿಸಿಕೊಂಡೇ ಬದುಕುತ್ತಾರೆ.
ಹಿರಿಯ ನಾಗರಿಕರಿಗಾಗಿ ಬೆಂಗಳೂರು ಪೊಲೀಸ್ ಮತ್ತು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್  ಜಂಟಿಯಾಗಿ ನಿರ್ವಹಿಸುವ ಹಿರಿಯರ ಸಹಾಯವಾಣಿಗೆ ನಿರಂತರ ಕರೆಗಳು ಬರುತ್ತಿರುತ್ತಿವೆಯಂತೆ. ತಮ್ಮ ನಿಲುವುಗಳ ಬಗ್ಗೆ ಭಿನ್ನಾಭಿಪ್ರಾಯಗಳಿಂದಾಗಿಯೇ ಕುಟುಂಬದವರೇ ಹಿರಿಯರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಹೇಳಿ ಬರುವ ದೂರುಗಳೇ ಹೆಚ್ಚು ಅಂತಾರೆ ಸಹಾಯವಾಣಿಯ ನಿರ್ವಾಹಕರು. 
ಕೆಲವು ತಿಂಗಳುಗಳ ಹಿಂದೆಯಷ್ಟೇ  ಮೂವರು ಮಕ್ಕಳು ತನ್ನನ್ನು ತೊರೆದಿದ್ದಾರೆ ಎಂದು ಸಹಾಯವಾಣಿಗೆ 87ರ ಹರೆಯದ ವೃದ್ಧರೊಬ್ಬರು ಕರೆ ಮಾಡಿದ್ದರು. ತನ್ನೆಲ್ಲ ಆಸ್ತಿಗಳನ್ನು ಮಕ್ಕಳಿಗೆ ಹಂಚಿಕೊಟ್ಟ ನಂತರ ಆತನ ಕುಟುಂಬವೇ ಆತನನ್ನು ಕಡೆಗಣಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಆಪ್ತ ಸಲಹೆಗಾರರು ಕುಟುಂಬದವರನ್ನು ಕರೆಸಿ ಮಾತುಕತೆ ನಡೆಸಿದ್ದರು.  ಅನಂತರ ಆ ಹಿರಿಯ ವ್ಯಕ್ತಿಯ ಇಬ್ಬರು ಮೊಮ್ಮಕ್ಕಳು ತಿಂಗಳಿಗೆ ರು. 1000 ನೀಡುವಂತೆ ಒಪ್ಪಿಕೊಂಡರು. ಎರಡನೇ ಮಗ ಅಪ್ಪನಿಗೆ ಆಹಾರ ಮತ್ತು ಔಷಧಿಗಳನ್ನು ಪೂರೈಸಲು ಒಪ್ಪಿಕೊಂಡಿದ್ದು, ಮೂರನೇ ಮಗ ಅಪ್ಪನಿಗೆ ಮನೆ ಒದಗಿಸಲು ಒಪ್ಪಿಕೊಂಡಿದ್ದಾನೆ.
ಇಷ್ಟೇ ಅಲ್ಲದೆ, ಆಸ್ತಿ ವ್ಯವಹಾರಗಳಲ್ಲಿ ಹಿರಿಯ ವ್ಯಕ್ತಿಗಳನ್ನು ಮೋಸ ಮಾಡುವ ಬಗ್ಗೆಯೂ ಹಲವಾರು ದೂರುಗಳು ಸಿಗುತ್ತಿವೆ.
ಈ ಸಹಾಯವಾಣಿಗೆ ಬರುವ ಕರೆಗಳು ಕಳೆದ 5 ವರ್ಷದಿಂದ ದುಪ್ಪಟ್ಟಾಗಿವೆ. 2011-12 ರಲ್ಲಿ  69 ದೌರ್ಜನ್ಯ ದೂರುಗಳು ದಾಖಲಾಗಿದ್ದು,  2015-16ರ ಮೊದಲ ಎಂಟು ತಿಂಗಳಲ್ಲಿ 128 ದೂರುಗಳು ದಾಖಲಾಗಿವೆ.
2002ರಲ್ಲಿ ಈ ಸಹಾಯವಾಣಿ ಆರಂಭವಾದಾಗ 1.39 ಲಕ್ಷ ಕರೆಗಳು ಬಂದಿದ್ದು, ಇದರಲ್ಲಿ 8, 197 ಕರೆಗಳು ದೌರ್ಜನ್ಯಕ್ಕೆ ಸಂಬಂಧಿಸಿದ್ದವುಗಳಾಗಿವೆ. 
ಪ್ರತೀ ತಿಂಗಳು 30 ದೂರುಗಳು ಇಲ್ಲಿಗೆ ಬರುತ್ತಿದ್ದು, ಅಪ್ಪ ಅಮ್ಮನಿಗೆ ವಯಸ್ಸಾಗುತ್ತಿದ್ದಂತೆ ಮಕ್ಕಳು ಅವರನ್ನು ನಿರ್ಲಕ್ಷಿಸುವುದು ಖೇದಕರ ಎಂದು ಸಹಾಯವಾಣಿಯ ನಿರ್ವಾಹಕಿ ಸಂಧ್ಯಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video