ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚಳಿ ತಾಳದೆ ನಾಲ್ಕು ತಿಂಗಳ ಮಗು ಸಾವು

Srinivasa Murthy VN
Updated On : 17 Dec 2013, 11:26 am

ಚಿಕ್ಕಬಳ್ಳಾಪುರ: ಚಳಿ ತಾಳಲಾರದೇ ನಾಲ್ಕು ತಿಂಗಳ ಗಂಡು ಮಗುವೊಂದು ಮೃತಪಟ್ಟಿದೆ. ಇಲ್ಲಿನ ಬಸಪ್ಪನ ಛತ್ರದ ನಿವಾಸಿ ಆಯಿಷಾ ಎಂಬುವರ ಜಬೀ ಮೃತ ಮಗು.
ನಗರದ ಹೃದಯ ಭಾಗದಲ್ಲಿರುವ ಬಸಪ್ಪನ ಛತ್ರದಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದವರನ್ನು ನಗರಸಭೆ ಕಚೇರಿ ನಿರ್ಮಾಣಕ್ಕಾಗಿ ಒಕ್ಕಲೆಬ್ಬಿಸಿ ಕಂದವಾರ ಸಮೀಪದ ಪ್ರದೇಶದಲ್ಲಿ ತಗಡು ಗುಡಾರವನ್ನು ನಿರ್ಮಿಸಿಕೊಡಲಾಗಿದೆಯೇ ಹೊರತು ಈ ಜನರಿಗೆ ಜಿಲ್ಲಾಡಳಿತ ಸಮರ್ಪಕ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇಲ್ಲಿನ ಜನರು ಸೌಕರ್ಯಗಳಿಂದ ವಂಚಿತರಾಗಿ, ನಗರಕ್ಕೆ ದೂರವಾಗಿ ಅಲೆಮಾರಿಗಳಂತೆ ಜೀವನ ನಡೆಸುತ್ತಿದ್ದಾರೆ. ಚಿಂದಿ ಪೇಪರ್ ಆಯುವ, ಕಬ್ಬಿಣ, ಪ್ಲಾಸ್ಟಿಕ್ ಸಾಮಾನುಗಳನ್ನು ಮಾರಾಟ ಮಾಡುವ ಇವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿಕೊಂಡು ಬರುತ್ತಿದ್ದು, ಜಿಲ್ಲಾಡಳಿತ ಮಾತ್ರ ವಸತಿ ಸೌಲಭ್ಯವನ್ನು ಒದಗಿಸಲು ಇನ್ನೂ ಕ್ರಿಯಾ ಯೋಜನೆಯನ್ನು ರೂಪಿಸುವಲ್ಲಿಯೇ ಕಾಲ ಕಳೆಯುತ್ತಿದೆ. ತಾಲೂಕು ಆರೋಗ್ಯಾಧಿಕಾರಿ ಮಿತ್ರಣ್ಣ, ಚಳಿ ತಾಳಲಾರದೇ ಮಗು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆಯಾದರೂ ಶವಪರೀಕ್ಷೆ ನಡೆಸಿ ದೃಢಪಡಿಸಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement