ಬೆಂಗಳೂರು: ಹಣ ಚಿನ್ನಾಭರಣ, ವಾಹನ, ಮೌಲಿಕ ವಸ್ತುಗಳು ಕಳೆದರೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಡಿ.23 ರಂದು ನಾಪತ್ತೆಯಾಗಿರುವ ತಮ್ಮ ಪ್ರೀತಿಯ ನಾಯಿ ಪತ್ತೆ ಮಾಡುವಂತೆ ಹಲಸೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.
ಆ ನಾಯಿಯ ಹೆಸರು ಚುಪ್ಪಾನಿ ಅಲಿಯಾಸ್ ಚುಪ್ಪಿ(3), ತಳಿ ಇಂಡಿಯಾನ್, ಬಣ್ಣ ಸುವರ್ಣ ಕಂದು, ಗಾತ್ರ ಸಣ್ಣ, ಲಿಂಗ ಹೆಣ್ಣು, ಇದರ ಎಡಕಿವಿ ಸ್ವಲ್ಪ ವಾಲಿದೆ ಎಂದು ಮಾಲೀಕರು ದೂರಿನಲ್ಲಿ ನಾಯಿಯ ವಿವರ ನೀಡಿದ್ದಾರೆ.
ದೊಮ್ಮಲೂರಿನಲ್ಲಿ ನಾಯಿ ನಾಪತ್ತೆಯಾಗಿದೆ. ಸುಳಿವು ನೀಡಿದವರಿಗೆ ರು.10 ಸಾವಿರ ಬಹುಮಾನ ನೀಡಲಾಗುತ್ತದೆ.