ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೇಟೆಗಾರರ ಗುಂಡೇಟಿಗೆ ಹೆಣ್ಣಾನೆ ಸಾವು

Srinivasa Murthy VN
Updated On : 18 Dec 2013, 12:28 pm

ಕ.ಪ್ರ.ವಾರ್ತೆ ಕನಕಪುರ ಡಿ.17
ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ವ್ಯಾಪ್ತಿಗೆ ಸೇರಿರುವ ಕನಕಪುರ ತಾಲೂಕಿನ ಗುಳವಾಡಿ ದೊಡ್ಡಿ ಸಮೀಪದ ಅರಣ್ಯದಲ್ಲಿ ಬೇಟೆಗಾರರ ಗುಂಡೇಟಿಗೆ ಸಿಲುಕಿ ಸುಮಾರು ಹತ್ತು ವರ್ಷ ಪ್ರಾಯದ ಹೆಣ್ಣಾನೆ ಬಲಿಯಾಗಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ಬೇಟೆಯಾಡಲು ತೆರಳಿದ್ದ ಗುಂಪಿಗೆ ಒಂಟಿ ಹೆಣ್ಣಾನೆಯೊಂದು ಎದುರಾಗಿದ್ದು ಅದರ ದಾಳಿಯಿಂದ ಪಾರಾಗಲು ಬೇಟೆಗಾರರು ಗುಂಡುಹಾರಿಸಿ ಕೊಂದಿದ್ದಾರೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಅರಣ್ಯ ಉಪಸಂರಕ್ಷಣಾಧಿಕಾರಿ ಕರಿಕಾಳನ್, ಎಸಿಎಫ್ ಪುಟ್ಟಸ್ವಾಮಿ, ಆರ್‌ಎಫ್‌ಓ ರವಿಕುಮಾರ್, ವಿಜಯಕುಮಾರ್ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪಶುವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಹೆಣ್ಣಾನೆಯನ್ನು  ಹೂಳಲಾಯಿತು.
ಕನಕಪುರ ತಾಲೂಕಿನ ಗಡಿಪ್ರದೇಶಕ್ಕೆ ಹೊಂದಿಕೊಂಡಂತೆ ನೂರಾರು ಕಿಮೀ ಅಂತರರಾಜ್ಯ ಗಡಿಯಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಅಭಯಾರಣ್ಯಕ್ಕೆ ಸೇರಿದೆ. ಆದರೂ ತಾಲೂಕಿನಾದ್ಯಂತ ಅಕ್ರಮವಾಗಿ ಅರಣ್ಯ ಬೇಟೆಗಾರರ ದಾಳಿಗೆ ಅಮೂಲ್ಯವಾದ ಜಿಂಕೆ, ನವಿಲು, ಕಾಡುಹಂದಿ ಮೊದಲಾದವುಗಳು ಬಲಿಯಾಗುತ್ತಿವೆ, ಸಂಗಮ, ಮುತ್ತತ್ತಿ, ಗಾಳಿಬೋರೆ, ಚೀಲಂದವಾಡಿ ಅರಣ್ಯ ಪ್ರದೇಶಗಳಲ್ಲಿ ಪೋಚರ್‌ಗಳ ಹಾವಳಿ ಹೆಚ್ಚಾಗಿದ್ದು ಅರಣ್ಯ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಅಕ್ರಮ ಬೇಟೆಗಾರರಿಗೆ ಕಡಿವಾಣ ಹಾಕಬೇಕು, ರಕ್ಷಿಸಲು ಮುಂದಾಗುವ ಪ್ರಭಾವೀ ರಾಜಕೀಯ ವ್ಯಕ್ತಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆನೆ ದಾಳಿ: ವ್ಯಕ್ತಿ ಸಾವು
ಕನಕಪುರ:
ತಾಲೂಕಿನ ಕೂತಗಲೆ ಗ್ರಾಮದಲ್ಲಿ ಮಂಗಳವಾರ ಸಂಜೆ ಆನೆಯ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆನೆಯ ದಾಳಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯನ್ನು ಸುರೇಶ್ (35) ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement