ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ದಿಂದ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಾಯ
ಮುಧೋಳ: ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಮುಧೋಳ ಶಾಖೆ ವತಿಯಿಂದ ಪಟ್ಟಣದ ವಿವಿಧ ಸರ್ಕಾರಿ ಶಾಲೆಯ 1ರಿಂದ 12ನೇ ತರಗತಿಯ ಪ್ರತಿಭಾವಂತ 12 ವಿದ್ಯಾರ್ಥಿನಿಯರಿಗೆ ತಲಾ ರು. 1 ಸಾವಿರದಂತೆ ಚೆಕ್ ನೀಡಿ ಪ್ರೋತ್ಸಾಹಿಸಿರುವುದಕ್ಕೆ ಶಿಕ್ಷಣ ಇಲಾಖೆ ಹೈದ್ರಾಬಾದ್ ಬ್ಯಾಂಕ್ಗೆ ಋಣಿಯಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಮಠಪತಿ ಹೇಳಿದರು.
ಶನಿವಾರ ಇಲ್ಲಿನ ಆದರ್ಶ ವಿದ್ಯಾಲಯದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಕೊಡಮಾಡಿದ ಚೆಕ್ಗಳನ್ನು ವಿತರಿಸಿ ಅವರು ಮಾತನಾಡಿದರು.
ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಮುಧೋಳ ಇದರ ಶಾಖಾಧಿಕಾರಿ ಕೆ.ಆರ್. ಪ್ರಕಾಶ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ತಾವು ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಬ್ಯಾಂಕ್ನಿಂದ ನೀಡಿದ ಪ್ರೋತ್ಸಾಹ ಹಣದಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕೆ ಅವಶ್ಯವಿದ್ದ ಸಾಮಗ್ರಿಗಳನ್ನು ಖರೀದಿಸುವಂತೆ ಸಲಹೆ ನೀಡಿದರು.
ವಿವಿಧ ಶಾಲೆಯ 1ರಿಂದ ದ್ವಿತೀಯ ಪಿಯುಸಿ ತರಗತಿಯ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಪವಿತ್ರಾ ಕಟ್ಟಿಮನಿ, ಚೈತ್ರಾ ತಾವರಗೇರಿ, ಶ್ವೇತಾ ಪರೀಟ, ಸಹನಾ ಕುಲಕರ್ಣಿ, ಅಶ್ವಿನಿ ಮಳಲಿ, ಸುಷ್ಮಾ ಅರಳಿಕಟ್ಟಿ, ಭಾಗತಿ ಲಗಳಿ, ಪ್ರಿಯಂಕಾ ನಿಲಜಗಿ, ಲಕ್ಷ್ಮೀಭಾಯಿ ಹೂವುರಕರ, ಶಮಶಾದಿ ಶೇಖ, ಸುಧಾ ಸಬರದ, ನಾಗವ್ವ ಹಕ್ಕೆನ್ನವರ ಅವರಿಗೆ ತಲಾ ರು. 1 ಸಾವಿರ ಮೌಲ್ಯದ ಚೆಕ್ಗಳನ್ನು ವಿತರಿಸಲಾಯಿತು. ಆರ್.ಎಸ್. ಚೌಧರಿ, ಸಾಬು ಬಿ.ಎಂ ವೇದಿಕೆ ಮೇಲೆ ಉಪಸ್ಥಿತರಿದ್ದರು, ಲಕ್ಷ್ಮೀ ಪೂಜಾರ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಕಟ್ಟಿ ನಿರೂಪಿಸಿ, ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.