ಇಂಡಿ: ಸೋಲಾರ ಬೀದಿ ದೀಪ ಅಳವಡಿಸುವ ಕಾಮಗಾರಿಗೆ ಚಾಲನೆ
ಇಂಡಿ: ಪಟ್ಟಣದ ಪ್ರಮುಖ ವೃತ್ತಗಳು ಸೇರಿದಂತೆ ಸ್ಮಶಾನ ಹಾಗೂ ಬಡಾವಣೆಗಳಲ್ಲಿ ಸೋಲಾರ ದೀಪ ಅಳವಡಿಸಲು ರು. 19 ಲಕ್ಷ ಅನುದಾನ ಮಂಜೂರು ಆಗಿದೆ ಎಂದು ಪುರಸಭೆ ಅಧ್ಯಕ್ಷ ದೇವೇಂದ್ರ ಕುಂಬಾರ ಹೇಳಿದರು.
ಅವರು ಪುರಸಭೆಯ ಎಸ್‌ಎಫ್‌ಸಿ ಯೋಜನೆಯಲ್ಲಿ ಸೋಲಾರ ಬೀದಿ ದೀಪಗಳ ಅಳವಡಿಸುವ ಕಾಮಗಾರಿಗೆ ಬುಧವಾರ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದ ಅಗರಖೇಡ ರಸ್ತೆ, ಮುಸ್ಲಿಂ ಸಮುದಾಯದ ಸ್ಮಶಾನ, ಅಂಬೇಡ್ಕರ ನಗರ, ಅಂಬೇಡ್ಕರ ವೃತ್ತ,ಬಸವೇಶ್ವರ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಬಾಬು ಜಗಜೀವನರಾಮ ವೃತ್ತ, ಸೇವಾಲಾಲ ಸರ್ಕಲ್, ಮಹಾವೀರ ಸರ್ಕಲ್, ಶಿವಾಜಿ, ಸಂಗೋಳ್ಳಿ ರಾಯಣ್ಣ, ಬಸವೇಶ್ವರ ಮಂಗಲ ಕಾರ್ಯಾಲಯದ ಮುಂದೆ ಸೇರಿದಂತೆ ವಿವಿಧ ಕಡೆಗಳಲ್ಲಿ 56 ಸೋಲಾರ ದೀಪಗಳನ್ನು ಹಾಕಲು ಮಂಜೂರಾತಿ ಸಿಕ್ಕಿದೆ ಎಂದು ಅವರು ಹೇಳಿದರು.
ಪಟ್ಟಣದ ಸ್ಟೇಷನ್ ರಸ್ತೆ,ಅಗರಖೇಡ,ಸಿಂದಗಿ ರೋಡ,ಬಿಜಾಪೂರ ರಸ್ತೆಗಳ ಮಧ್ಯ ಅಲಂಕಾರ ದೀಪಗಳನ್ನು ಅಳವಡಿಸಲು ಕ್ರೀಯಾಯೋಜನೆ ಮಂಜೂರಾತಿ ಸಿಕ್ಕಿದೆ ಎಂದು ಅವರು ಹೇಳಿದರು. ಪಟ್ಟಣದ ಪ್ರಮುಖ ರಸ್ತೆಗಳ ಅಭಿವೃದ್ದಿಗಾಗಿ ಕೈಗೊಂಡಿರುವ ಕಾಂಕ್ರೇಟ್ ರಸ್ತೆ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ.ಬಸವೇಶ್ವರ ವೃತ್ತದ ಸುಂದರವಾಗಿ ಕಾಣಲು ಸುತ್ತಲೂ ಗ್ರೀಲ್ ಅಳವಡಿಸಲಾಗಿದೆ ಎಂದು ಅವರು ಹೇಳಿದರು. ಪುರಸಭೆ ಸದಸ್ಯ ಸುಭಾಷ ಪಾಟೀಲ, ಉಸ್ಮಾನಗಣಿ ಶೇಖ, ಶಾಂತು ಶಿರಕನಳ್ಳಿ, ಮಲ್ಲು ದೇವರ,ಮಲ್ಲಿಕಾರ್ಜುನ ಗುಡ್ಲ, ಪ್ರಕಾಶ ಐರೋಡಗಿ, ತಸ್ಲೀಮ ಕುಮಸಗಿ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.