ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹುಟ್ಟು ಹಬ್ಬ ಪ್ರಯುಕ್ತ ಕಂಬಳಿ ವಿತರಣೆ

Srinivasa Murthy VN
Updated On : 19 Dec 2013, 11:59 am

ಕನಕಪುರ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ದೊರೆಯಬೇಕು ಎಂಬ ಮಹತ್ವಾಕಾಂಕ್ಷೆಯಿಂದ ದುಡಿಯುತ್ತಿರುವ ಯುವ ಮುಖಂಡ ಡಿ.ಕೆ.ಸುರೇಶ್ ಅವರು ಇಂದಿನ ಯುವಪೀಳಿಗೆಗೆ ಆದರ್ಶವಾಗುವಂಥ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ರಾಮನಗರ ಜಿಪಂ ವಿರೋಧಪಕ್ಷದ ಮುಖಂಡ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಅವರು ಕನಕಪುರ ತಾಲೂಕಿನ ಅರಣ್ಯದಂಚಿನ ಗ್ರಾಮಗಳಾದ ಹೂಳ್ಯ, ಹೊಸದೊಡ್ಡಿ, ಚೀಲಂದವಾಡಿ ಮೊದಲಾದ ಕಡೆಗಳಲ್ಲಿ ಸಂಸದ ಡಿ.ಕೆ.ಸುರೇಶ್‌ರ 48ನೇ ಹುಟ್ಟು ಹಬ್ಬವನ್ನು ಹರಿಜನ, ಗಿರಿಜನರಿಗೆ ಕಂಬಳಿಗಳನ್ನು ವಿತರಿಸುವ ಮೂಲಕ ವಿನೂತನವಾಗಿ ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ಉಯ್ಯಂಬಳ್ಳಿ ಹಾಗೂ ಕೋಡಿಹಳ್ಳಿ ಹೋಬಳಿಗಳಲ್ಲಿ ಸುಮಾರು ಎರಡು ಸಾವಿರ ಕಂಬಳಿಗಳ ವಿತರಣೆ ನಡೆಯಿತು.
ಬಹುಪಾಲು ಎಲ್ಲಾ ಗ್ರಾಮಗಳೂ ಕಾಂಕ್ರಿಟ್ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕಂಡಿವೆ. ಇವುಗಳೊಂದಿಗೆ ಶಾಲಾ ಕಾಲೇಜುಗಳ ಸ್ಥಾಪನೆ, ದೇವಾಲಯಗಳ ಜೀರ್ಣೋದ್ಧಾರ, ಬಡಜನರಿಗೆ ನಿವೇಶನಗಳು ಮನೆಗಳ ವಿತರಣೆಯೂ ನಡೆದಿದೆ. ಎಲ್ಲವೂ ಯಾವುದೇ ಫಲಾಪೇಕ್ಷೆಯಿಲ್ಲದೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ಫಲವಾಗಿಯೇ ಇಂದು ಡಿ.ಕೆ.ಸುರೇಶ್ ಜನಾದರಣೀಯ ನಾಯಕರಾಗಿದ್ದು ಸಂಸದರಾಗಿ ಆಯ್ಕೆಗೊಂಡಿದ್ದಾರೆ ಇಕ್ಬಾಲ್ ಹುಸೇನ್ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement