ಅಭ್ಯರ್ಥಿಗಳ ವೆಚ್ಚ ಲೆಕ್ಕ ಇಡಲು ನೋಡಲ್ ಅಧಿಕಾರಿಗಳು
ರಾಮನಗರ: ಕರ್ನಾಟಕ ರಾಜ್ಯ ಚುನಾವಣಾ ಆಯೋಗ 2013ರ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ನಡೆಸಲು ಫೆ.16 ರಿಂದ ಮಾ.13ರವರೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿರುವುದರಿಂದ ಅಭ್ಯರ್ಥಿಗಳ ವೆಚ್ಚದ ವಿವರಗಳ ಪರಿಶೀಲನೆಗೆ ಈ ಕೆಳಕಂಡ ಸಿಬ್ಬಂದಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಿ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ.
ರಾಮನಗರ ನಗರಸಭೆ: ವಾರ್ಡ್ ಸಂಖ್ಯೆ 1 ರಿಂದ 8ರವರೆಗೆ , ಸಹಾಯಕ ಲೆಕ್ಕ ನಿಬಂಧಕ ವೇಣುಗೋಪಾಲ್, ವಾರ್ಡ್ ಸಂಖ್ಯೆ 9 ರಿಂದ 16ರವರೆಗೆ ಜಿ.ಪಂ. ಲೆಕ್ಕ ಅಧೀಕ್ಷಕ ಮೋಹನ್ಕುಮಾರ್ರನ್ನು ನೇಮಿಸಲಾಗಿದೆ. ಇವರು ಮಿನಿವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವರು.
ವಾರ್ಡ್ ಸಂಖ್ಯೆ 17 ರಿಂದ 24ರವರೆಗೆ ಜಿ.ಪಂ. ಲೆಕ್ಕ ಅಧೀಕ್ಷಕ ಆರ್.ಎಸ್.ಸುರೇಂದ್ರಕುಮಾರ್, ವಾರ್ಡ್ ಸಂಖ್ಯೆ 25 ರಿಂದ 31ರವರೆಗೆ ಜಿ.ಪಂ. ಲೆಕ್ಕ ಅಧೀಕ್ಷಕ ನಾರಾಯಣ್ ಇವರು ನಿಯೋಜನೆಗೊಂಡಿದ್ದಾರೆ. ಇವರು ನಗರಸಭೆ ಮೀಟಿಂಗ್ಹಾಲ್ನಲ್ಲಿ ಕಾರ್ಯನಿರ್ವಹಿಸುವರು.
ಚನ್ನಪಟ್ಟಣ ನಗರ ಸಭೆ: ವಾರ್ಡ್ ಸಂಖ್ಯೆ 1 ರಿಂದ 8ರವರೆಗೆ ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ದೊಡ್ಡಪುಟ್ಟ, ವಾರ್ಡ್ ಸಂಖ್ಯೆ 9 ರಿಂದ 16ರವರೆಗೆ ಉಪ ಖಜಾನೆ ಮುಖ್ಯ ಲೆಕ್ಕಿಗ ಶ್ರೀನಿವಾಸ್ ರಾವ್ ನೇಮಕಗೊಂಡಿದ್ದಾರೆ. ಇವರು ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುವರು.
ವಾರ್ಡ್ ಸಂಖ್ಯೆ 17 ರಿಂದ 24 ರವರೆಗೆ ಉಪಖಜಾನೆ ಮುಖ್ಯ ಲೆಕ್ಕಿಗೆ ಬಿ.ಎ.ಮಲ್ಲಯ್ಯ, ವಾರ್ಡ್ ಸಂಖ್ಯೆ 25 ರಿಂದ 31ರವರೆಗೆ ತಾ.ಪಂ. ಗುಮಾಸ್ತ ರಾಜೇಶ್ ನೇಮಕಗೊಂಡಿದ್ದಾರೆ. ಇವರು ನಗರಸಭೆ ಮೀಟಿಂಗ್ ಹಾಲ್ನಲ್ಲಿ ಕಾರ್ಯನಿರ್ವಹಿಸುವರು.
ಮಾಗಡಿ ಪುರಸಭೆ: ವಾರ್ಡ್ ಸಂಖ್ಯೆ 1 ರಿಂದ 8ರವರೆಗೆ ತಾ.ಪಂ. ಲೆಕ್ಕಾಧಿಕಾರಿ ಬಸವರಾಜಯ್ಯ, ವಾರ್ಡ್ ಸಂಖ್ಯೆ 9 ರಿಂದ 16ರವರೆಗೆ ಜಿ.ಪಂ. ಎಂಜಿನಿಯರಿಂಗ್ ಉಪ ವಿಭಾದ ಲೆಕ್ಕಾಧಿಕಾರಿ ಚಲುವರಾಜು ನೇಮಕಗೊಂಡಿದ್ದಾರೆ. ಇವರು ಮಾಗಡಿ ಪುರಸಭೆ ಕಚೇರಿಯಲ್ಲಿ ಕಾರ್ಯನಿರ್ವಹಿಸುವರು.
ವಾರ್ಡ್ ಸಂಖ್ಯೆ 17 ರಿಂದ 23ರವರೆಗೆ ಉಪಖಜಾನೆ ಲೆಕ್ಕಾಧೀಕ್ಷಕ ಪಿ.ಎನ್.ಚಂದ್ರಶೇಖರ್ ಅವರನ್ನು ನೇಮಿಸಲಾಗಿದೆ. ಇವರು ಸಣ್ಣ ನೀರಾವರಿ ಇಲಾಖೆ, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಕಾರ್ಯನಿರ್ವಹಿಸುವರು.
ಕನಕಪುರ ಪುರಸಭೆ: ವಾರ್ಡ್ ಸಂಖ್ಯೆ 1 ರಿಂದ 9ರವರೆಗೆ ತಾ.ಪಂ. ಸಹಾಯಕ ಲೆಕ್ಕಪರಿಶೋಧಕ ಎಂ.ಎಲ್.ಸತ್ಯನಾರಾಯಣ, ವಾರ್ಡ್ ಸಂಖ್ಯೆ 10 ರಿಂದ 18ರವರೆಗೆ ಉಪಖಜಾನೆ ಮುಖ್ಯ ಲೆಕ್ಕಾಧಿಕಾರಿ ಲಕ್ಷ್ಮೀನಾರಾಯಣ, ವಾರ್ಡ್ ಸಂಖ್ಯೆ 19 ರಿಂದ 22ರವರೆಗೆ ಉಪ ಖಜಾನೆ ಮುಖ್ಯ ಲೆಕ್ಕಾಧಿಕಾರಿ ಕೇಶವಮೂರ್ತಿ ಇವರು ನೇಮಕಗೊಂಡಿದ್ದಾರೆ. ಇವರು ಸದರಿ ತಾಲ್ಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುವರು.