ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೆರೆಗೆ ಅಪಾಯಕಾರಿ ತ್ಯಾಜ್ಯ, ಜೀವ ಸಂಕುಲಕ್ಕೆ ಸಂಚಕಾರ

Srinivasa Murthy VN
Updated On : 16 Dec 2013, 12:44 pm

ಸೂಲಿಬೆಲೆ: ಹೊಸಕೋಟೆ ತಾ.ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದಲ್ಲಿರುವ ಕೆರೆಯ ನೀರಿಗೆ ಕಿಡಿಗೇಡಿಗಳು ಅಪಾಯಕಾರಿ ತ್ಯಾಜ್ಯ ತಂದು ಹಾಕುತ್ತಿದ್ದು ಕೆರೆಯ ನೀರು ಮಲಿನಗೊಂಡು ಜೀವ ಸಂಕುಲಕ್ಕೆ ಸಂಚಕಾರ ಬಂದೋದಗಿದೆ ಎಂದು ಗ್ರಾಮಸ್ಥರು ಆತಂಕವ್ಯಕ್ತಪಡಿಸಿದ್ದಾರೆ.
ಗ್ರಾಮದ ಕೆರೆಯಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ನೀರು ಬಂದಿದ್ದು, ಹಳ್ಳಕೊಳ್ಳಗಳು ತುಂಬಿಕೊಂಡು ಜಾನುವಾರುಗಳಿಗೆ ಕುಡಿಯಲು ನೀರು ಸಂಗ್ರಹವಾಗಿತ್ತು. ಅಲ್ಲದೇ ಸಾಕು ಪ್ರಾಣಿಗಳನ್ನು ತೊಳೆಯಲು ಇದೇ ನೀರು ಬಳಿಕೆಯಾಗುತ್ತಿತ್ತು. ಇಂಥ ನೀರಿಗೆ ಕೆಲ ದಿನಗಳಿಂದ ಕೀಡಿಗೇಡಿಗಳು ಅಪಾಯಕಾರಿ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಇದರಿಂದ ಕೆರೆಯ ನೀರಿನೊಂದಿಗೆ ಪರಿಸರಕ್ಕೂ ಧಕ್ಕೆಯಾಗುತ್ತಿದೆ. ತ್ಯಾಜ್ಯದ ವಿಷಕಾರಿ ಅಂಶಗಳು ನೀರಿನೊಂದಿಗೆ ಬೆರೆತು ನೀರು ಕುಡಿಯಲು ಪ್ರಾಣಿಗೆ ಯೋಗ್ಯವಿಲ್ಲದಂತಾಗಿ ರೋಗಗಳಿಗೆ ಬಲಿಯಾಗುವಂತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಪರಿಸರಕ್ಕೂ ಹಾನಿ: ಕೆರೆಯ ನೀರಿನ ಗುಂಡಿಗಳಿಗೆ  ಹಾಕಿರುವ ಅಪಾಯಕಾರಿ ತ್ಯಾಜ್ಯದ ಪ್ರಭಾವ ನೀರಿಗೆ ಮಾತ್ರವಲ್ಲದೆ ಪರಿಸರಕ್ಕೂ ಕಂಟಕವಾಗಿ ಪರಿಣಿಮಿಸಿದೆ. ಕೆರೆಗಳ ಸಂರಕ್ಷಣಿ ಮಾಡುವಲ್ಲಿ ಯಾವೊಬ್ಬ ಅಧಿಕಾರಿಯೂ ಇತ್ತ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಇತ್ತ ಗಮನಹರಿಸಿ ಕೆರೆಯ ಪರಿಸರವನ್ನು ಸಂರಕ್ಷಣಿ ಮಾಡುವಂತೆ ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement