ಕುಂದುತ್ತಿರುವ ಹಿರಿಯರ ಮೇಲಿನ ಗೌರವ
ಬಾಗಲಕೋಟೆ: ದೇಶದಲ್ಲಿ ಹಿರಿಯರಿಗೆ ಸಿಗುವ ಗೌರವ ಕಡಿಮೆಯಾಗುತ್ತಿದೆ ಎಂದು ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ಮೀನಾ ಚಂದಾವರಕರ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ವೀರಭದ್ರೇಶ್ವರ ಸಾಂಸ್ಕೃತಿಕ ಕಲ್ಯಾಣ ಮಂಟಪದಲ್ಲಿ ನಗರದ ಸುಮಾರು 28 ಮಹಿಳಾ ಸಂಘಗಳ ಆಶ್ರಯದ್ಲಲಿ ಶನಿವಾರ ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಈಚೇಗೆ ಹಿರಿಯರ ಮೇಲಿನ ಕಾಳಜಿ ಕುಂದತೊಡಗಿದ್ದು, ಅವರನ್ನು ನಿರ್ಲಕ್ಷಿಸಲಾಗುತ್ತಿದೆ. ಹಿರಿಯರನ್ನು ಗೌರವಿಸಿದರೆ ಮುಂದೆ ಸಮಾಜದ ಗೌರವ ದೊರಕುತ್ತದೆ. ವಿದೇಶಿ ಸಂಸ್ಕೃತಿ ದೇಶದಲ್ಲಿ ವ್ಯಾಪಕವಾಗುತ್ತಿರುವುದು ಸಮಾಜದ ಬೆಳವಣಿಗೆಗೆ ಅನಾರೋಗ್ಯಕರವಾದದ್ದು ಎಂದು ಹೇಳಿದರು.
ಡಿ. 16ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ ನಡೆದ ದಿನದಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲು ದಿನಕ್ಕೆ ಮೂರ್ನಾಲ್ಕು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೆ ಇಂದು ಪ್ರತಿದಿನ ಸರಿ ಸುಮಾರು ಹತ್ತಾರು ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದು ಆತಂಕಕಾರಿ ಎಂದರು.
ಮಹಿಳಾ ಅಬಲೆ ಅಲ್ಲ. ಆಕೆ ಸಮಾಜದ ನಿಜವಾದ ಶಕ್ತಿ. ಆಕೆಯನ್ನು ದುರ್ಬಲವೆಂದು ಪರಗಣಿಸಲಾಗುತ್ತಿರುವುದು ವಿಷಾದಕರು. ಆಕೆಗೆ ಸರಿಯಾದ ಮಾರ್ಗದಲ್ಲಿ ಶಿಕ್ಷಣ ನೀಡಿದರೆ ಸಮಾಜದ ಎರಡು ಕಣ್ಣುಗಳಾಗಿ ಜೀವನ ನಡೆಸಬಲ್ಲಳು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ, ಪತ್ರಿಕೋದ್ಯಮಿ, ಕಲಾವಿದೆ ಹಾಗೂ ಯೋಗಪಟು ಡಿ.ಎಸ್. ಶಮಾಂತ ಮಾತನಾಡಿ, ಕೇಂದ್ರ ಸರ್ಕಾರ ಮಹಿಳೆಯರ ಅಭಿವೃದ್ಧಿ ಹಾಗೂ ಸಂರಕ್ಷಣೆ ನೆಪದಲ್ಲಿ ಬಜೆಟ್ದಲ್ಲಿ ಹಣ ಮೀಸಲಿರಿಸಿದ್ದಾರೆ. ಆದರೆ ಮಹಿಳೆಯರಿಗೆ ಅದರಿಂದ ಯಾವುದೇ ತೆರನಾದ ಲಾಭವಿಲ್ಲ. ಮಹಿಳೆಯರಿಗೆ ಹಣ ಮೀಸಲಿಟ್ಟಿದ್ದರಿಂದ ದೇಶದಲ್ಲಿ ಮತ್ತಷ್ಟು ಭ್ರಷ್ಟಾಚಾರ ನಡೆಯುತ್ತಿದೆ ವಿನಃ ಯಾವುದೇ ರೀತಿಯ ಸೌಲಭ್ಯಗಳು ಸಿಗುವುದು ಅನುಮಾನ. ಅದು ನಿಜವಾದ ಫಲಾನುಭವಿಗಳಿಗೆ ಕೈಗೆ ಸೇರದೆ, ಅನರ್ಹರ ಪಾಲಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಜುಳಾತಾಯಿ ಅಂಗಡಿ, ಕಲಾವತಿ ರಾಜೂರ, ಜ್ಯೋತಿ ಕಿರಣ ದಾಸ, ಶಾಂತಾದೇವಿ ಶಾಬಾದಿ, ವೀಣಾ ಮೋಟಗಿ ರಾಜೇಶ್ವರಿ ಚರಂತಿಮಠ ಸೇರಿದಂತೆ ನಗರದ ಮಹಿಳಾ ಮಂಡಳಗಳಾದ ಅಕ್ಕನ ಬಳಗ, ಭಗನಿ ಸಮಾಜ, ವಾಸವಿ ಮಹಿಳಾ ಮೆಡಳ, ಪ್ರತಿಭಾ ಯುವತಿ ಮಂಡಳ, ಶ್ರೀಲಕ್ಷ್ಮೀ ಮಹಿಳಾ ಮೆಡಳ, ಶಿವದಾಸಿಮಯ್ಯ ಮಹಿಳಾ ಮಂಡಳ, ಕಾಳಿಕಾ ಮಹಿಳಾ ಮಂಡಳ, ಕೆಂಚಮ್ಮ ಮಹಿಳಾ ಮಂಡಳ ಸೇರಿದಂತೆ ಇನ್ನಿತರ ಮಹಿಳಾ ಮಂಡಳದ ಪದಾಧಿಕಾರಿಗಳು ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.