ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದಾಬಸ್‌ಪೇಟೆಯಲ್ಲಿ ಆರೋಗ್ಯ ಶಿಬಿರ ಯಶಸ್ವಿ

Srinivasa Murthy VN
Updated On : 3 Aug 2013, 12:41 pm

ಕ.ಪ್ರ.ವಾರ್ತೆ ನೆಲಮಂಗಲ ಆ.2
ಜನತೆಯ ಆರೋಗ್ಯ ಕಾಪಾಡುವಲ್ಲಿ ಜನತೆಯ ಸಹಕಾರ ದೊರೆತಾಗ ಮಾತ್ರ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಎಲ್.ಎಂ.ವಿಂಡ್ ಪವರ್‌ನ ವ್ಯವಸ್ಥಾಪಕ ಮಾದೇವಮೂರ್ತಿ ತಿಳಿಸಿದರು.
ಅವರು ಶುಕ್ರವಾರ ತಾಲೂಕಿನ ದಾಬಸ್‌ಪೇಟೆಯ ಸಿದ್ದಲಿಂಗೇಶ್ವರ ಸಮುದಾಯ ಭವನದಲ್ಲಿ ಎಲ್.ಎಂ.ವಿಂಡ್ ಪವರ್ ಕಂಪನಿ ಹಾಗೂ ಸೋಂಪುರ ಗ್ರಾ.ಪಂ ಸಂಯೋಗದಲ್ಲಿ ನಡೆದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ  ಮಾತನಾಡುತ್ತಾ ಸುತ್ತಮುತ್ತಲಿನ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸುವುದು ನಮ್ಮ ಸೇವೆಯಾಗಿದೆ ಎಂದರು.
ಶಿಬಿರದಲ್ಲಿ ಸುಮಾರು 400ಕ್ಕೂ ಹೆಚ್ಚು ರೋಗಿಗಳು ನೇತ್ರ ಪರೀಕ್ಷೆ, ಸಕ್ಕರೆ ಕಾಯಿಲೆ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಹಾಗೂ ಹೃದಯ ಸಂಬಂಧ ರೋಗಗಳನ್ನು ಚಿಕಿತ್ಸೆಗೆ ಒಳಪಡಿಸಲಾಯಿತು.
ಕಂಪನಿ ಸೀನಿಯರ್ ಮ್ಯಾನೇಜರ್ ಫಣಿಶಂಕರ್, ದೃಷ್ಟಿ ನೇತ್ರಾಲಯದ ಡಾ.ರಾಜೇಶ್‌ಬಾಬು, ಡಾ.ರಮೇಶ್, ಡಾ.ವೆಂಕಟೇಶ್, ಸೋಂಪುರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಎಂ.ಉಮಾಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement