ಕಾರವಾರ: ಕಾರವಾರದ ರೆಸಾರ್ಟ್ವೊಂದರಲ್ಲಿ ಪಾರ್ಟಿ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 6 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.
ದೇವಭಾಗ ತರಂಗ ರೇಸಾರ್ಟ್ ನಲ್ಲಿ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಡಿವೈಎಸ್ ಪಿ ಪ್ರಮೋದರಾವ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ವೇಶ್ಯಾವಟಿಕೆಯಲ್ಲಿ ತೊಡಗಿದ್ದ 14 ಯುವಕರನ್ನು ಬಂಧಿಸಿದ್ದಾರೆ.
ಲೇಸಾರ್ ವೆಕೇಶನ್ ನಂಗಾನಾಚ್ ನಡೆಸುತ್ತಿದ್ದ ಲೇಸರ್ ವೆಕೇಶನ್ ಕಂಪನಿ ಮಾಲೀಕ ಹೇಮಂತ್ ಮತ್ತು ಹೈದ್ರಾಬಾದ್'ನಿಂದ ಯುವತಿಯರನ್ನು ಕರೆತಂದಿದ್ದ ಉಮಾಪತಿ ರೆಡ್ಡಿ ಹಾಗೂ ಅವರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.