ಮುಧೋಳ: ತ್ಯಾಜ್ಯ ಸಂಗ್ರಹಿಸುವ ಬಕೆಟ್ ಬಿಡುಗಡೆ
ಮುಧೋಳ: ಮುಧೋಳ ಪುರಸಭೆಯ ಎಲ್ಲ ಮನೆಗಳಿಗೆ ಘನತ್ಯಾಜ್ಯ ಹಾಗೂ ದ್ರವತ್ಯಾಜ್ಯ ವಸ್ತು(ಕಸ) ಸಂಗ್ರಹಿಸುವ ಬಕೇಟ್ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಜಮಖಂಡಿ ಪುರಸಭೆ ಆಡಳಿತಾಧಿಕಾರಿ, ಜಮಖಂಡಿ ಉಪ-ವಿಭಾಗಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.
ಇತ್ತೀಚೆಗೆ ಮುಧೋಳ ಪುರಸಭೆ ಸಭಾಂಗಣದಲ್ಲಿ ಕಸ ಸಂಗ್ರಹಿಸುವ ಬಕೇಟ್ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಥಮ ಹಂತದಲ್ಲಿ ನಗರದ 2500 ಕುಟುಂಬಗಳಿಗೆ ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಿಸುವ ಎರಡು ಪ್ರತ್ಯೇಕ ಬಕೇಟ್ಗಳನ್ನು ಉಚಿತವಾಗಿ ನೀಡಲಾಗುವುದು. ದ್ವೀತಿಯ ಹಂತದಲ್ಲಿ ಮತ್ತೆ 2500 ಕುಟುಂಬಗಳಿಗೆ ಬಕೇಟ್ಗಳನ್ನು ನೀಡಲಾಗುವುದು. ಬಾಕಿ ಉಳಿದ ಕುಟುಂಬಗಳಿಗೆ 3ನೇ ಹಂತದಲ್ಲಿ ನೀಡಲಾಗುವುದು ಎಂದರು. ಯೋಜನಾ ಉಪನಿರ್ದೇಶಖ ಎಸ್.ಎಸ್. ಸೋಮನಾಳ, ಮುಖ್ಯಾಧಿಕಾರಿ ರಮೇಶ ಸುಣಗಾರ, ವ್ಯವಸ್ಥಾಪಕಿ ಭಾರತಿ ಜೋಶಿ, ಅಶೋಕ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.