ಪ್ರಾಥಮಿಕ ಸಹಕಾರ ಸಂಘಗಳ ಚುನಾವಣೆ
ರಾಮನಗರ: 2014-15ರಿಂದ 2018-19ನೇ ಸಾಲುಗಳ ಅವಧಿಯ ಆಡಳಿತ ಮಂಡಳಿಗೆ ಪ್ರಾಥಮಿಕ ಸಹಕಾರ ಸಂಘಗಳ ಚುನಾವಣೆಯನ್ನು ಜಿಲ್ಲಾ ಸಹಕಾರ ಸಂಘಗಳ ಚುನಾವಣಾಧಿಕಾರಿ ಕೆ.ಎನ್.ನಂಜುಂಡೇಗೌಡ ಪ್ರಕಟಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 2ನೇ ಫೆಬ್ರುವರಿ 2014, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 9ನೇ ಫೆಬ್ರುವರಿ, ಪಟ್ಟಣ ಸಹಕಾರ ಸಂಘಗಳು, ಗ್ರಾಹಕರ ಸಹಕಾರ ಸಂಘಗಳು, ಪಿಕಾರ್ಡ್
ಬ್ಯಾಂಕ್‌ಗಳು, ನೌಕರರ ಪತ್ತಿನ ಸಹಕಾರ ಸಂಘಗಳು, ಸೌಹಾರ್ದ ಹಾಗೂ ಇನ್ನಿತರೆ ಪತ್ತಿನ ಸಹಕಾರ ಸಂಘಗಳಿಗೆ ಫೆಬ್ರುವರಿ 2 ರಂದು ಚುನಾವಣೆ ನಡೆಯಲಿದೆ.
ಇನ್ನುಳಿದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 2014ರ ಫೆಬ್ರುವರಿ 16 ಮತ್ತು 17, ಗೃಹ ನಿರ್ಮಾಣ ಸಹಕಾರ ಸಂಘಗಳು, ಎಲ್ಲಾ ಪತ್ತೇತರ ಸಹಕಾರ ಸಂಘಗಳು, ಇತರೆ ಎಲ್ಲಾ ಸಹಕಾರ ಸಂಘಗಳಿಗೆ 2014ರ ಫೆಬ್ರುವರಿ 23ಕ್ಕೆ ಚುನಾವಣೆ ನಿಗದಿಯಾಗಿದೆ.