ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅರುಂಧತಿ ಸೇವಾ ಸಮಿತಿ ಅಧ್ಯಕ್ಷರಾಗಿ ಕೆ.ಮಂಜುನಾಥ್

Srinivasa Murthy VN
Updated On : 22 Dec 2013, 12:16 pm

ದೇವನಹಳ್ಳಿ: ತಾಲೂಕು ಅರುಂಧತಿ ಸೇವಾ ಸಮಿತಿಯ 2013-14 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಂಘದ ಅಧ್ಯಕ್ಷ ಬಿ.ಕೆ.ಶಿವಪ್ಪ ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.    ಕಳೆದ ಸಾಲಿನಲ್ಲಿ ಬಡವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಅಲ್ಲದೆ ಇತರ ಸೇವಾ ಸಂಸ್ಥೆಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಮತ್ತು ಫಲಾನುಭವಿಗಳನ್ನು ಗುರುತಿಸಿ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು. ನೂತನ ಅಧ್ಯಕ್ಷ ಮಂಜುನಾಥ್ ಮಾತನಾಡಿದರು.ನೂತನ ಸಾಲಿಗೆ ಕೆ.ಮಂಜುನಾಥ್-ಅಧ್ಯಕ್ಷರು, ಅಣ್ಣೇಶ್ವರ ಎ.ಎಂ.ಕಾಂತರಾಜು- ಗೌರವಾಧ್ಯಕ್ಷರು, ಜಾಲಿಗೆ ಎಂ.ಮುನಿರಾಜು- ಕಾರ್ಯಾಧ್ಯಕ್ಷರು, ವಿಜಯಪುರ ಅಮರನಾರಾಯಣ ಮತ್ತು ಪುರಸಭಾ ಸದಸ್ಯ ನರಸಿಂಹಮೂರ್ತಿ-ಉಪಾಧ್ಯಕ್ಷರುಗಳು, ಬಿಜ್ಜವಾರ ಬಿ.ಎಂ.ನಾಗರಾಜು- ಕಾರ್ಯದರ್ಶಿ, ಪಾಪನಹಳ್ಳಿ ಎಂ.ಡಿ.ಶಂಕರ್ - ಸಹ ಕಾರ್ಯದರ್ಶಿ, ಡಿ.ಎಂ.ವೇಣುಗೋಪಾಲ್ ಖಜಾಂಚಿ, ಪಾಪನಹಳ್ಳಿ ಹರ್ಷನಾಥ್, ಪಾಪನಹಳ್ಳಿ ಡಿ.ನಾರಾಯಣಸ್ವಾಮಿ - ಲೆಕ್ಕ ಪರಿಶೋಧಕರಾಗಿ ಹಾಗೂ ಸಂಘ ಮಾರ್ಗದರ್ಶಕರಾಗಿ ಬಿ.ಕೆ.ಶಿವಪ್ಪ ಆಯ್ಕೆಯಾಗಿದ್ದಾರೆ.

ಸುಸಜ್ಜಿತ ನೂತನ ಬಸ್ ನಿಲ್ದಾಣಕ್ಕೆ ಫೆಬ್ರವರಿಯಲ್ಲಿ ಚಾಲನೆ
ಮಾಗಡಿ:
ಪಟ್ಟಣದಲ್ಲಿ ಸುಸಜ್ಜಿತ ನೂತನ ಕೆ.ಎಸ್.ಆರ್.ಟಿ.ಸಿ  ಬಸ್ ನಿಲ್ದಾಣ ಕಾಮಗಾರಿ ತ್ವರಿತಗತಿಯಲ್ಲಿ ನಡೆಯತ್ತಿದ್ದು, 2014 ರ ಫೆಬ್ರವರಿ ತಿಂಗಳಲ್ಲಿ ಚಾಲನೆ ನೀಡುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ಭರವಸೆ ನೀಡಿದರು. ಅವರು ಇಲ್ಲಿನ ನೂತನ ಬಸ್ ನಿಲ್ದಾಣದ ಕಾಮಗಾರಿ ವೀಕ್ಷಿಸಿ ಮಾತನಾಡಿ ಬಸ್ ನಿಲ್ದಾಣದ ಕಾಮಗಾರಿ ಬಹುತೇಕ  ಪೂರ್ಣಗೊಂಡಿದೆ. ಬಸ್ ಸಂಚಾರದ ವ್ಯವಸ್ಥೆ ಹಾಗೂ ಫುಟ್ಪಾತ್ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, 2014 ರ ಜನವರಿ ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಎಇಇ ಸೋಮಶೇಖರ್ ತಿಳಿಸಿದ್ದಾರೆ. ಕಾಮಗಾರಿಯ ನೀಲಿ ನಕ್ಷೆಯನ್ನು ಸಹ ಪರಿಶೀಲಿಸಿದ್ದೇನೆ. ಅದರಂತೆ ಕಾಮಗಾರಿ ಪೂರ್ಣಗೊಂಡ ನಂತರ  ಆದಷ್ಟು ಬೇಗ ಬಸ್ ನಿಲ್ದಾಣಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ ಬಾಲಕೃಷ್ಣ, ಸಾರ್ವಜನಿಕರ ಹಿತದೃಷ್ಟಿಯಿಂದ ಸುಸಜ್ಜಿತ  ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಾಣಕ್ಕೆ ಶಕ್ತಿ ಮೀರಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ  ಈ ಸೇವೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಹ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಲಾಗಿದೆ. ಸಂಜೆ ವೇಳೆ  ಬಸ್ ಸಂಚಾರ ಕಡಿಮೆ ಇದೆ ಎಂಬ ದೂರುಗಳು ಸಹ ಬಂದಿದ್ದು, ಈ ಸಂಬಂಧ ಡಿಪೋ  ವ್ಯವಸ್ಥಾಪಕರಲ್ಲಿ ಚರ್ಚಿಸಿದ್ದೇನೆ. ಸಂಜೆ ವೇಳೆ ಬೆಂಗಳೂರು ಮಾರ್ಗದ ಬಸ್ ಸಂಚಾರದ ವ್ಯವಸ್ಥೆಯನ್ನು ಸರಪಡಿಸುವಂತೆ ಅವರಲ್ಲಿ ಸೂಚಿಸಿದ್ದೇನೆ ಎಂದು ಶಾಸಕರು ವಿವರಿಸಿದರು. ತಾ.ಪಂ. ಅಧ್ಯಕ್ಷ ಕೃಷ್ಣ, ತಾ.ಪಂ.ಇಓ ಅಕ್ಕೋಜಿ,ಪುರಸಭಾ ಸದಸ್ಯ ನಾಗೇಂದ್ರ, ಎಇಇ ಸೋಮಶೇಖರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement