ಗ್ರಾಮ ಸಭೆಗಳಿಗೆ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು: ಶಾಸಕ ಪಿಳ್ಳಮುನಿಶಾಮಪ್ಪ
ವಿಜಯಪುರ: ಎಲ್ಲಾ ಗ್ರಾಮಸಭೆಗಳಿಗೂ ಕೂಡ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು. ಇಲ್ಲವಾದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಕ್ಷೇತ್ರ ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ಅವರು ಪಟ್ಟಣ ಸಮೀಪದ ಯಲಿಯೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಏರ್ಪಡಿಸಿದ್ದ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಗ್ರಾಮ ಸಭೆಗಳಲ್ಲಿ ಎಲ್ಲಾ ಜನ ಪ್ರತಿನಿಧಿಗಳು ಅಧಿಕಾರಿಗಳು ಸಾರ್ವಜನಿಕರು ಒಂದೇ ಸೂರಿನಡಿಯಲ್ಲಿ ಸಭೆ ಸೇರುವುದರಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಜನ ಸಾಮಾನ್ಯರ ಕುಂದುಕೊರತೆಗಳನ್ನು ಸ್ಥಳದಲ್ಲೇ ಬಗೆಹರಿಸುವುದರೊಂದಿಗೆ ಸರ್ಕಾರದದಿಂದ ಸಿಗುವಂತಹ ಎಲ್ಲಾ ತರಹದ ಸವಲತ್ತುಗಳನ್ನು ಸಭೆಯಲ್ಲಿ ತಿಳಿಸಿಕೊಡಬಹುದಾಗಿದೆ ಎಂದರು.
ಈ ಸಭೆಗಳನ್ನು ರಾಜ್ಯಾದ್ಯಂತ ನಡೆಸಲು ಸರ್ಕಾರ ತೀರ್ಮಾನಿಸಿದ್ದು ಸಭೆಗಳನ್ನು ನಡೆಸುವುದು ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿ ಜನಪ್ರತಿನಿಧಿಗಳ ಜವಾಬ್ದಾರಿಯಾಗಿರುತ್ತದೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಬಿ.ರಾಜಣ್ಣ ಮಾತನಾಡಿ ಹಾರೋಹಳ್ಳಿ ಗ್ರಾಮವೂ ಜಿಲ್ಲೇಯಲ್ಲೇ ಹಾಲು ಉತ್ಪಾದನಾ ಸಾಮಥ್ಯದಲ್ಲಿ ಮೂಂಚೂಣಿಯಲ್ಲಿದ್ದು, ಇಲ್ಲಿ ರೇಷ್ಮೇ ಬೆಳೆಗೂ ಹೆಚ್ಚಿನ ಆದ್ಯತೆಯಿದೆ.
ಇದರ ಬಗ್ಗೆ ತಾಂತ್ರಿಕಾ ತಿಳುವಳಿಕಾ ಕೇಂದ್ರವನ್ನು ಪ್ರಾರಂಭ ಮಾಡುವುದಾಗಿ ತಿಳಿಸಿದರು. ಅಧಿಕಾರಿಗಳು ನಿಗದಿತ ಸಮಯದಲ್ಲಿ ಸಭೆಯನ್ನು ನಡೆಸಬೇಕು. ಪ್ರತಿ ಗ್ರಾಮದಲ್ಲಿ ಸಭೆಯನ್ನು ನಡೆಸುವುದರಿಂದ ಆಯ್ದ ಫಲಾನುಭವಿಗಳಿಗೆ ಸರ್ಕಾರದಿಂದ ಸವಲತ್ತುಗಳು ಸಿಗುವುದರಲ್ಲಿ ಸಂಶಯವಿಲ್ಲ ಎಂದರು.
ತಹಸೀಲ್ದಾರ್ ವೆಂಕಟರಾಜು ಮಾತನಾಡಿ ಪಡಿತರದಲ್ಲಿ ಸಾಕಾಷ್ಟು ಗೊಂದಲಗಳಿದ್ದು ಇವುಗಳನ್ನು ಹಂತಹಂತವಾಗಿ ನಿವಾರಿಸಲಾಗುವುದು. ಪಡಿತರ ಸಿಗದೇ ಇರುವಂತಹವರಿಗೆ ಅರ್ಜಿ ಹಾಕುವ ಮೂಲಕ ಪಡಿತರ ಚೀಟಿಯನ್ನು ಪಡೆಯಬಹುದು ಎಂದರು. ರೇಷ್ಮೆ ಇಲಾಖಾಧಿಕಾರಿ ಬಾಗೇವಾಡಿ ಮತ್ತು ಕೃಷಿ ಇಲಾಖಾಧಿಕಾರಿ ವಿನೋದಮ್ಮ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜು, ತಾ.ಪಂ.ಅಧ್ಯಕ್ಷೆ ರಾಧಿಕಾ ತ್ಯಾಗರಾಜು, ಉಪಾಧ್ಯಕ್ಷೆ ಪಟಾಲಪ್ಪ, ಸದಸ್ಯೆ ಚೈತ್ರಾ ನಾರಾಯಣಸ್ವಾಮಿ, ಯಲಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಮುನಿಯಪ್ಪ, ಮಾಜಿ ಅಧ್ಯಕ್ಷ ವೆಂಕಟಾಚಲ, ಉಪಾಧ್ಯಕ್ಷೆ ರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.