ನಾಳೆ ವಚನ ಸಾಹಿತ್ಯ ಕಾರ್ಯಕ್ರಮ
ಶಿರಾ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಿರಾ ವತಿಯಿಂದ, ಶ್ರೀ ಶ್ರೀನಿವಾಸ ವಿದ್ಯಾವರ್ಧಕ ಪ್ರೌಢಶಾಲೆ ಹುಯಿಲ್ದೊರೆಯಲ್ಲಿ ಡಿ. 13 ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಶಾಲೆಗೊಂದು ಕಾರ್ಯಕ್ರಮದ ಪ್ರಯುಕ್ತ ವಚನ ಸಾಹಿತ್ಯ ಏರ್ಪಡಿಸಲಾಗಿದೆ ಎಂದು ತಾಲೂಕು ಕ.ಸಾ.ಪ. ಅಧ್ಯಕ್ಷರಾದ ವೈ.ನರೇಶ್ ಬಾಬು ಅವರು ತಿಳಿಸಿದ್ದಾರೆ. ಉದ್ಘಾಟನೆಯನ್ನು ಎ.ಸುರೇಶ್, ಶಿಕ್ಷಕರು ಶ್ರೀ ಶ್ರೀನಿವಾಸ ವಿದ್ಯಾವರ್ಧಕ ಪ್ರೌಢಶಾಲೆ, ಹುಯಿಲ್ದೊರೆ ಇವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಎಸ್.ನಾಗರಾಜು, ಮುಖ್ಯೋಪಾಧ್ಯಾಯರು ಇವರು ವಹಿಸುವರು. ಟಿ.ಎಸ್. ಬಸವಮೂರ್ತಿ ನಿವೃತ್ತ ಉಪನ್ಯಾಸಕರು ಹಾಗೂ ಎಸ್. ರಾಜ್ಕುಮಾರ್ ಉಪನ್ಯಾಸ ನೀಡುವರು.
ಆರ್.ನಂದಿನಿ ನಾಪತ್ತೆ
ರಾಮನಗರ: ಚನ್ನಪಟ್ಟಣದ ರಾಜಕೆಂಪೇಗೌಡ ಬಡಾವಣೆಯ ಸುಲೋಚನ ಮತ್ತು ಟಿ.ಎನ್. ರಮೇಶ್ ರೆಡ್ಡಿ ಅವರ ಪುತ್ರಿ 21 ವರ್ಷದ ಆರ್.ನಂದಿನಿ ಡಿ.3ರಿಂದ ಕಾಣೆಯಾಗಿರು
ತ್ತಾಳೆ. ಕುವೆಂಪು ನಗರದಲ್ಲಿರುವ ಕರ್ನಾಟಕ ಬ್ಯಾಂಕ್ಗೆ ಹೋದವಳು ಮನೆಗೆ ವಾಪಸಾಗಿಲ್ಲ ಎಂದು ಪೋಷಕರು ಚನ್ನಪಟ್ಟಣ ಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುವ ನಂದಿನಿ ಕನ್ನಡ ಮತ್ತು ತೆಲಗು ಭಾಷೆ ಮಾತನಾಡುತ್ತಾಳೆ. ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಬಾಲಕರ ವಿಭಾಗದ ಸ್ಪರ್ಧೆಯಲ್ಲಿ 3ನೇ ಸ್ಥಾನ
ರಾಮನಗರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದಲ್ಲಿ ರಾಮನಗರ ಜಿಲ್ಲೆಯ ಟೇಬಲ್ ಟೆನಿಸ್ ಬಾಲಕರ ತಂಡವು ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿ ಪೈಕಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತದೆ. ಪೈಕಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಎನ್. ಪ್ರಮೋದ್, ಮಯೂರ್ ಸಿಡಾಗೆ, ವನಿತ್ ಎಸ್ ಗೌಡ ಹಾಗೂ ಎಂ.ಅಚ್ಯುತ ಅವರನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಿ.ನವಜ್ಯೋತಿ ಅಭಿನಂದಿಸಿದ್ದಾರೆ.