ಬೆಂಗಳೂರು: ಹಲ್ಲೆ ಪ್ರಕರಣವೊಂದನ್ನು ಭೇದಿಸಿರುವ ವೈಯಾಲಿಕಾವಲ್ ಠಾಣೆ ಪೊಲೀಸರು ರೌಡಿಶೀಟರ್ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶೇಷಾದ್ರಿಪುರದ ಆಂಜನೇಯ ಬ್ಲಾಕ್‍ನ ರೌಡಿ ಶೀಟರ್ ಪ್ರಶಾಂತ್ ಅಲಿಯಾಸ್ ಕರಿಯ (28), ಸಾಯಿಕುಮಾರ್ (22), ನಿತೇಶ್ (23), ರಾಕೇಶ್ ಜೈನ್ (32) ಮತ್ತು ಶ್ರೀಕಾಂತ್ (24) ಬಂಧಿತರು. ಆರೋಪಿಗಳು ಜ.5ರಂದು ಸಂಜೆ 6ರ ಸುಮಾರಿನಲ್ಲಿ ಮುನೇಶ್ವರ ಬ್ಲಾಕ್ ನ ಪೈಪ್ ಲೈನ್ ರಸ್ತೆಯಲ್ಲಿ ರೌಡಿಶೀಟರ್ ಶೇಖರ್, ಶಶಿಕುಮಾರ್ ಮತ್ತು ಮುಕುಂದ್ ಅವರ ಮೇಲೆ ಮುಗಿಬಿದ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವೈಯಾಲಿಕಾವಲ್ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.