ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಉಪ ಚುನಾವಣೆಗೆ ಸೂಕ್ತ ಮುನ್ನೆಚ್ಚರಿಕೆ

Srinivasa Murthy VN
Updated On : 5 Aug 2013, 12:52 pm

ಕ.ಪ್ರ.ವಾರ್ತೆ ರಾಮನಗರ ಆ. 4
ಆ.21ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಅಕ್ರಮಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಜಿಲ್ಲಾ ವ್ಯಾಪ್ತಿಯ ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಪೊಲೀಸ್, ಆರ್‌ಟಿಒ, ವಾಣಿಜ್ಯ ತೆರಿಗೆ, ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ತಂಡ ಜಿಲ್ಲೆಗೆ ಬಂದು ಹೋಗುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಯಾವುದೇ ವಾಹನದಲ್ಲಿ ಅಕ್ರಮವಾಗಿ ಹಣ, ಮದ್ಯ, ಕೊಡುಗೆಗಳನ್ನು ಸಾಗಿಸುವುದು ಕಂಡುಬಂದಲ್ಲಿ ಜಫ್ತಿ ಮಾಡುವ ಅಧಿಕಾರವು ಈ ದಳಕ್ಕಿರುತ್ತದೆ. ತಪಾಸಣೆ ಸಂದರ್ಭದಲ್ಲಿ ವಾಹನದಲ್ಲಿ ಇರುವವರೊಂದಿಗೆ ಸಭ್ಯ ರೀತಿಯಲ್ಲಿ ವರ್ತಿಸುವಂತೆ ಹಾಗೂ ಅಕ್ರಮ ಕಂಡುಬಂದಲ್ಲಿ ಮಾತ್ರ ಕ್ರಮ ಜರುಗಿಸಲು ಈ ತಂಡಗಳಿಗೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಸೂಚಿಸಿದ್ದಾರೆ.
ಚಿತ್ರೀಕರಣ: ವಿಚಕ್ಷಣ ದಳವು ಯಾವುದಾದರೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುವಾಗ ವಿಡಿಯೋ ಸರ್ವಲೆನ್ಸ್ ತಂಡವು ಘಟನೆಯನ್ನು ಸಂಪೂರ್ಣ ಚಿತ್ರೀಕರಿಸಲಿದೆ. ಜಫ್ತಿ ಮಾಡಿದ ಅಥವಾ ವಶಪಡಿಸಿಕೊಂಡ ಅಕ್ರಮ ಹಣ, ಮದ್ಯ ಇತ್ಯಾದಿಗಳ ಕುರಿತು ಕೂಡಲೇ ಎಫ್‌ಐಆರ್ ದಾಖಲಿಸಬೇಕಿದೆ. ವಶಪಡಿಸಿಕೊಂಡ ಹಣವನ್ನು 24 ಗಂಟೆಯೊಳಗೆ ಖಜಾನೆಗೆ ಜಮಾ ಮಾಡಬೇಕಿದೆ. ಬಳಿಕ ಪೊಲೀಸ್ ಕೇಂದ್ರ ಸ್ಥಾನದ ನೋಡಲ್ ಅಧಿಕಾರಿಯು ಪ್ರಕರಣವನ್ನು ಮುಂದುವರಿಸಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ವಿ. ಶ್ರೀರಾಮರೆಡ್ಡಿ ವಿಚಕ್ಷಣ ದಳದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ವಿಚಕ್ಷಣ ದಳವು ಚೆಕ್‌ಪೋಸ್ಟ್‌ಗಳಲ್ಲಿ 2 ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಮೊದಲನೇ ಪಾಳಿ ಹಾಗೂ ರಾತ್ರಿ 8 ರಿಂದ ಬೆಳಗ್ಗೆ 8ರವರೆಗೆ ಎರಡನೇ ಪಾಳಿಯಲ್ಲಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ.

ರು. 40 ಲಕ್ಷ ವೆಚ್ಚ ಮಿತಿ ನಿಗದಿ: ಚುನಾವಣಾ ಆಯೋಗ
ರಾಮನಗರ: ಆಗಸ್ಟ್ 21ರಂದು ನಡೆಯಲಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗವು ರು.40 ಲಕ್ಷ ವೆಚ್ಚ ಮಿತಿಯನ್ನು ನಿಗದಿಪಡಿಸಿದೆ. ಅಭ್ಯರ್ಥಿಗಳು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಳಸುವ ಪ್ರಚಾರ ಸಾಮಗ್ರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ನಿಗದಿಪಡಿಸಿರುವ ದರದ ವಿವರಗಳು ಕೆಳಕಂಡಂತಿವೆ.
ಧ್ವನಿವರ್ಧಕ ಬಾಡಿಗೆ ಒಂದು ದಿನಕ್ಕೆ ರು.2100, ಪೆಂಡಾಲಲ್ಪ್ರತಿ ಚದರ ಅಡಿಗೆ ರು.10, ಬಟ್ಟೆ ಬ್ಯಾನರ್ ರು.300, ಬಟ್ಟೆ ಬಾವುಟ (ಒಂದಕ್ಕೆ) ರು.25 ರಿಂದ 50, ಪ್ಲಾಸ್ಟಿಕ್ ಬಾವುಟ ರು.15ರಿಂದ 20, ಪೋಸ್ಟರ್‌ಗಳು ಪ್ರತಿ ಚದರ ಅಡಿಗೆ ರು.10, ಹೋರ್ಡಿಂಗ್‌ಗಳು ಪ್ರತಿ ಚದರ ಅಡಿಗೆ ರು.10, ವಿಡಿಯೋ ಕ್ಯಾಸೆಟ್‌ಗಳು ರು.1200, ಆಡಿಯೋ ಕ್ಯಾಸೆಟ್ ರು.400, ಕಮಾನು ನಿರ್ಮಾಣ ರು.400 ರಿಂದ 500.
ವಾಹನಗಳ ಬಾಡಿಗೆ: ಜೀಪ್, ಟೆಂಪೋ, ಟ್ರಕ್ಕರ್, ಸುಮೋ, ಕ್ವಾಲಿಸ್ ಹಾಗೂ ಇತರೆ ಕಾರ್‌ಗಳು ಪ್ರತಿ ದಿನಕ್ಕೆ ರು.2000, ತ್ರಿಚಕ್ರವಾಹನಗಳು ರು.500, ಸೈಕಲ್ ರಿಕ್ಷಾಗಳು (ಮೋಟರ್ ಸಹಿತ) ರು.350, ಚಾಲಕರ ಸಂಬಳ ಖರ್ಚು (ಪ್ರತಿ ದಿನಕ್ಕೆ) ರು.200.
ಹೋಟೆಲ್ ಕೋಠಡಿಗಳು, ಅತಿಥಿ ಗೃಹಗಳ ಬಾಡಿಗೆ ರು.500 ರಿಂದ 1000, ಪೀಠೋಪಕರಣಗಳ ಬಾಡಿಗೆ-ಫೈಬರ್ ಚೇರ್ ಒಂದಕ್ಕೆ ರು.3, ಮಹಾರಾಜ ಕುರ್ಚಿ ಒಂದಕ್ಕೆ ರು.100, ಅತಿಥಿ ಕುರ್ಚಿ ಒಂದಕ್ಕೆ ರು.40, ಹೋರ್ಡಿಂಗ್ಸ್ ಸ್ಥಳಾವಕಾಶ ನಗರಸಭೆ ಬಾಡಿಗೆ ಪ್ರತಿ ಚದರಡಿಗೆ ರು.10.
ಜನರೇಟರ್ (2 ಕಿವ್ಯಾ) ಪ್ರತಿದಿನಕ್ಕೆ ರು.1000 ದಿಂದ 1200, ಲಘು ಮೋಟಾರು ವಾಹನಗಳು, ಮಿನಿ ಟ್ರಕ್‌ಗಳು ಪ್ರತಿ ವಾಹನಕ್ಕೆ ರು.2000, ಟ್ರಕ್, ಮಲ್ಟಿ ಆಕ್ಸೆಲ್ ಬಸ್ ಪ್ರತಿ ವಾಹನಕ್ಕೆ ರು.3000, ಪೇಪರ್ ಪೋಸ್ಟರ್ ಪ್ರತಿ ಚದರಡಿಗೆ ರು.3, ಫೆಕ್ಸಿ ಗ್ರಾಫಿಕ್ ಪೋಸ್ಟರ್‌ಗಳು ಪ್ರತಿ ಚದರಡಿಗೆ ರು.9, ಕಮಾನುಗಳು (ಅನುಮತಿ ಪಡೆದ ಸ್ಥಳಗಳಲ್ಲಿ ಮಾತ್ರ) ಪ್ರತಿ ಕಮಾನಿಗೆ ರು.2000, ದ್ವಿಚಕ್ರ ವಾಹನಕ್ಕೆ ರು.200.
ಸ್ಪೀಕರ್‌ಗಳು ಪ್ರತಿ ದಿನಕ್ಕೆ ರು.500, ಫ್ಯಾನ್ಸಿ ಚೇರ್‌ಗೆ ಒಂದು ದಿನಕ್ಕೆ ರು.100, ಶಾಮಿಯಾನ, ಪೆಂಡಾಲ್  (ಪ್ರತಿ ಚದರಡಿಗೆ) ರು.30, ವೇದಿಕೆ ನಿರ್ಮಾಣ ಪ್ರತಿ ಚದರಡಿಗೆ ರು.10, ವಿಡಿಯೋ ಚಿತ್ರೀಕರಣ ಪ್ರತಿ ಕೆಮೆರಾಗೆ ಒಂದು ದಿನಕ್ಕೆ ರು.1000, ಛಾಯಾಚಿತ್ರ ತೆಗೆಯುವಿಕೆ ಪ್ರತಿ ಕೆಮೆರಾಗೆ ಒಂದು ದಿನಕ್ಕೆ ರು.200, ಪಟಾಕಿ ಸಿಡಿಸುವಿಕೆ ಪ್ರತಿ ನಿಮಿಷಕ್ಕೆ ರು.1000 ಸೇರಿದಂತೆ ಇನ್ನಿತರೆ ವಸ್ತುಗಳ ಮಾರುಕಟ್ಟೆ ದರದಂತೆ ವಿಧಿಸಲಾಗುವುದು.

ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರವಹಿಸಿ
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆ ಸಂಬಂಧ ಆ.27ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಪಾಲಿಸಲು ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕಟ್ಟು ನಿಟ್ಟಾಗಿ ಜಾರಿಗೆ ತರಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ಶ್ರೀರಾಮರೆಡ್ಡಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement