ಮಕ್ಕಳ ಜ್ಞಾನ ವಿಕಾಸಕ್ಕೆ ನಲಿ-ಕಲಿ: ಮಡಿವಾಳರ
ಜಮಖಂಡಿ: ಸಮಾಜ ಶಿಕ್ಷಕರ ಮೇಲೆ ಬಹಳಷ್ಟು ವಿಶ್ವಾಸವನ್ನಿಟ್ಟುಕೊಂಡಿದ್ದು, ಶಿಕ್ಷಕರು ಉತ್ತಮ ಸೇವೆ ಸಲ್ಲಿಸಿ ಸಮಾಜದ ಋಣ ತೀರಿಸಬೇಕೆಂದು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎ.ಎಂ. ಮಡಿವಾಳರ ಹೇಳಿದರು.
ಶನಿವಾರ ಇಲ್ಲಿನ ಬಸವಭವನದಲ್ಲಿ ಆಯೋಜಿಸಿದ್ದ ನಲಿ-ಕಲಿ ಶಿಕ್ಷಕರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತ್ಯಾಗ, ಮನೋಭಾವವನ್ನು ಎಲ್ಲ ಶಿಕ್ಷಕರೂ ಮೂಡಿಸಿಕೊಳ್ಳಬೇಕು. ಶಿಕ್ಷಕರಲ್ಲಿನ ಹೊಸ-ಹೊಸ ವಿಚಾರ-ಚಿಂತನೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡು ಮಕ್ಕಳಿಗೆ ಪಾಠ ಬೋಧನೆ ಮಾಡಬೇಕು ಎಂದರು.
ಪತ್ರಕರ್ತ ಡಾ.ಟಿ.ಪಿ. ಗಿರಡ್ಡಿ, ಅಧ್ಯಕ್ಷತೆ ವಹಿಸಿದ್ದ ಬಿಈಓ ಅನಿಲ್ ಗಂಗಾಧರ ಮಾತನಾಡಿದರು. ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಹೂಗಾರ, ಎನ್.ಆರ್. ಬಬಲೇಶ್ವರ, ಎಂ.ಎನ್. ಚೌರ, ಜಿಲ್ಲಾ ನಲಿ-ಕಲಿ ಕಾರ್ಯದರ್ಶಿ ರವಿ ಉಪ್ಪಾರ,
ರಾಜು ಹಿರೇಮಠ ವೇದಿಕೆಯಲ್ಲಿದ್ದರು. ಲಕ್ಷ್ಮೀ ಬಡಿಗೇರ ಪ್ರಾರ್ಥಿಸಿದರು. ವಸಂತ ರಾಠೋಡ ಸ್ವಾಗತಿಸಿದರು. ಡಿ.ಐ. ಪಂಚಗಟ್ಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಭು ಕಾಯಿ, ಮಲ್ಲು ಗೆಡ್ಡೆನ್ನವರ ನಿರೂಪಿಸಿದರು. ಎಸ್.ಎನ್. ಮಣ್ಣೂರು ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.