ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅರಣ್ಯ ಉದ್ಯಾನ ಕಾಮಗಾರಿ ಪರಿಶೀಲನೆ

Srinivasa Murthy VN
Updated On : 20 Dec 2013, 12:01 pm

ದೇವನಹಳ್ಳಿ: ದೇವನಹಳ್ಳಿ - ದೊಡ್ಡಬಳ್ಳಾಪುರ ರಸ್ತೆಯ ದೊಡ್ಡಕೆರೆ ಸಮೀಪವಿರುವ ಅರಣ್ಯ ಇಲಾಖೆಗೆ ಸೇರಿದ 35 ಎಕರೆ ಪ್ರದೇಶದಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳು ಮತ್ತು ಸಸ್ಯಗಳು ಅಲ್ಲದೆ ಔಷಧೀಯ ಮರಗಳು ಇದ್ದು ಈ ಪ್ರದೇಶದಲ್ಲಿ ಸುಮಾರು 80 ಲಕ್ಷ ರು. ವೆಚ್ಚದಲ್ಲಿ ಅರಣ್ಯ ಉದ್ಯಾನವನ ನಿರ್ಮಿಸಲಾಗುತ್ತಿದೆ.
ಶಾಸಕ ಪಿಳ್ಳಮುನಿಶಾಮಪ್ಪ ಬುಧವಾರ ಈ ಕಾಮಗಾರಿಯ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಈ ಅರಣ್ಯ ಉದ್ಯಾನವನದಲ್ಲಿ ಎರಡು ಕಿ.ಮೀ. ಉದ್ದದ ವಾಕಿಂಗ್ ಟ್ರ್ಯಾಕ್, ಮಕ್ಕಳಿಗಾಗಿ ಆಟದ ಮೈದಾನ, ಯೋಗ ತರಬೇತಿಗೆ ಅವಕಾಶ ಅಲ್ಲದೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇನ್ನು ಎರಡು ತಿಂಗಳೊಳಗಾಗಿ  ಪೂರ್ಣಗೊಳ್ಳಲಿದೆ ಎಂದರು.
ತಾಲೂಕಿನ ಎಂಟು ಕೆರೆಗಳ ಅಭಿವೃದ್ಧಿಗೆ ಎಂಟು ಕೋಟಿ ರು. ಮಂಜೂರಾಗಿದೆ ಎಂದು ತಿಳಿಸಿ ಸರ್ಕಾರದ ಯಾವುದೇ ಇಲಾಖೆಗೆ ಸೇರಿದ ಎಲ್ಲ ಜಮೀನುಗಳನ್ನು ಗುರುತಿಸಿ ಕಾಂಪೌಂಡ್ ಹಾಕಲಾಗುತ್ತಿದೆ ಎಂದರು.
ಇದೇ ಸಂಧರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್ ಮಾತನಾಡಿ ಪ್ರಥಮ ಹಂತವಾಗಿ ಇಲ್ಲಿನ 35 ಎಕರೆ ಪ್ರದೇಶದಲ್ಲಿ ಸಾರ್ವಜನಿಕರಿಗಾಗಿಯೇ ಅಭಿವೃದ್ಧಿ ಪಡಿಸಲಾಗುತ್ತಿದ್ದು ಈಗಾಗಲೇ ಇಲ್ಲಿ ಅನೇಕ ಔಷಧೀಯ ಮರಗಳು ಮತ್ತು ಸಸ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇಲ್ಲಿಗೆ ಬರುವ ಸಾರ್ವಜನಿಕರಿಗೆ ಔಷಧೀಯ ಸಸ್ಯಗಳ ಪರಿಚಯ ಮತ್ತು ಉಪಯೋಗದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು. ಅರಣ್ಯಾಧಿಕಾರಿ ಆರ್.ಶಾಂತಕುಮಾರ್ ಸ್ವಾಮಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement