ಚಿಕ್ಕಮುದವಾಡಿ ಗ್ರಾಪಂ ನೂತನ ಅಧ್ಯಕ್ಷ ಅನಜವಾಡಿ ಸಿ. ವಿಜಯ್
ಕನಕಪುರ: ಕನಕಪುರ ತಾಲೂಕು ಚಿಕ್ಕಮುದವಾಡಿ ಗ್ರಾಪಂ ನೂತನ ಅಧ್ಯಕ್ಷರಾಗಿ ಅನಜವಾಡಿ ಸಿ. ವಿಜಯ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಇಂದು ಗ್ರಾಪಂ ಸಭಾಂಗಣದಲ್ಲಿ ನಡೆದ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ಚುನಾವಣಾಧಿಕಾರಿಗಳಾಗಿ ಕಾವೇರಿ ನಿಗಮದ ಅಧಿಕಾರಿ ಅಬ್ದುಲ್ ಮಜೀದ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿ ಪಿಡಿಓ ಪರಮಶಿವಯ್ಯ ಕಾರ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ ಸಿ.ವಿಜಯ್ ಮಾತನಾಡಿ ಕನಕಪುರ ಕ್ಷೇತ್ರವು ಅಭಿವೃದ್ಧಿ ಪಥದಲ್ಲಿ ರಾಜ್ಯದಲ್ಲಿಯೇ ಮಾದರೀ ಕ್ಷೇತ್ರವಾಗಿ ರೂಪುಗೊಳ್ಳುತ್ತಿದ್ದು, ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳೂ ಅಭಿವೃದ್ಧಿಗಾಗಿ ನಿಸ್ಪೃಹತೆಯಿಂದ ದುಡಿಯುತ್ತಿವೆ. ತಮ್ಮ ಅವಧಿಯಲ್ಲಿಯೂ ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಮಾರ್ಗದರ್ಶನದಂತೆ ನಿಷ್ಠೆಯಿಂದ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು. ವಿಪ ಮಾಜಿ ಸದಸ್ಯ ಎಸ್.ರವಿ, ಜಿಪಂ ಸದಸ್ಯ ವೆಂಕಟೇಶಯ್ಯ, ನಳಿನಾ ರವಿಶಂಕರ್, ಮಾಜಿ ಅಧ್ಯಕ್ಷರುಗಳಾದ ವೀಣಾ ಶಿವಕುಮಾರ್, ಕಾಳಪ್ಪ, ಮುಖಂಡರುಗಳಾದ ರಾಮಚಂದ್ರು, ಅರ್ಬನ್ ಬ್ಯಾಂಕ್ ಅಧ್ಯಕ್ಷ ಜೋಸೆಫ್ ಗೊನ್ಸಾಲ್ವಿಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಕೃಷ್ಣಪ್ಪ, ಗೋವಿಂದಯ್ಯ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.