ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಿಕ್ಷಣ ಸಂಸ್ಥೆ ಕಾಯ್ದೆ 2006 ಜಾರಿ ಬೇಡ

Srinivasa Murthy VN
Updated On : 16 Dec 2013, 12:46 pm

ಬೆಂಗಳೂರು: ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕಾಯ್ದೆ 2006ನ್ನು ಜಾರಿಗೊಳಿಸುವ ಹೆಸರಿನಲ್ಲಿ ಸಿಇಟಿ ಪರೀಕ್ಷೆಯನ್ನು ಕೇವಲ ಸರ್ಕಾರಿ ವೃತ್ತಿ ಶಿಕ್ಷಣ ಕಾಲೇಜುಗಳಿಗೆ ಸೀಮಿತಗೊಳಿಸುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಾಮೆಡ್-ಕೆ ಪರೀಕ್ಷೆ ಬರೆಯುವಂತಾಗುತ್ತದೆ. ಹೀಗಾಗಿ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಬಾರದು ಎಂದು ಆಲ್ ಇಂಡಿಯಾ ಡೆಮಾಕ್ರಿಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಓ) ಆಗ್ರಹಿಸಿದೆ. ಹಿಂದಿನ ಸರ್ಕಾರಗಳು ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಶಾಮೀಲಾಗಿ, ಕೊನೆಯಿಲ್ಲದ ಮೊಕದ್ದಮೆಗಳಲ್ಲಿ ಮುಳುಗಿಸಿ ಕ್ರಮೇಣ ಸಿಇಟಿಯನ್ನು ನಿಷ್ಪ್ರಯೋಜಕಗೊಳಿಸಿದೆ. ಇದರ ಪರಿಣಾಮ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಾಮೆಡ್- ಕೆ ಪರೀಕ್ಷೆ ಬರೆಯಬೇಕಾಗುತ್ತದೆ. ಅಲ್ಲದೆ. ತಮಗಿಷ್ಟ ಬಂದಂತೆ ಸೀಟುಗಳ ಮಾರಾಟ ಮಾಡುವುದಕ್ಕೂ ಸರ್ಕಾರವೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು  ಸಂಘದ ಅಧ್ಯಕ್ಷ ವಿ.ಎನ್. ರಾಜಶೇಖರ್ ಹೇಳಿದ್ದಾರೆ.

ವ್ಯಕ್ತಿ ಆತ್ಮಹತ್ಯೆ  
ಬೆಂಗಳೂರು:
ಸಾಲ ತೀರಿಸಲಾಗದೆ ಎಚ್‌ಎಸ್ ಆರ್ ಬಡಾವಣೆ ನಿವಾಸಿ ಪ್ರಭಾಕರ್ (43) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ 24 ನೇ ಮುಖ್ಯರಸ್ತೆ ಅಗ್ರಹಾರ ಪ್ರದೇಶದಲ್ಲಿ ಪತ್ನಿ ಗೀತಾ ರೊಂದಿಗೆ ವಾಸವಿದ್ದ ಪ್ರಭಾಕರ್ ಡಿ.10 ರಂದು ವಿಷ ಸೇವಿಸಿದ್ದರು. ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಪ್ರಭಾಕರ್ ನಿರುದ್ಯೋಗಿಯಾಗಿದ್ದು ಪತ್ನಿ ಗೀತಾ ಬಜ್ಜಿ ಅಂಗಡಿ ನಡೆಸುತ್ತಿದ್ದರು. ಎಚ್‌ಎಸ್‌ಆರ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement