ವಿಜೃಂಭಣೆಯ ಕೊಂಡ
ಚನ್ನಪಟ್ಟಣ: ತಾಲೂಕಿನ ಐತಿಹಾಸಿಕ ಸರಗೂರು ಗ್ರಾಮದ ಬಸವೇಶ್ವರ ದೇವರ ಕೊಂಡ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ತಾಲೂಕಿನ ಜನತೆಯ ಜತೆಗೆ ಮದ್ದೂರು, ಮಳವಳ್ಳಿ, ಕನಕಪುರ, ರಾಮನಗರ ಸೇರಿದಂತೆ ಹಲವಾರು ಗ್ರಾಮಗಳಿಂದ ಸಹಸ್ರಾರು ಭಕ್ತರು ವಿಜೃಂಭಣೆಯ ಸರಗೂರು ಕೊಂಡಕ್ಕೆ ಸಾಕ್ಷಿಯಾದರು.
ದೊಡ್ಡ ಕೊಂಡೋತ್ಸವ: ರಾಜ್ಯದ ಅತಿ ದೊಡ್ಡ ಕೊಂಡೋತ್ಸವದ ಪೈಕಿ ಒಂದಾಗಿರುವ ಸರಗೂರು ಕೊಂಡಕ್ಕೆ ತನ್ನದೇ ಆದ ಇತಿಹಾಸ ವಿದ್ದು, ಸುತ್ತಮುತ್ತಲ ಗ್ರಾಮಸ್ಥರು ಈ ಕೊಂಡಕ್ಕೆ ಸೌದೆತರುವ ಪದ್ಧತಿಯಿದೆ.
ಫೆಬ್ರವರಿ ಮಾಹೆಯಲ್ಲಿ ಬರುವ ಸೋಮುವಾರ ನಡೆಯುವ ಕೊಂಡೋತ್ಸವಕ್ಕೆ ಅಂದೇ ಕಡಿದ ಮರದಿಂದ ಸೌಧೆ ತರುವುದು ವಾಡಿಕೆ. ತಮ್ಮ ರಾಸುಗಳಿಗೆ ಯಾವುದಾದರೂ ಕಾಯಿಲೆ ಬಂದಾಗ ಹರಕೆ ಹೊತ್ತು ಕೊಳ್ಳುವ ರೈತರು ಈ ಕೊಂಡಕ್ಕೆ ಸೌದೆ ತಂದು ಹಾಕಿ ಹರಕೆ ತೀರಿಸಿ ಕೊಳ್ಳುತ್ತಾರೆ.
ಹೀಗೆ ಹರಕೆ ಹೊತ್ತರೈತರು ತಂದು ಹಾಕುವ ಸೌದೆಯ ಪ್ರಮಾಣ ಸಾವಿರಾರು ಟನ್‌ಗಳಾಗಲಿದ್ದು, ಸೋಮವಾರ ರಾತ್ರಿ ಪೂಜೆ ಸಲ್ಲಿಸಿ ಕೊಂಡಕ್ಕೆ ಬೆಂಕಿ ಹಾಕಲಾಗುತ್ತದೆ. ಬೆಂಕಿ ಹಾಕಲಾಗುತ್ತದೆ. ಮಂಗಳವಾದ ಮುಂಜಾನೆ ದೇವಾಲಯದ ಅರ್ಚಕ ದೇವರ ಕಳಶ ಹೊತತು ಕೊಂಡವನ್ನು ಪ್ರವೇಶಮಾಡುತ್ತಾನೆ.
ಅರ್ಚಕ ಕೊಂಡಕ್ಕೆ ಪ್ರವೇಶ ಮಾಡುವುದಕ್ಕೆ ಮುನ್ನ ಬಸವೇಶ್ವರ ದೇವರ ಬಸವ ಕೊಂಡದ ಸುತ್ತ ಪ್ರದಕ್ಷಿಣೆ ಹಾಕುತ್ತದೆ ಕೊಂಡವನ್ನು ಅರ್ಚಕ ಹಾಯ್ದು ಹೋದ ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ, ಈಬಾರಿ ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ, ಒಕ್ಕಲಿಗರಸಂಘದ ನಿರ್ದೇಶಕ ಮಲ್ಲಿಕಾರ್ಜುನ ಗೌಡ ಸೇರಿದಂತೆ ಅನೇಕ ಗಣ್ಯ ಭಕ್ತಾದಿಗಳು ಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದರು. ಕೊಂಡ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ ಸಂಸದ ನಿಧಿಯಿಂದ ದೇವಾಲಯದ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಿದರು.