ರಬಕವಿ ನಗರಸಭೆ: ಶೇ. 61 ಮತದಾನ
ರಬಕವಿ-ಬನಹಟ್ಟಿ: ನಗರಸಭೆ ಚುನಾವಣೆಗೆ ಗುರುವಾರ ಶೇ. 61ರಷ್ಟು ಮತದಾನವಾಗಿದೆ ಎಂದು ತಹಸೀಲ್ದಾರ ಗುರುಬಸಪ್ಪ ಮೇತ್ರಿ ತಿಳಿಸಿದ್ದಾರೆ. ಒಟ್ಟು 106 ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ 31 ವಾರ್ಡ್ಗಳಲ್ಲಿ, ಜೆಡಿಎಸ್ 20 ವಾರ್ಡಗಳಲ್ಲಿ, ಬಿಎಸ್ಆರ್ ಕಾಂಗ್ರೆಸ್ ಮತ್ತು ಕೆಜೆಪಿ ತಲಾ 4 ಮತ್ತು ಪಕ್ಷೇತರ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಬೀಳಗಿ ಪಪಂ: ಶೇ 79.69
ಬೀಳಗಿ: ಗುರುವಾರ ಇಲ್ಲಿಯ ಪಟ್ಟಣ ಪಂಚಾಯಿತಿ ಚುಣಾವಣೆಗೆ ನಡೆದ ಮತದಾನ ಶೇ79.69 ರಷ್ಟು ಆಗಿದೆ. ಮತದಾನ ಶಾಂತಿಯುತವಾಗಿ ನಡೆಯಿತು. ಮುಂಜಾನೆ 7 ಗಂಟೆಗೆ ಸರಿಯಾಗಿ ಆರಂಭವಾದ ಮತದಾನ, ಮುಂಜಾನೆಯಿಂದಲೇ ಚುರುಕಗೊಂಡು ಮಧ್ಯಾ ಹ್ನದ ಹೊತ್ತಿಗೆ ಮತದಾನ ಮಂದಗತಿ ಪಡೆಯಿತು. ಮಹಿಳೆಯರು,ಪುರುಷರು,ವೃದ್ಧರು ಸರದಿಯಲ್ಲಿ ನಿಂತ ಮತ ಚಲಾಯಿಸಿದರು. ಮಾ.11ರಂದು ಮತ ಎಣಿಕೆ ಸ್ಥಳೀಯ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಹುನಗುಂದ ಪಪಂ: ಶೇ. 73ರಷ್ಟು ಮತದಾನ
ಹುನಗುಂದ: ಹುನಗುಂದ ಪಪಂಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ. 73ರಷ್ಟು ಮತದಾನವಾಗಿದೆ. ಇಳಕಲ್ಲ ನಗರಸಭೆಗೆ ಶೇ. 72ರಷ್ಟು ಮತದಾನವಾಗಿದೆ ಎಂದು ತಹಸೀಲ್ದಾರ ಪಂಪನಗೌಡ ಮೇಲ್ಸೀಮೆ ತಿಳಿಸಿದರು. ಮತದಾನ ಶಾಂತಿಯುತವಾಗಿತ್ತು. ಬೆಳಗ್ಗೆಯೇ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು. ಒಂದೆರಡು ಕಡೆ ವಿದ್ಯುನ್ಮಾನ ಮತಯಂತ್ರಗಳು ಆರಂಭದಲ್ಲಿ ಕಿರಿಕ್ ಮಾಡಿದರೂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಕೂಡಲೇ ಸರಿಪಡಿಸಲಾಯಿತು.
ಒಬ್ಬೊಬ್ಬ ಮತದಾರರ ಹೆಸರು 3 ಬಾರಿ ಮುದ್ರಣ
ಜಮಖಂಡಿ: ಇಲ್ಲಿನ ವಾರ್ಡ್ 2ರ ಭಾಗ ಸಂಖ್ಯೆ 4ರಲ್ಲಿ ಮತದಾರರ ಪಟ್ಟಿಯಲ್ಲಿ ಕ್ರಮಸಂಖ್ಯೆ 554 ರಿಂದ 559 ರವರೆಗೆ ಇಬ್ಬರದೇ ಮತದಾರರ ಹೆಸರು ಇದೆ! ಒಬ್ಬೊಬ್ಬರ ಹೆಸರು ಮೂರು ಬಾರಿ ಮುದ್ರಣವಾಗಿದೆ. ಹೀಗೆ ಮೂರು ಕಡೆ ಮುದ್ರಣವಾಗಿರುವುದು ನಗರದ ಡಾ.ಮಹೇಶ ಪಾಟೀಲ ಹಾಗೂ ಅವರ ಪತ್ನಿಯ ಹೆಸರು. ಡಾ. ಪಾಟೀಲ ಅವರ ಹೆಸರು. ಆದರೆ ಅವರ ಪತ್ನಿಯ ಹೆಸರು ಮಾತ್ರ ಒಂದು ಕಡೆ ಅನುಪಮಾ, ಇನ್ನೊಂದು ಕಡೆ ಅನ್ನಪೂರ್ಣ, ಮತ್ತೊಂದು ಕಡೆ ಅನುಪವ್ವ ಹೀಗೆ ಮೂರು ಬಾರಿ ಪ್ರತ್ಯೇಕವಾಗಿ ಮುದ್ರಣಗೊಂಡಿದೆ. ಈ ಕುರಿತು ಡಾ.ಪಾಟೀಲ ಅವರು ಅನೇಕ ಬಾರಿ ಕಂದಾಯ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದ್ದರೂ ಮತದಾರ ಪಟ್ಟಿಯಲ್ಲಿ ತಿದ್ದುಪಡಿಯಾಗದೇ ಹಾಗೇ ಉಳಿದುಕೊಂಡಿವೆ ಎಂದು ಪಾಟೀಲರು ದೂರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.