ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚಿಣ್ಣರಿಗಾಗಿ ವೇಷಭೂಷಣ ಸ್ಪರ್ಧೆ

Srinivasa Murthy VN
Updated On : 16 Dec 2013, 12:46 pm

ಕನಕಪುರ: ಲಯನ್ಸ್ ಮತ್ತು ಲಿಯೋ ಕ್ಲಬ್ ಕನಕಪುರ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಚಿಣ್ಣರಿಗಾಗಿ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮ ಇಲ್ಲಿನ ಲಯನ್ಸ್ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಲಯನ್ಸ್‌ಅಧ್ಯಕ್ಷ ಕೆ.ಜಿ. ಸತೀಶ್‌ನೆರವೇರಿಸಿದರು. ಲಿಯೋ ಅಧ್ಯಕ್ಷ ವಿಶ್ವಕಾಂತ್‌ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವೇಷಭೂಷಣ ಸ್ಪರ್ಧೆಗಳ ನಾಲ್ಕು ವಿಭಾಗಗಳಲ್ಲಿ 60 ಕ್ಕೂ ಹೆಚ್ಚು ಚಿಣ್ಣರು ಉತ್ಸಾಹದಿಂದ ಪಾಲ್ಗೊಂಡಿ ವಿವಿಧ ರೀತಿಯ ವೇಷಭೂಷಣಗಳನ್ನು ಪ್ರದರ್ಶಿಸಿ ರಂಜಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಪತ್ರಕರ್ತ ಜಿ.ಎನ್. ಸತೀಶ್, ಶಿಕ್ಷಕ ರಾಜಶೇಕರ ಪಾಟೀಲ್, ಶ್ಯಾಮಲಾ ಅನಂತಸ್ವಾಮಿ ಕಾರ್ಯನಿರ್ವಹಿಸಿದರು. ಸಮಾರಂಭದಲ್ಲಿ ಸ್ಥಳದಲ್ಲಿಯೇ ಚಿತ್ರಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗೋಪಾಲರಾಜು, ಮರಸಪ್ಪರವಿ, ಬಿಳಿಗಿರಿ ರಂಗಸ್ವಾಮಿ ಬಹುಮಾನಗಳನ್ನು ವಿತರಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಕಿರುತೆರೆ ಬಾಲನಟಿ ಬೇಬಿ ಪ್ರಷ್ಮಾ (ಚುಕ್ಕಿ-ಧಾರಾವಹಿ ಖ್ಯಾತಿ),ಸುಹಾನಿಯಾಖಾನ್, ಮಾಜಿ ಲಯನ್ಸ್ ಅಧ್ಯಕ್ಷ ಚಂದ್ರಶೇಖರ್, ಪರಮೇಶ್, ಬಾಬು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಯೋಗೀಶ್‌ಬಾಬು ಸ್ವಾಗತಿಸಿದರು. ಎಂ.ಆರ್. ಪ್ರಶಾಂತ್ ನಿರೂಪಿಸಿದರು. ಯಶವಂತಕುಮಾರ್‌ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement