ಬಿಡಿಎ ಕೇಂದ್ರ ಕಚೇರಿ 
ಜಿಲ್ಲಾ ಸುದ್ದಿ

ಬಿಡಿಎ: ಮತ್ತೆ 5 ಸಾವಿರ ನಿವೇಶನ

ಬಿಡಿಎ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ನೊಂದುಕೊಳ್ಳುವುದು ಬೇಡ. ಮಹಾನಗರ ಜನತೆಗಾಗಿ ಬಿಡಿಎ ಮತ್ತೆ 5 ಸಾವಿರ ನಿವೇಶನ ಹಂಚಿಕೆ ಮಾಡಲು ಮುಂದಾಗಿದ್ದು...

ಬೆಂಗಳೂರು: ಬಿಡಿಎ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ನೊಂದುಕೊಳ್ಳುವುದು ಬೇಡ.ಮಹಾನಗರ ಜನತೆಗಾಗಿ ಬಿಡಿಎ ಮತ್ತೆ 5 ಸಾವಿರ ನಿವೇಶನ ಹಂಚಿಕೆ ಮಾಡಲು ಮುಂದಾಗಿದ್ದು, ನಿವೇಶನಾಕಾಂಕ್ಷಿಗಳಿಗೆ ಬಂಪರ್ ಯೋಜನೆ ರೂಪಿಸಿದೆ. ಈ ಪ್ರಕ್ರಿಯೆ ಕೂಡ ಸದ್ಯದಲ್ಲೇ ಶುರುವಾಗಲಿದ್ದು, ಇನ್ನು 5 ತಿಂಗಳಲ್ಲಿ ಅರ್ಜಿ ಆಹ್ವಾನಿಸಿ ಅರ್ಹರಿಗೆ ನಿವೇಶನಗಳ ಹಂಚಿಕೆ ಮಾಡಲಿದೆ.

ಇನ್ನೇನಿದ್ದರೂ ಫ್ಲ್ಯಾಟ್ ಗಳ ಕಾಲ: ಒಟ್ಟಾರೆ ಕೇಂಪೇಗೌಡ ಬಡಾವಣೆ ನಿರ್ಮಿಸಲು 4043 ಎಕರೆ ಜಮೀನು ಬೇಕಿದೆ. ಇದರಲ್ಲಿ ಈಗಾಗಲೇ 2 ಸಾವಿರ ಹೆಚ್ಚು ಎಕರೆ ಜಮೀನು ಸ್ವಾಧೀನವಾಗಿದೆ. ಒಂದು ಎಕರೆಯಲ್ಲಿ 8 ನಿವೇಶನ ಎಂದು ಲೆಕ್ಕಾಚಾರ ಹಾಕಿದರೂ ಈಗಿರುವ ಜಮೀನಿನಲ್ಲಿ ಸುಮಾರು 16 ಸಾವಿರ ನಿವೇಶನಗಳನ್ನು ಮಾಡುವ ಸಾಧ್ಯತೆ ಇದೆ. ಆದರೆ ಬಿಡಿಎ 10 ಸಾವಿರ ನಿವೇಶನಗಳನ್ನು ಮಾತ್ರ ನಿರ್ಮಿಸುತ್ತಿದೆ. ಅಂದಾಜು 2 ಸಾವಿರ ಎಕರೆ ಜಮೀನಿನಲ್ಲಿ ಈಗಾಗಲೇ 5 ಸಾವಿರ ನಿವೇಶನಗಳನ್ನು ನಿರ್ಮಿಸಲಾಗಿದ್ದು, ಹಂಚಿಕೆಗೂ ಸಿದ್ಧತೆ ನಡೆದಿದೆ. ಇನ್ನುಳಿದ ಜಮೀನಿನಲ್ಲಿ ಮತ್ತೆ 5 ಸಾವಿರ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗುತ್ತದೆ. ಇದಾದ ಮೇಲೆ ಉಳಿಯುವ ಜಮೀನಿನಲ್ಲಿ ಸುಮಾರು 300 ಎಕರೆಗಳನ್ನು ಅಪಾರ್ಟ್ ಮೆಂಟ್ ಗಳ ನಿರ್ಮಾಣಕ್ಕೆ ಮೀಸಲಿರಿಸಲಾಗುತ್ತದೆ. ಅಂದರೆ ಇನ್ನು ಮುಂದೆ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡುವ ಬದಲು ಮನೆ/ ಫ್ಲ್ಯಾಟು ನಿರ್ಮಿಸಿ ಹಂಚಿಕೆ ಮಾಡಲಾಗುತ್ತದೆ. ಈಗಾಗಲೇ 3 ಸಾವಿರದ 800 ಫ್ಲ್ಯಾಟುಗಳನ್ನು ನಿರ್ಮಿಸಿರುವ ಬಿಡಿಎ ಅವುಗಳ ಹಂಚಿಕೆಗೆ ಅರ್ಜಿಗಳನ್ನೂ ಆಹ್ವಾನಿಸಿದೆ. ಫ್ಲ್ಯಾಟ್ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಇನ್ನೂ ಮೂರು ತಿಂಗಳಲ್ಲಿ ಫ್ಲ್ಯಾಟ್ ಗಳ ಹಂಚಿಕೆಯೂ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೈಟ್ ಸಿಗದಿದ್ದರೆ ಹಣ ವಾಪಸ್ಸು ಯಾವಾಗ?
ಈಗ ಆಹ್ವಾನಿಸಿರುವ 5 ಸಾವಿರ ನಿವೇಶನಗಳಿಗೆ ಸುಮಾರು 25 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಿಂದ ಸುಮಾರು 500 ಕೋಟಿಗೂ ಹೆಚ್ಚಿನ ಹಣ ಹರಿದು ಬಂದಿದೆ. ಆದರೆ ಇದರಲ್ಲಿ ಅರ್ಹ 5 ಸಾವಿರ ಅರ್ಜಿದಾರರಿಗೆ ಮಾತ್ರ ನಿವೇಶನ ನೀಡಲಾಗುತ್ತದೆ. ಅಂದರೆ ಹೆಚ್ಚು ಬಾರಿ ಅರ್ಜಿ ಸಲ್ಲಿಸಿದವರು, ಹೆಚ್ಚು ವಯಸ್ಸಾದವರು ಮತ್ತು ಪರಿಶಿಷ್ಟ ಜಾತಿ, ವರ್ಗದ ಮೀಸಲು ಹೊಂದಿರುವವರಿಗೆ ಆದ್ಯತೆ ನೀಡಿ ಹಂಚಿಕೆ ಮಾಡಲಾಗುತ್ತದೆ.

ಸೈಟ್ ಪಡೆಯಲು ಅರ್ಹರಲ್ಲದವರಿಗೆ ಒಂದೇ ತಿಂಗಳಲ್ಲಿ ಅವರು ಹಣ ವಾಪಸ್ಸು ನೀಡಲು ತಯಾರಿ ನಡೆಸಲಾಗಿದೆ. ಅಂದರೆ ಈಗ ಸಂಗ್ರಹವಾಗಿರುವ 500 ಕೋಟಿಗಳಲ್ಲಿ 250 ಕೋಟಿ ರೂಪಾಯಿಗಳನ್ನು ಬಿಡಿಎ ವಾಪಸ್ಸು ನೀಡಬೇಕಾಗುತ್ತದೆ. ಈ ಹಣವನ್ನು ಯಾವುದಕ್ಕೂ ವೆಚ್ಚ ಮಾಡದೆ ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!