ವಸಂತ ಕುಲಕರ್ಣಿ 
ಜಿಲ್ಲಾ ಸುದ್ದಿ

ಹಿರಿಯ ರಂಗಕರ್ಮಿ ವಸಂತ ಕುಲಕರ್ಣಿ ವಿಧಿವಶ

ಹಿರಿಯ ರಂಗಕರ್ಮಿ ವಸಂತ ಕುಲಕರ್ಣಿ (86) ಅವರು ಭಾನುವಾರ ಇಲ್ಲಿನ ಕೇಶ್ವಾಪುರದ ಇಂದಿರಾ ನಗರದ ಅವರ ನಿವಾಸದಲ್ಲಿ ವಿಧಿವಶರಾಗಿದ್ದಾರೆ....

ಹುಬ್ಬಳ್ಳಿ: ಹಿರಿಯ ರಂಗಕರ್ಮಿ ವಸಂತ ಕುಲಕರ್ಣಿ (86) ಅವರು ಭಾನುವಾರ ಇಲ್ಲಿನ ಕೇಶ್ವಾಪುರದ ಇಂದಿರಾ ನಗರದ ಅವರ ನಿವಾಸದಲ್ಲಿ ವಿಧಿವಶರಾಗಿದ್ದಾರೆ. 
ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿಯವರಾದ ಅವರು ರಂಗಭೂಮಿಯ ಮೇಲಿನ ಆಸಕ್ತಿಯಿಂದಾಗಿ ಗ್ರಾಮಲೆಕ್ಕಾಧಿಕಾರಿ ನೌಕರಿ ತ್ಯಜಿಸಿ ನಂತರ ಸುಳ್ಳದ ಶ್ರೀಶೈಲ ಮಲ್ಲಿಕಾರ್ಜುನ ನಾಟಕ ಕಂಪೆನಿ, ಗುಡಗೇರಿ ಕಂಪನಿಯಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು.
ಸಾಹಿತಿ ಕಂದಗಲ್‌ ಹಣಮಂತರಾಯ, ನಲವಡಿ ಶ್ರೀಕಂಠ ಶಾಸ್ತ್ರಿ ಅವರ ಶಿಷ್ಯರಾಗಿದ್ದ ಕುಲಕರ್ಣಿ ಏಣಗಿ ಬಾಳಪ್ಪ, ಗರುಡ ಸದಾಶಿವರಾಯ, ಗುಡಗೇರಿ ಬಸವರಾಜ ಮತ್ತಿತರ ರಂಗದಿಗ್ಗಜರ ಒಡನಾಡಿಯಾಗಿದ್ದರಿವರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ವಸಂತ ಕುಲಕರ್ಣಿ ಅವರಿಗೆ ಸಂದಿವೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರ ಸೋದರ ಮಾವ ಇವರು.ವಸಂತ  ಕುಲಕರ್ಣಿ ಅವರಿಗೆ ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ