ಜಿಲ್ಲಾ ಸುದ್ದಿ

ಕಮರ್ಷಿಯಲ್ ನಲ್ಲಿ ಹ್ಯಾಪಿ ಸ್ಟ್ರೀಟ್ ಸಂಭ್ರಮ

Manjula VN

ಬೆಂಗಳೂರು: ಡೊಳ್ಳು ಕುಣಿತಕ್ಕೆ ಮಹಿಳೆಯರ ಡ್ಯಾನ್ಸ್...ಪುರುಷರಿಂದ ದೇಹದಾರ್ಢ್ಯ ಕಸರತ್ತು...ಮಹಿಳೆಯರ ಹಗ್ಗಜಗ್ಗಾಟ...ಸಾಮೂಹಿಕ ಯೋಗಾ ಪ್ರದರ್ಶನ...ಲಾರಿಗಳ ಟೈಯರ್ ಎತ್ತಿ ಬಲ ಪ್ರದರ್ಶನ...

ಇಂತಹ ಸಾಹಸಮಯ, ಮನರಂಜನಾತ್ಮಕ ದೃಶ್ಯಗಳು ಕಂಡುಬಂದಿದ್ದು ನಗರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಯಾವಾಗಲೂ ವಾಹನ ಸಂಚಾರ ದಟ್ಟಣೆಯಿಂದ ತುಂಬಿ ಜಂಜಾಟ ಇರುತ್ತಿದ್ದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಪ್ಪಿಸಲು ಸಂಚಾರ ಪೊಲೀಸರು ಭಾನುವಾರ ಆಯೋಸಿದ್ದ ಹ್ಯಾಪಿಸ್ಟ್ರೀಟ್ ನಲ್ಲಿ ನಗರ ಜನತೆ ಮಿಂದೆದ್ದರು.

ಐಟಿ ಕಂಪನಿಗಳ ಉದ್ಯೋಗಿಗಳಿಗೆ ಹೋಗಿ ಕಾಲ ಕಳೆಯುತ್ತಿದ್ದ ಮಂದಿ ಭಾನುವಾರ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಕಾಲ ಕಳೆದರು. ಮಕ್ಕಳೊಂದಿಗೆ ರಸ್ತೆಯಲ್ಲಿ ಆಟವಾಡಿದರು. ಇಂಪಾದ ಸಂಗೀತಕ್ಕೆ ಸ್ಟೆಪ್ ಹಾಕಿದ್ದರು. ಮಹಿಳೆಯರು, ಮಕ್ಕಳೊಂದಿಗೆ ರಸ್ತೆಯಲ್ಲೇ ಸೆಲ್ಫಿ ತೆಗೆದುಕೊಂಡು ಫುಲ್ ಡ್ಯಾನ್ಸ್ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾರ್ವಜನಿಕರು, ಪೊಲೀಸರ ಈ ಕ್ರಮಕ್ಕೆ ನಿಜವಾಗಿಯೂ ಹ್ಯಾಟ್ಸ್ ಆಫ್ ಹೇಳಲೇಬೇಕು. ಪ್ರತಿ 15 ದಿನಕ್ಕೊಮ್ಮೆ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡರೆ ಬೆಂಗಳೂರಿನಲ್ಲೇ ಕಾಲ ಕಳೆಯಬಹುದು. ವಾಹನ ದಟ್ಟಣೆ ಇಲ್ಲದ ರಸ್ತೆಯನ್ನು ಬೆಂಗಳೂರಿನಲ್ಲಿ ನೋಡಲು ಸಾಧ್ಯವಾಗಿರಲಿಲ್ಲ. ಹ್ಯಾಪಿ ಸ್ಟ್ರೀಟ್ ಮೂಲಕ ಈಡೇರಿತು. ಇದೇ ರೀತಿ ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿಯೂ ಪೊಲೀಸರು ಓಪನ್ ಸ್ಟ್ರೀಟ್ ಆಯೋಜಿಸಿದ್ದರು. ಅಲ್ಲಿಯೂ ರಸ್ತೆಯಲ್ಲಿ ಸೈಕಲ್ ಸವಾರಿ, ಚೆಸ್, ಗ್ರೂಪ್ ಡ್ಯಾನ್ಸ್, ಯೋಗ ತಾಲೀಮು, ಗ್ರಾಮೀಣ ಸೊಗಡಿನ ಕುಂಟೆಬಿಲ್ಲೆ ಆಟವಾಡುತ್ತಾ ನಾಗರಿಕರು ಸಂತಸ ವ್ಯಕ್ತಪಡಿಸಿದರು.

SCROLL FOR NEXT