ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಪಿಎಲ್ ಕಾರ್ಡಿನವರಿಗೂ ಕನಿಷ್ಠ 2 ಲೀಟರ್ ಸೀಮೆಎಣ್ಣೆ ನೀಡಲು ಆಗ್ರಹ

Srinivasa Murthy VN
Updated On : 4 Aug 2013, 12:24 pm

ದೇವನಹಳ್ಳಿ: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡಿನವರಿಗೆ ಪಡಿತರ ಧಾನ್ಯ ಅಲ್ಲದೆ ಸೀಮೆ ಎಣ್ಣೆಯನ್ನು ಸಹ ನೀಡುತ್ತಿದ್ದು ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಕನಿಷ್ಠ ಎರಡು ಲೀಟರ್ ಸೀಮೆಎಣ್ಣೆಯನ್ನಾದರೂ ನೀಡಬೇಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಬೈಚಾಪುರ ಬಿ.ಎಂ.ನಾರಾಯಣಸ್ವಾಮಿ ಗ್ರಾಮ ಸಭೆಯಲ್ಲಿ ಶಾಸಕರಿಗೆ ಒತ್ತಾಯ ಮಾಡಿದರಲ್ಲದೆ ಎಪಿಎಲ್ ಮತ್ತು ಬಿಪಿಎಲ್ ಕಾರ್ಡಿರುವ ಬಹುತೇಕ ಮನೆಗಳವರು ಗ್ಯಾಸ್ ಬಳಸುತ್ತಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ದೇವನಹಳ್ಳಿ ತಾಲೂಕು ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ 2013-14 ನೇ ಸಾಲಿನ ಮೊದಲನೇ ಹಂತದ ಗ್ರಾಮಸಭೆ ಅಣ್ಣೇಶ್ವರ ಗ್ರಾಮಪಂಚಾಯಿತಿ ಬಳಿ ಶನಿವಾರ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿ ಪ್ರತಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಾಸವಾಗಿರುವ ಎಲ್ಲ ಗ್ರಾಮಸ್ಥರಿಗೂ ಸರ್ಕಾರದ ಸೌಲಭ್ಯಗಳು ದೊರಕುವಂತಾಗಲು ಅಧಿಕಾರಿಗಳ ಪಾತ್ರ ಮುಖ್ಯವಾಗಿರುತ್ತದೆ ಎಂದರು. ಇಂತಹ ಗ್ರಾಮ ಸಭೆಗಳ ಮೂಲಕ ಪಂಚಾಯಿತಿ ಅಧಿಕಾರಿಗಳಿಗೆ ಅಲ್ಲದೆ ಆಡಳಿತ ಮಂಡಳಿಯವರಿಗೆ  ನಾಗರಿಕರ ಸಮಸ್ಯೆಗಳು ನೇರವಾಗಿ ಗೊತ್ತಾಗುತ್ತದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನಗಳು ಗ್ರಾಮಸ್ಥರಿಗೆ ತಲುಪಬೇಕು ನಾಗರಿಕರ ಪ್ರಮುಖ ಸಮಸ್ಯೆಗಳ ಬಗ್ಗೆ ಸರ್ಕಾರದಲ್ಲಿ ಚರ್ಚಿಸುವುದಾಗಿ ತಿಳಿಸಿದರು.
 ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಎ.ಚಂದ್ರಶೇಖರ್ ವಹಿಸಿ ನಮ್ಮ ಪಂಚಾಯಿತ ದೇವನಹಳ್ಳಿ ತಾಲೂಕಿನಲ್ಲಿಯೇ ಮಾದರಿ ಪಂಚಾಯಿತಿಯಾಗಿದೆ. ಪಂಚಾಯಿತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ತಿಳಿಸಿ ಪ್ರತಿ ಗ್ರಾಮದಲ್ಲೂ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ, ಪ್ರತಿ ಮನೆಗೂ ನೀರಿನ ಸಂಪರ್ಕ, ಏಳು ಗ್ರಾಮಕ್ಕೆ ಓವರ್ ಹೆಡ್ ಟ್ಯಾಂಕ್, ಒಳಚರಂಡಿ ವ್ಯವಸ್ಥೆ ಕೌಶಲ್ಯ ತರಬೇತಿ ಕೇಂದ್ರದ ಬಗ್ಗೆ ತಿಳಿಸಿ ಶಾಸಕರ ಸಹಕಾರ ಕೋರಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಧಿಕಾ ತ್ಯಾಗರಾಜ್, ಉಪಾಧ್ಯಕ್ಷರಾದ ಪಟಾಲಪ್ಪ, ಸದಸ್ಯರಾದ ಅಂಬುಜಾಕ್ಷಿ ಚಂದ್ರಶೇಖರ್, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪಿ.ಮಂಜುನಾಥ್, ರತ್ನಮ್ಮ ಉಪಾಧ್ಯಕ್ಷರಾದ ಲಕ್ಷ್ಮಮ್ಮ ಉಪಸ್ಥಿತರಿದ್ದರು. ಈ ಸಭೆಯಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ವಿದ್ಯಾಭ್ಯಾಸಕ್ಕೆ ನೆರವು, ತಮಟೆಗಳನ್ನು ಶಾಸಕರು ವಿತರಣೆ ಮಾಡಿದರು. ಪಿಡಿಒ ಕುಮಾರ್ ಸ್ವಾಗತ ಕೋರಿದರು,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement