ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಗೆ ಬಡಕುಟುಂಬದ ರು. 1 ಲಕ್ಷ ದೇಣಿಗೆ

Srinivasa Murthy VN
Updated On : 13 Dec 2013, 12:03 pm

ಕನಕಪುರ: ಬಡತನದ ಕುಟುಂಬದ ದಂಪತಿಗಳು ತಮ್ಮ ಜೀವಿತದ ಉಳಿತಾಯದ ಒಂದು ಲಕ್ಷ ಹಣವನ್ನು ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಗೆ ದೇಣಿಗೆಯಾಗಿ ನೀಡಿ ಹೃದಯ ಶ್ರೀಮಂತಿಕೆ ಪ್ರದರ್ಶಿಸಿದ  ಘಟನೆ ನಡೆದಿದೆ. ಕನಕಪುರ ತಾಲೂಕಿನ ಬೆಟ್ಟೇಗೌಡನದೊಡ್ಡಿ ಗ್ರಾಮದ ಚಿಕ್ಕಮ್ಮ ಹಾಗೂ ನರಸಿಂಹಯ್ಯ ದಂಪತಿ ಗೂಡಂಗಡಿ (ಪೆಟ್ಟಿ ಅಂಗಡಿ)ನಡೆಸಿ ಜೀವಿಸುತ್ತಿದ್ದರೂ ಇತ್ತೀಚೆಗೆ ದೃಶ್ಯಮಾಧ್ಯಮದಲ್ಲಿ ಪ್ರಸಾರವಾದ ಕನಕಪುರ ತಾಲೂಕಿನ ರಸ್ತೆಜಕ್ಕಸಂದ್ರ ಗ್ರಾಮದಲ್ಲಿನ ಶ್ರೀ ರಮಣ ಮಹರ್ಷಿ ಅಂಧಮಕ್ಕಳ ಶಾಲೆಯ ಕಾರ್ಯಕ್ರಮವನ್ನು ವೀಕ್ಷಿಸಿ ಸ್ವಯಂಪ್ರೇರಿತರಾಗಿ ಸಂಸ್ಥೆಗೆ ಆಗಮಿಸಿ ಅಧ್ಯಕ್ಷ ಶ್ರೀನಿವಾಸ್ ಅವರನ್ನು ಭೇಟಿಯಾಗಿ ಒಂದುಲಕ್ಷ ರು.ಗಳ ಉದಾರ ದೇಣಿಗೆಯನ್ನು ನೀಡಿದ್ದಾರೆ.  ದಾನಿಗಳ ಬಗ್ಗೆ ಮಾತನಾಡಿದ ಧರ್ಮದರ್ಶಿ ಶ್ರೀನಿವಾಸ್, ನಿಸ್ಪೃಹತೆಯಿಂದ ದೇಣಿಗೆ ನೀಡಿದ ಇವರ ಕಾರ್ಯ ನೂರಾರು ಜನರಿಗೆ ಉತ್ತೇಜನ ನೀಡಲಿದೆ. ಇವರ ದೇಣಿಗೆಯನ್ನು ನಿಶ್ಚಿತ ಠೇವಣಿಯಲ್ಲಿರಿಸಿ ಪ್ರತಿ ವರ್ಷ ದಾನಿಗಳ ಹೆಸರಿನಲ್ಲಿ ಸಂಸ್ಥೆಯ ಅಂಧ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸ್ವಯಂ ಸೇವಕ ತರಬೇತಿ ಕಾರ್ಯಗಾರ
ವಿಜಯಪುರ:
ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತೆ ಮಾಡುವ ಉದ್ದೇಶದಿಂದ ನವಸಕ್ಷಾರತಾ ಆಂದೋಲನ ಕಾರ್ಯಾರಂಭ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಾಭ್ಯಾಸ ನೀಡುವುದರೊಂದಿಗೆ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಪಿಡಿಓ ಸುಧಾಕರ್ ತಿಳಿಸಿದರು. ಪಟ್ಟಣ ಸಮೀಪದ ಬಿಜ್ಜವಾರ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಕೇಂದ್ರದಲ್ಲಿ 2ನೇ ಹಂತದ ಸ್ವಯಂ ಸೇವಕರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಾಲೂಕು ಸಂಯೋಜಕರಾದ ಸುಂದರ್ ಮಾತನಾಡಿ ಸ್ವಾತಂತ್ರ್ಯ ಪಡೆದಾಗ ಶೇ.14ರಷ್ಟು ಸಾಕ್ಷರತೆ ಇತ್ತು ಆದರೆ ಈಗ ಶೇ. 80ರಷ್ಟು ಸಾಕ್ಷರತೆ ಸಾಧಿಸುವುದು ನಮ್ಮ ಗುರಿಯಾಗಿದೆ ಮತ್ತು ಗಾಂಧೀಜಿಯವರ ಕನಸನ್ನು ನನಸು ಮಾಡಲು ನಾವೆಲ್ಲರೂ ಶ್ರಮಿಸಬೇಕು ಎಂದರು. ಕೇಂದ್ರ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮೀಕಾಂತ್ ಅವರು ಮಾತನಾಡಿದರು. ಸ್ವಯಂ ಪ್ರೇರಕರಾದ ಮುನಿರಾಜು, ಶಿವಕುಮಾರ್, ಗ್ರಾಮದ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement