ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಾಹಿತ್ಯ ಘನವಾದ ಜೀವನಾನುಭವ ಬಯಸುತ್ತದೆ

Srinivasa Murthy VN
Updated On : 12 Dec 2013, 1:10 am

ದೊಡ್ಡಬಳ್ಳಾಪುರ: ಇಲ್ಲಿನ ಹಿರಿಯ ಪತ್ರಕರ್ತ ಎಂ.ಎಸ್.ಸಂಪತ್ತಯ್ಯಂಗಾರ್ ಬರೆದಿರುವ ವಿಭಾಶ್ರೀ ಪ್ರಕಾಶನ ಹೊರತಂದಿರುವ ಸುಗುಣ ಕುಬೇರ ಮತ್ತು ಇತರ ಕಥೆಗಳು, ನಾಳಿನ ತಿಂಡಿ ಏನು ಮತ್ತು ಸದರನ್ ಫ್ಲೇವರ್ಸ್ ಕೃತಿಗಳ ಬಿಡುಗಡೆ ಸಮಾರಂಭ ವಾಸವಿ ಕಲ್ಯಾಣ ಮಂದಿರದಲ್ಲಿ ನಡೆಯಿತು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ವಿಮರ್ಶಕ ಎಸ್.ದಿವಾಕರ್ ಮಾತನಾಡಿ, ಘನವಾದ ಜೀವನಾನುಭವ ಇರುವ ಜನ ಮಾತ್ರ ಈ ಬಗೆಯ ಕೃತಿಗಳನ್ನು ಬರೆಯಲು ಸಾಧ್ಯ. ಕೇವಲ ನಗರದ ತೆಳುಜೀವನ ಅನುಭಾವ ಇಂತಹದ್ದಕ್ಕೆ ಒತ್ತಾಸೆ ನೀಡುವುದಿಲ್ಲ.
ಇಲ್ಲಿನ ನಿರೂಪಣೆಗಳು ಮತ್ತು ಒಟ್ಟು ಘಟನಾವಳಿಗಳಲ್ಲಿರುವ ವಿಜೃಂಭಣೆ ಅಪಾಯ ಸಂಯಮವನ್ನು ಪರಿಚಯಿಸುತ್ತದೆ. ಮನುಷ್ಯ ಬದುಕಿನ ಸಣ್ಣತನಗಳು ಮತ್ತು ಕ್ರೌರ್ಯ ನಿಕಟವಾಗಿ ಕಂಡಾಗಲೂ ಜೀವನಶ್ರದ್ಧೆ ಕೈಹಿಡಿಯುತ್ತದೆ. ಸಿನಿಕತೆ ಒಳ್ಳೆಯದಲ್ಲ ಎಂಬ ಸಾರ ಅಡಗಿದೆ ಎಂದರು.
ಆಹಾರತಜ್ಞ ಡಾ.ಕೆ.ಸಿ.ರಘು, ನಾಳಿನ ತಿಂಡಿ ಏನು ಪುಸ್ತಕದ ಬಗ್ಗೆ ಮಾತನಾಡಿದರು. ತಾಯಿಯ ಕರುಣೆ ಅಯ್ಯಂಗಾರರ ತಿಂಡಿಗಳ ವಿಶ್ಲೇಷಣೆಯಲ್ಲಿದೆ. ಆಹಾರ ಜ್ಞಾನ ಅಡಗಿರುವುದು ಅಡುಗೆಯಲ್ಲಿ, ನೈಜ ರುಚಿ ಕಾಣುವುದು ಹಸಿವಿನಲ್ಲಿ.
ಆಧುನಿಕ ಜೀವನಶೈಲಿಯಿಂದ ಅಡುಗೆ ಪದ್ಧತಿ ನಾಶವಾಗುತ್ತಿದೆ. ಸಾಂಪ್ರದಾಯಿಕ ಅಡುಗೆ ಪದ್ಧತಿಯ ವಿನಾಶ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.
ಚಂದ್ರನಡಿಗೂ ಲಗ್ಗೆಯಿಟ್ಟಿರುವ ಮಾನವ ಆರೋಗ್ಯದ ವಿಚಾರದಲ್ಲಿ ತನ್ನ ಬೀದಿಯನ್ನೂ ದಾಟಲು ಸಾಧ್ಯವಾಗುತ್ತಿಲ್ಲ. ಒಂದೆಡೆ 100 ಕೋಟಿ ಜನ ಹಸಿದಿದ್ದರೆ ಮತ್ತೊಂದೆಡೆ 100 ಕೋಟಿ ಜನರಿಗೆ ಬೊಜ್ಜು ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ನಾ.ಸೋಮೇಶ್ವರ ಮಾತನಾಡಿದರು.
ಹಲವಾರು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಗೋವಿಂದರಾಜು ಸ್ವಾಗತಿಸಿದರು. ವಿಭಾ ಮತ್ತು ಶ್ರೀರಂಜಿನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement