ಇಂದು ಕೃತಿ ಬಿಡುಗಡೆ
ಬಾಗಲಕೋಟೆ: ಪತ್ರಕರ್ತ, ಕವಿ ಸುಶೀಲೇಂದ್ರ ಕುಂದರಗಿ ಅವರ ಮಧ್ಯಾರಾಧನೆ ಅಮಲು ಪದ್ಯಗಳ ಕೃತಿ ಲೋಕಾರ್ಪಣೆ ಭಾನುವಾರ ಮಾ. 17ರಂದು ಬೆಳಗ್ಗೆ 10.30ಕ್ಕೆ ಬವಿವಿ ಸಂಘದ ಮಿನಿ ಸಭಾಂಗಣದಲ್ಲಿ ನಡೆಯಲಿದೆ. ಸಾಹಿತಿ, ಚಿಂತಕಿ ವೀಣಾ ಬನ್ನಂಜೆ ಕೃತಿ ಬಿಡುಗಡೆ ಮಾಡುವರು. ಪ್ರೊ. ಕೊಟ್ಟೂರ ನಿರಂಜನ ಮೂರ್ತಿ ಕೃತಿ ಪರಿಚಯಿಸುವರು. ಕವಿ ಆನಂದ ಜುಂಜರವಾಡ ಅಧ್ಯಕ್ಷತೆ ವಹಿಸುವರು. ಶಾಸಕ ವೀರಣ್ಣ ಚರಂತಿಮಠ, ಎಸ್.ಪಿ. ಈಶ್ವರಚಂದ ವಿದ್ಯಾಸಾಗರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಸಾಹಿತಿ ಎಂ.ಸಿ. ಯಾಳವಾರ ಪಾಲ್ಗೊಳ್ಳುವರು.
ನವಚಂಡಿ ಹೋಮ
ಅಮೀನಗಡ: ಸಮೀಪದ ಗೂಡೂರು(ಎಸ್.ಸಿ.) ಗ್ರಾಮದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ, ಅಂಬಾಭವಾನಿ ದೇವಿಯ ಪ್ರಾಣ ಪ್ರತಿಷ್ಠಾಪನೆಯ 36ನೇ ವಾಷಿಕೋತ್ಸವದ ನಿಮಿತ್ತ ಶನಿವಾರ ಇಲ್ಲಿನ ಟೀಕೂಬಾಯಿ ಷಣ್ಮಖಸಾ ಪಾಟೀಲ ಕಲ್ಯಾಣ ಮಂಟಪದಲ್ಲಿ ನವಚಂಡಿ ಹೋಮ ಜರುಗಿತು. ಸೂಡಿ ಗ್ರಾಮದ ವೇದಮೂರ್ತಿ ಗಣಪತಿ ಭಟ್ಟ, ವಿರೂಪಾಕ್ಷ ಭಟ್ಟ , ವೆಂಕಟೇಶ ಭಟ್ಟ, ಕೃಷ್ಣ ಭಟ್ಟ, ಕೃಷ್ಣಾ ಜೋಶಿ, ಸಂಜೀವ ಜೋಶಿ, ಕಿರಣ ಜೋಶಿ, ಗುಂಡಭಟ್ಟ ಜೋಶಿ, ಶ್ರೀಧರ ದೇಶಪಾಂಡೆ, ಕೃಷ್ಣಾಜಿ ದೇಶಪಾಂಡೆ, ರಾಮಣ್ಣ ಮುದಗಲ್, ರಾಮಚಂದ್ರ ರಾಜ ಪುರೋಹಿತ, ಸಂಜೀವ ಗುಮಾಸ್ತೆ, ನೀಲಕಂಠ ಜೋಶಿ ಮುಂತಾದವರು ಪಾಲ್ಗೊಂಡು ನವಚಂಡಿ ಹೋವ ನೆರವೇರಿಸಿದರು. ಶ್ರೀಕಾಂತಸಾ ಸಿಂಗ್ರಿ, ಮೋತಿಲಾಲಾ ದಲಭಂಜನ, ಹೇಮಾಸಾ ದಲಭಂಜನ, ರಘುನಾಥಸಾ ಪವಾರ, ರುಕ್ಮಾಸಾ ಹೊಸಮನಿ, ನಾರಾಯಣಸಾ ಪಾಟೀಲ, ದಾಮೋಧರ ರಾಯಬಾಗಿ, ರಾಜು ಹಾದೀಮನಿ, ಮೋಹನ್ ಬಸವಾ, ಎಂ.ಎಸ್. ಪಾಟೀಲ್, ಸುನೀತಾಬಾಯಿ ಧಲಭಂಜನ ಇದ್ದರು.
ರಸ್ತೆ ಕಾಮಗಾರಿಗೆ ಪೂಜೆ
ಮುಧೋಳ: ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆಯಿಂದ ಮಲ್ಲಮ್ಮ ನಗರ ಮತ್ತು ಜಯನಗರ ಬಡಾವಣೆಗೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶುಕ್ರವಾರ ಸಚಿವ ಗೋವಿಂದ ಕಾರಜೋಳ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಲೋಕಣ್ಣ ಕತ್ತಿ, ಪುರಸಭೆ ಮುಖ್ಯಾಧಿಕಾರಿ ರಮೇಶ ಸುಣಗಾರ, ಅಭಿಯಂತರ ಲಕ್ಷ್ಮಣ ಜೋಗಿ, ಪುರಸಭೆ ಮಾಜಿ ಸದಸ್ಯ ದುಂಡಪ್ಪ ಇಟಕನ್ನವರ, ಆಶ್ರಯ ಸಮಿತಿ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ, ಎಸ್.ಎಸ್. ಅಕ್ಕಿಮರಡಿ, ಸುರೇಶ ರಾಮತೀರ್ಥ, ರಾಜು ಪಾಲೋಜಿ ಇದ್ದರು.
ಮೇವಿನ ಬಣವಿ ಭಸ್ಮ
ಅಮೀನಗಡ: ಬೆಂಕಿ ತಗುಲಿ 16ಕ್ಕೂ ಹೆಚ್ಚು ಮೇವಿನ ಬಣವೆಗಳು ಭಸ್ಮಗೊಂಡ ಘಟನೆ ಸಮೀಪದ ಶೂಲೀಭಾವಿ ಗ್ರಾಮದಲ್ಲಿ ಶನಿವಾರ ಜರುಗಿದೆ. ಸ್ಥಳಕ್ಕೆ ಇಳಕಲ್ ಹಾಗೂ ಬಾಗಲಕೋಟೆಯಿಂದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು. ಗ್ರಾಮದಲ್ಲಿ 2ನೇ ಬಾರಿ ಇಂತಹ ಘಟನೆ ನಡೆದಿದೆ. ಸ್ಥಳಕ್ಕೆ ಹುನಗುಂದ ತಹಸೀಲ್ದಾರ್ ಪಂಪನಗೌಡ ಭೇಟಿ ನೀಡಿ ಪರಿಶೀಲಿಸಿದರು ಮತ್ತು ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.