ಬೆಂಗಳೂರು (ಆನೇಕಲ್): ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಹಿಮಾಲಯನ್ ಕರಡಿ ಪೇರಿ ಕಿತ್ತಿದೆ.
ಕೆಲ ತಿಂಗಳ ಹಿಂದಷ್ಟೇರ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಈ ಹಿಮಾಲಯನ್ ಕರಡಿ ಪಂಜರದಿಂದ ನೆಗೆದು ಕಾಡು ಸೇರಿದೆ. ಇಡೀ ದಿನ ಸಿಬ್ಬಂದಿ ಹುಡುಕಾಟ ನಡೆಸಿದರೂ ಕರಡಿ ಸುಳಿವು ಸಿಗಲಿಲ್ಲ. ಇದರಿಂದ ಕಾಡಂಚಿನ ಹಳ್ಳಿಗರಲ್ಲಿ ಆತಂಕ ಮನೆ ಮಾಡಿದೆ.
ಉದ್ಯಾನವನದ ಪ್ರಾಣಿ ಪುರ್ನವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಹಿಮಾಲಯನ್ ಕರಡಿ ಬೆಳಗ್ಗೆ ಬಯಲು ಪಂಜರದ 30 ಅಡಿ ಎತ್ತರದ ತಂತಿ ಬೇಲಿ ನೆಗೆದು ಹೊರ ಬಂದಿದೆ. ಕೂಡಲೇ ಸಿಬ್ಬಂದಿ ಹಿಂಬಾಲಿಸಿದ್ದಾರೆ, ಗಾಬರಿಗೊಂಡ ಕರಡಿ ಅಲ್ಲೇ ಇದ್ದ ಕಲ್ಲು ಕಾಪೌಂಡ್ ಹಾರಿ ಕಾಡು ಸೇರಿದೆ.
ಅರಿವಳಿಕೆ ಔಷಧದೊಂದಿಗೆ ವೈದ್ಯರ ತಂಡ ಒಂದು ಭಾಗದಿಂದ ಹುಡುಕಾಟ ನಡೆಸಿದರೆ, ಮತ್ತೆ ಮೂರು ಗುಂಪುಗಳಾಗಿ ಸಿಬ್ಬಂದಿ ಕರಡಿ ಪತ್ತೆಗೆ ಮುಂದಾಯಿತು. ಸಂಜೆ ವರೆಗೂ ಹುಡುಕಾಡಿದರೂ ಸುಳಿವು ಸಿಗಲಿಲ್ಲ. ಉದ್ಯಾನವನದ ವ್ಯಾಪ್ತಿಯಿಂದ ಹೊರ ಬಂದು ಮೆಟ್ಟು ಬಂಡೆ ಅರಣ್ಯ ಪ್ರದೇಶ ಸೇರಿದ ಕರಡಿ ಹುಡುಕಾಟಕ್ಕೆ ದಟ್ಟ ಪೊದೆ ಅಡ್ಡಿಯಾಯಿತು. ಇದನ್ನು ಅರಿತ ಅಧಿಕಾರಿಗಳು ಡ್ರೋನ್ ಕ್ಯಾಮೆರಾ ಮೂಲಕ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಅಧಿಕಾರಿಗಳ ಸೂಚನೆ ಮೇರೆಗೆ ಗುರುವಾರ ಡಾ. ವಸೀಂ ಮತ್ತು ತಂಡ ಹೆಣ್ಣು ಕರಡಿಯನ್ನು ಬೋನ್ ನಿಂದ ಬಯಲು ಆಲಯಕ್ಕೆ ಬಿಡಲು ಮುಂದಾಗಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ಹೊರ ಬಿಟ್ಟರು. ಬೋನ್ ನಿಂದ ಹೊರ ಬಂದ ಕರಡಿ ಸುತ್ತಮುತ್ತ ನೋಡಿ ಏಕಾಏಕಿ 30 ಅಡಿ
ಎತ್ತರದ ತಂತಿ ಬೇಲಿಯಿಂದ ನೆಗೆಯಿತು.