ಭಕ್ತ ಜನರ ಮನಸೂರೆಗೊಂಡ ಭಕ್ತಿ ಗೀತಾಂಜಲಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಡಿ.15
ಯಪ್ರಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಅವರ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ ಇಲ್ಲಿನ ಶ್ರೀ ನೆಲದಾಂಜನೇಯ ಸ್ವಾಮಿ ಸೇವಾ ಸಮಿತಿ ನೇತೃತ್ವದಲ್ಲಿ ಶ್ರೀಹನುಮ ಜಯಂತ್ಯುತ್ಸವ ಅಂಗವಾಗಿ ನೆಲದಾಂಜನೇಯ ದೇಗುಲ ಆವರಣದಲ್ಲಿ ನಡೆಯಿತು.
ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರು, ದಾಸಶ್ರೇಷ್ಠ ಕನಕದಾಸ, ವಿಜಯದಾಸ, ವಾದಿರಾಜ ಸೇರಿದಂತೆ ಅನೇಕ ಹರಿದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಜನಮನ ಸೂರೆಗೊಂಡ ನರಸಿಂಹನಾಯಕ್, ಶ್ರೀರಾಮ, ವೆಂಕಟರಮಣ, ಹನುಮಂತ, ಶ್ರೀಕೃಷ್ಣ ಸೇರಿದಂತೆ ದೇವಾನು ದೇವತೆಗಳ ಸ್ತುತಿಗಳಿಂದ ಭಕ್ತ ಜನರನ್ನು ರಂಜಿಸಿದರು. ಕರ್ನಾಟಕ ಸಂಗೀತದ ಮಹತ್ವದ ಕೃತಿಗಳನ್ನು ವಿನೂತನ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ಅವರು, ಹಾಡುಗಾರಿಕೆಯ ಹೊಸ ಪ್ರಯೋಗಗಳೊಂದಿಗೆ ಗಮನ ಸೆಳೆದರು.
ಭಕ್ತಿ ಸಂಗೀತದ ಮಹತ್ವದ ಕಾರ್ಯಕ್ರಮದಲ್ಲಿ ಪುತ್ತೂರು ನರಸಿಂಹನಾಯಕ್ ಗಾಯನಕ್ಕೆ ಕೀಬೋರ್ಡ್‌ನಲ್ಲಿ ಹಿರಿಯ ವಿದ್ವಾನ್ ವಸಂತಕುಂಬ್ಳೆ, ತಬಲದಲ್ಲಿ ವಿದ್ವಾನ್ ರಾಘವೇಂದ್ರ ಜೋಷಿ ಮತ್ತು ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ಶಶಿಧರ್ ಸಹಕಾರ ನೀಡಿದರು. ದೊಡ್‌ಡಬಳ್ಳಾಪುರದ ಜನರ ಪರವಾಗಿ ಎಲ್ಲ ಕಲಾವಿರದನ್ನು ಅಭಿನಂದಿಸಲಾಯಿತು. ಎಲ್.ವಿ. ಹಾಸ್ಪಿಟಲ್‌ನ ಎನ್.ವಾಸುದೇವ್ ಮತ್ತು ಕುಟುಂಬ ಕಾರ್ಯಕ್ರಮವನ್ನು ಪ್ರಾಯೋಜಿಸಿತ್ತು. ಶ್ರೀನೆಲದಾಂಜನೇಯಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು, ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.