ಬೆಂಗಳೂರು ಗ್ರಾಮಾಂತರ

ಜಿಲ್ಲೆಗೂ ಜಲ ಗಂಡಾಂತರ

 ಮತ್ತೀಕೆರೆ ಜಯರಾಮ್
ರಾಮನಗರ
: ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆಯಿಂದ ರಾಮನಗರ ಜಿಲ್ಲೆಗೂ ಜಲ ಗಂಡಾಂತರ ಕಾದಿದೆ. ಉದ್ದೇಶಿತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಗ್ರಹಣ ಮತ್ತು ಕಾವೇರಿ ಆಶ್ರಿತ ಪ್ರದೇಶಗಳ ಕುಡಿಯುವ ನೀರಿನ ವ್ಯವಸ್ಥೆಗೆ ಸಂಚಕಾರದ ಭೀತಿ ಎದುರಾಗಿದೆ.
ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅಧಿಸೂಚನೆಯನ್ನು ಫೆ.20ರೊಳಗೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಬೆನ್ನಲ್ಲೇ ಈ ಭಾಗದಲ್ಲಿ ತಳಮಳ ಮೂಡಿದೆ. ಭೀಕರ ಬರದಿಂದ ಬವಣೆಗೆ ಗುರಿಯಾಗಿರುವ ಇಲ್ಲಿನ ಜನತೆಗೆ ಭವಿಷ್ಯದ ಚಿಂತೆ ಕಾಡುತ್ತಿದೆ.
ಜಿಲ್ಲೆಯ ಸುಮಾರು 65 ಕಿ.ಮೀ. ಗಡಿಯಂಚಿನಲ್ಲಿ ಕಾವೇರಿ ಹರಿದರೂ ಈ ನೆಲದ ಜನರ ದಾಹ ನೀಗಿಸುವ ಪ್ರಯತ್ನ ನಡೆಸಿಲ್ಲ. ಎತ್ತಿನಹೊಳೆ ಯೋಜನೆ ಅನುಷ್ಠಾನ, ಪರಮಶಿವಯ್ಯ ವರದಿ ಜಾರಿಗೆ ಇನ್ನೂ ಅಂತಿಮ ರೂಪ ಸಿಕ್ಕಿಲ್ಲ.  ಅಧಿಸೂಚನೆ ಜಾರಿ ಬಳಿಕ ಕಾವೇರಿಯನ್ನೂ ಕಸಿದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ.
ಯೋಜನೆಗಳಿಗೆ ಅಡ್ಡಿ: ನ್ಯಾಯಾಧೀಕರಣದ ಅಂತಿಮ ತೀರ್ಪಿನಲ್ಲಿ ರಾಜ್ಯದ ಕಾವೇರಿ ಕೊಳ್ಳದ ಬೆಳೆ ಪ್ರಮಾಣ, ಜಲಾಶಯಗಳಲ್ಲಿ ನೀರು ಶೇಖರಣೆ ಮತ್ತು ಬಳಕೆ ಪ್ರಮಾಣವನ್ನೂ ಅದರಲ್ಲಿ ನಿಗದಿಪಡಿಸಲಾಗಿದೆ. ಕುಡಿಯುವ ನೀರಿಗೂ ಮಿತಿ ಹೇರಲಾಗಿದೆ. ಇಷ್ಟಲ್ಲದೆ, ಹೊಸದಾಗಿ ನೀರಾವರಿ ಯೋಜನೆಗಳ ಜಾರಿಗೂ ಅವಕಾಶ ನಿರಾಕರಣೆಯ ಅಂಶವು ಈ ಜಿಲ್ಲೆ ಪಾಲಿಗೆ ತೀವ್ರ ಪ್ರತಿಕೂಲವಾಗಲಿದೆ.
ಜಿಲ್ಲೆಗೆ ಮಂಜೂರಾಗಿರುವ ರಾಮನಗರ-ಚನ್ನಪಟ್ಟಣ ನಗರಗಳ ಕುಡಿಯುವ ನೀರಿನ ಸಾಮರ್ಥ್ಯ ಹೆಚ್ಚಳ, ಕಣ್ವ ಏತ ನೀರಾವರಿ ಯೋಜನೆ, ಕನಕಪುರ ತಾಲೂಕಿನ ಸಮಗ್ರ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗಳ ಅನುಷ್ಠಾನಕ್ಕೆ ಅಡೆತಡೆ ಎದುರಾಗುವ ಸಾಧ್ಯತೆ ಇದೆ. ಅರ್ಕಾವತಿ-ಕಾವೇರಿ ಸಂಪರ್ಕ, ಮಂಚನಬಲೆಗೆ ಹೇಮೆಯ ಹರಿವು ಸೇರಿದಂತೆ ಕನಸಿನ ಯೋಜನೆಗಳು ನನಸಾಗುವುದು ದುರ್ಲಬ.
ಎಸ್.ಎಂ.ಕೃಷ್ಣ ಅಧಿಕಾರಾವಧಿಯಲ್ಲಿ ರಾಜ್ಯದ ಕಾವೇರಿ ಕಣಿವೆ ಯೋಜನೆಗಳ ಪುನಶ್ಚೇತನ ಮತ್ತು ವಿಸ್ತರಣೆಗೆ ಅವಕಾಶ ನೀಡದಂತೆ ತಮಿಳುನಾಡು ಸಿಎಂ ಜಯಲಲಿತಾ ಸುಪ್ರೀಂ ಕೋರ್ಟ್, ನ್ಯಾಯಾಧೀಕರಣಕ್ಕೆ ತಕರಾರು ಸಲ್ಲಿಸಿದ್ದರು. ಆ ಪೈಕಿ ಕೆರೆಗಳ ಹೂಳೆತ್ತುವುದಕ್ಕೂ ಆಕ್ಷೇಪವಿತ್ತು. ಈಗ ಅವರು ಹೊಸ ಯೋಜನೆಗಳಿಗೆ ಅಡ್ಡಿಪಡಿಸದೆ ಖಂಡಿತ ಇರಲಾರರು.  
ಕಡಿತವಾಗುವ ಆತಂಕ: ಸದ್ಯದ ಮಟ್ಟಿಗೆ ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರಗಳು,  ಕನಕಪುರ ಪಟ್ಟಣ ಮತ್ತು ಸೀಮಿತ ಗ್ರಾಮೀಣ ಪ್ರದೇಶಕ್ಕೆ ಈಗಾಗಲೇ ಕಾವೇರಿ ಕುಡಿಯುವ ನೀರಿನ ಸೌಲಭ್ಯವಿದೆ. ರಾಮನಗರ-ಚನ್ನಪಟ್ಟಣಕ್ಕೆ ನಿತ್ಯ 18 ಎಂಎಲ್ಡಿ ನೀರು, ಕನಕಪುರಕ್ಕೆ ಬೆಂಗಳೂರು ನಗರ ನೀರು ಸರಬರಾಜು ಮಂಡಳಿ ಪೈಪ್ಲೈನ್ನಿಂದ 3 ಎಂಎಲ್ಡಿ ನೀರು ಸರಬರಾಜು ಮಾಡಲಾಗುತ್ತಿದೆ.
ಇಗ್ಗಲೂರಿನ ಎಚ್.ಡಿ.ದೇವೇಗೌಡ ಬ್ಯಾರೇಜ್, ಗರಕಹಳ್ಳಿ ಏತ ನೀರಾವರಿ ಯೋಜನೆಗಳ ಸಹಿತ ಒಟ್ಟಾರೆ ರಾಮನಗರ ಜಿಲ್ಲೆಯು ನೇರವಾಗಿ ವಾರ್ಷಿಕ 3 ಟಿಎಂಸಿಯಷ್ಟು ಕಾವೇರಿ ನೀರನ್ನು ಬಳಸಿಕೊಳ್ಳುತ್ತಿದೆ. ಇದಲ್ಲದೆ ಶಿಂಷೆ, ಕಾವೇರಿ ಹರಿವಿನಿಂದಾಗಿ ಇಲ್ಲಿ 1 ಟಿಎಂಸಿಯಷ್ಟು ಅಂತರ್ಜಲ ಲಭ್ಯವಿದೆ. ಈಗ ಹೈ ತೀರ್ಪಿನ ಅಧಿಸೂಚನೆ ಬರಸಿಡಿಲಿನಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ