ವಿಜಯಪುರ 7, 13ನೇ ವಾರ್ಡ್ನ ಅಭ್ಯರ್ಥಿಗಳ ಅವಿರೋಧ ಆಯ್ಕೆ
ವಿಜಯಪುರ: ವಿಜಯಯಪುರ ಪುರಸಭೆಗೆ 7ನೇ ವಾರ್ಡಿನಿಂದ ಮಾಜಿ ಪುರಸಭಾ ಅಧ್ಯಕ್ಷ ಎಂ.ಸತೀಶ್ಕುಮಾರ್
ಮತ್ತು 13ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ನಿಸಾರ್ಸಾಬ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪುರಸಭೆಗೆ ಒಟ್ಟು 23 ವಾರ್ಡ್ಗಳಿಂದ 130 ಮಂದಿ ನಾಮಪತ್ರ ಸಲ್ಲಿಸಿದ್ದು,ಅದರಲ್ಲಿ 100 ನಾಮಪತ್ರ ಅಂಗೀಕಾರ, 30 ನಾಮಪತ್ರಗಳು ಸರಿಯಾದ ದಾಖಲೆಗಳಿಲ್ಲದ ಕಾರಣ ತಿರಸ್ಕೃತಗೊಂಡಿವೆ.
7ನೇ ವಾರ್ಡಿನಲ್ಲಿ ಕಾಂಗ್ರೆಸ್ನಿಂದ ಎಂ.ಸತೀಶ್ ಕುಮಾರ್,ಜೆಡಿಎಸ್ನಿಂದ ವಿಶ್ವನಾಥ್, ಬಿಜೆಪಿಯಿಂದ ಕನಕರಾಜು ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆಯ ಸಂದರ್ಭದಲ್ಲಿ ಜೆಡಿಎಸ್ ವಿಶ್ವನಾಥ್ ಮತ್ತು ಬಿಜೆಪಿಯ ಕನಕರಾಜು ಅವರ ದಾಖಲೆಗಳು ಸರಿಯಿಲ್ಲದ ಕಾರಣ ಎಂ.ಸತೀಶ್
ಕುಮಾರ್ ಅವರು ಅವಿರೋಧ ಆಯ್ಕೆಯಾದರು. 13ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಸಾರ್
ಸಾಬ್ ಮತ್ತು ಜೆಡಿಎಸ್ನಿಂದ ಕೆ.ನದೀಂಪಾಷ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ನ ನದೀಂ ಪಾಷ ಅವರ ನಾಮಪತ್ರ ತಿರಸ್ಕೃತಗೊಂಡ ಕಾರಣ ನಿಸಾರ್ ಸಾಬ್ ಅವಿರೋಧ ಆಯ್ಕೆಯಾದರು.