ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿಯಲ್ಲಿ ಆರಂಭ

Srinivasa Murthy VN
Updated On : 2 Aug 2013, 1:33 am

ದೇವನಹಳ್ಳಿ: ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾಗಿರುವ ಶಾಲಾ ಮಕ್ಕಳಿಗಾಗಿ ಹಾಲು ನೀಡುವ ಕ್ಷೀರ ಭಾಗ್ಯ ಯೋಜನೆಗೆ ಶಾಸಕರಾದ ಪಿಳ್ಳಮುನಿಶಾಮಪ್ಪ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ವಿಶ್ವನಾಥಪುರ ಜೂನಿಯರ್ ಕಾಲೇಜಿನಲ್ಲಿ  ಗುರುವಾರ ಚಾಲನೆ ನೀಡಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ಶಾಸಕರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಸಾಮಾನ್ಯವಾಗಿ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬದವರ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಅವರ ಆರೋಗ್ಯದಿಂದಿರಲು ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದ್ದು ದೇವನಹಳ್ಳಿ ತಾಲೂಕಿನಲ್ಲಿ ಆರು ಸಾವಿರ ಮಂದಿ ಅಂಗನವಾಡಿ ಮಕ್ಕಳು ಹಾಗೂ ಒಂದರಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ 16221  ವಿದ್ಯಾರ್ಥಿಗಳಿದ್ದು ಪ್ರತಿಯೊಬ್ಬರಿಗೂ 150 ಮಿಲಿ ಲೀಟರ್ ಹಾಲು ವಿತರಿಸಲಾಗುತ್ತದೆ ಎಂದರು. ಶಾಲೆಗಳಲ್ಲಿ ಹಾಲು ಶೇಖರಣೆ ಮಾಡುವ ಪಾತ್ರೆಗಳು ಶುಚಿಯಿಂದ ಇರಬೇಕು. ಇದರ ಬಗ್ಗೆ ಮುಖ್ಯ ಶಿಕ್ಷಕರು ಗಮನ ಕೊಡಬೇಕು ಎಂದರು.   
ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಧಿಕಾ ತ್ಯಾಗರಾಜ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಮುನಿಶಾಮಯ್ಯ, ಉಪಾಧ್ಯಕ್ಷರಾದ ಪಟಾಲಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಸಿ.ಮುನಿರಾಜು, ಪುರಸಭಾ ಸದಸ್ಯರುಗಳಾದ ಜಿ.ಎ.ರವೀಂದ್ರ, ಸೊಸೈಟಿ ಕುಮಾರ್, ನರಸಿಂಹಮೂರ್ತಿ, ಗೋಪಾಲ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ನಂಜಪ್ಪ, ಶಾಲೆಯ ಪ್ರಭಾರಿ ಪ್ರಾಂಶುಪಾಲರಾದ ನಂಜಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement