ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಜ್ಞಾನ ಗಂಗೋತ್ರಿ ಶಾಲೆಯಲ್ಲಿ ಮಕ್ಕಳ ಸಂತೆ

Srinivasa Murthy VN
Updated On : 22 Dec 2013, 12:16 pm

ದೇವನಹಳ್ಳಿ: ಇಲ್ಲಿನ ಜ್ಞಾನ ಗಂಗೋತ್ರಿ ಶಾಲೆ ಆಡಳಿತ ಮಂಡಳಿಯವರು 2013-14 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಅಂಗವಾಗಿ ಮಕ್ಕಳ ಸಂತೆ ಮತ್ತು ವೇಷಭೂಷಣ ಸ್ಪರ್ಧೆಯನ್ನು ಶನಿವಾರ ಆಯೋಜಿಸಿದ್ದರು. ಎಲ್ಲ ಗ್ರಾಮಗಳಲ್ಲಿ ಸಂತೆಗಳು ನಡೆಯುವುದು ಸಾಮಾನ್ಯ ಎಲ್ಲ ರೀತಿಯ ವಸ್ತುಗಳು ತರಕಾರಿಗಳು ಸಿಗುತ್ತವೆ  ಅದೇ ರೀತಿ ಇಲ್ಲಿನ ಶಾಲೆಯವರು ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ಇದ್ದು ಎಲ್ಲ ಬಗೆಯ ತರಕಾರಿ ಕಾಯಿ ಪಲ್ಯೆಗಳು, ಹಣ್ಣುಗಳು, ಬಟ್ಟೆಗಳು ಮಕ್ಕಳ ಆಟೋಪಕರಣಗಳು, ಸಿಹಿ ತಿಂಡಿ ಬಿಸ್ಕತ್ ಅಲ್ಲದೆ ಇಲ್ಲಿನ ಪ್ರಸಿದ್ದ ಚಕ್ಕೋತಹಣ್ಣು ಮತ್ತು ಮೊಟ್ಟೆಗಳನ್ನು ಮಕ್ಕಳು ಮಾರಾಟ ಮಾಡಿದರು. ಈ ಮಕ್ಕಳ ಸಂತೆಗೆ ಬರುವವರು  ವ್ಯಾಪಾರ ಮಾಡಬೇಕಾದರೆ ಹಣವನ್ನು ಪಾವತಿಸಿ ಟೋಕನ್ ಪಡೆದು ಸರಕುಗಳನ್ನು ಪಡೆಯುತ್ತಿದ್ದುದು ಸಾಮಾನ್ಯವಾಗಿತ್ತು. ಈ ಸಂತೆಯಲ್ಲಿ ಒಂದನೇ ತರಗತಿಯ ಹರಿಸ್ಮಿತ ಎಂಬ ವಿದ್ಯಾರ್ಥಿನಿ 2500 ರು.ಗಳ ವ್ಯಾಪಾರ ಮಾಡಿದ್ದು ಸೇರಿ  ಸುಮಾರು 15 ಸಾವಿರದಷ್ಟು ವ್ಯಾಪಾರ ಮಾಡಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಪದ್ಮ ತಿಳಿಸಿದ್ದಾರೆ.  ಇದೇ ಸಂದರ್ಭದಲ್ಲಿ ಯುಕೆಜಿ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ ಅಲ್ಲದೆ ಮಕ್ಕಳ ಪೋಷಕರಿಗಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಿದ್ದು ಇಂತಹ ಮಕ್ಕಳ ಸಂತೆ ದೇವನಹಳ್ಳಿ ತಾಲೂಕಿನಲ್ಲಿ ಖಾಸಗಿ ಶಾಲೆಗಳಲ್ಲಿಯೇ ಪ್ರಥಮ ಪ್ರಯತ್ನವಾಗಿದೆ ಎಂದು ಹಿರಿಯ ಶಿಕ್ಷಕ ದಾಸಪ್ಪ ತಿಳಿಸಿ ಇದರಿಂದ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯಲು ಸಾಧ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement