ಬೆಂಗಳೂರು: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡಸಾಹಿತ್ಯ ಪರಿಷತ್ತಿನ ಮುಂದಿನ ಮೂರು ವರ್ಷದ ಅವಧಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜೋರಾಗಿದೆ. ಅಂದಹಾಗೆ ಇದು ಅಪ್ಪಟ ಕನ್ನಡ ಚುನಾವಣೆ!
ಚುನಾವಣೆ ನೀತಿ ಸಂಹಿತೆಯಿಂದ ಹಿಡಿದು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಹೊರಡಿಸುವ ಯಾವುದೇ ಆದೇಶವನ್ನು ಅತ್ಯಂತ ವ್ಯಾಕರಣಬದ್ಧವಾಗಿ, ಕನ್ನಡ ಅಂಕಿಗಳನ್ನು ಬಳಸಿಯೇ ನಡೆಸುವುದು ಇದರ ವಿಶೇಷ. ಕಸಾಪ ಚುನಾವಣೆ ಕರ್ನಾಟಕದ ಗಡಿಯನ್ನು ದಾಟಿ ಹೊರ ರಾಜ್ಯ, ದೇಶ ಮತ್ತು ವಿದೇಶಗಳಲ್ಲೂ ನಡೆಯುತ್ತದೆ. ಕನ್ನಡ ಓದಲು ಮತ್ತು ಬರೆಯುವ ಯಾವುದೇ ವ್ಯಕ್ತಿ ಕಸಾಪ ಸದಸ್ಯನಾಗಲು ಅರ್ಹ. ತಾನು ಸದಸ್ಯತ್ವ ಪಡೆದುಕೊಂಡ ಮೂರು ವರ್ಷದ ನಂತರ ಮತದಾನದ ಅರ್ಹತೆ ಪಡೆಯುತ್ತಾನೆ.
ಪ್ರಸ್ತುತ 2016-2019ರ ಅವಧಿಗೆ ನಡೆಯುವ ಚುನಾವಣೆಯಲ್ಲಿ 2,10,711ರಷ್ಟು ಆಜೀವ ಸದಸ್ಯರಿದ್ದು, ಇವರಲ್ಲಿ 1,89,355 ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಪುರುಷರು 153,955, ಮಹಿಳೆಯರು 35,277 ಮಂದಿ ಇದ್ದಾರೆ.
ಬಿಳಿ, ಪಿಂಕ್ ಪತ್ರಗಳು: ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸ್ಥಾನ- 1, ಗಡಿ ಅಧ್ಯಕ್ಷ ಸ್ಥಾನ- 4 ಹಾಗೂ ಜಿಲ್ಲಾ ಘಟಕದ 30 ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೇಂದ್ರ ಸ್ಥಾನದ ಮತದಾನ ಪತ್ರವು ಬಿಳಿಯ ಬಣ್ಣದಲ್ಲಿದ್ದರೆ, ಉಳಿದ ಎಲ್ಲೆಡೆ ಪಿಂಕ್ ಬಿಳಿಯ ಬಣ್ಣದಲ್ಲಿದ್ದರೆ, ಉಳಿದ ಎಲ್ಲೆಡೆ ಪಿಂಕ್ ನಲ್ಲಿರುತ್ತದೆ. ರಾಜ್ಯದ 30 ಜಿಲ್ಲೆಗಳಲ್ಲಿ ನೇರ ಮತದಾನ ನಡೆದರೆ, ಹೊರ ರಾಜ್ಯ, ದೇಶ ಹಾಗೂ ವಿದೇಶದಲ್ಲಿರುವ ಕನ್ನಡಿಗ ಸದಸ್ಯರು ಮತ ಚಲಾಯಿಸಬಹುದು. ಹೊರ ಕನ್ನಡಿಗರ ಪೈಕಿ ಕೇರಳ 611, ತಮಿಳುನಾಡಿನ 157 ಮಂದಿ ಕನ್ನಡಿಗರು ಇದ್ದಾರೆ. ಹೊರ ರಾಜ್ಯಗಳಲ್ಲಿ 130 ಮಂದಿ ಹಾಗೂ ವಿದೇಶದಲ್ಲಿ 30 ಮಂದಿ ಮತದಾರರಿದ್ದಾರೆ.
ಕಂದಾಯ ಸಚಿವರ ಆಪ್ತ ಕಾರ್ಯದರ್ಶಿಯಾಗಿರುವ ಕೆ. ನಾಗರಾಜು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾಧಿಕಾರಿಯಾಗಿ 5ನೇ ಬಾರಿಗೆ ಹಾಗೂ ಒಟ್ಟಾರೆ ಚುನಾವಣಾದಿಕಾರಿಯಾಗಿ 121ನೇ ಬಾರಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. 1987ರಲ್ಲಿ ಕುಣಿಗಲ್ ಕ್ಷೇತ್ರದಿಂದ ಅಧಿಕಾರಿಯಾಗಿ ಕಾರ್ಯಾರಂಭಿಸಿದ ನಾಗರಾಜು ಅವರು ಇದುವರೆಗೆ ಯಾವುದೇ ಗೊಂದಲ ಇಲ್ಲದೆ, ಅತ್ಯಂತ ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕಸಾಪದ 1998, 2001, 2004, 2008, 2012, 2016ರ ಅವಧಿಯಲ್ಲಿ ಮುಖ್ಯ ಚುನಾವಣಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.
ಇದಲ್ಲದೆ ಗ್ರಾಪಂ, ತಾಪಂ, ಜಿಪಂ, ವಿಧಾನಸಭೆ, ಲೋಕಸಭೆ, ಒಕ್ಕಲಿಗರ ಸಂಘ, ಇಂಡಿಯನ್ ರೆಡ್ ಕ್ರಾಸ್, ಸಹಕಾರ ಇಲಾಖೆಯ ಚುನಾವಣೆಯಲ್ಲಿ ಅಧಿಕಾರಿಯಾಗಿ ಪಾಲ್ಗೊಂಡಿದ್ದಾರೆ