ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಲ್ಲರೂ ವಿದ್ಯಾವಂತರಾದರೆ ಮಾತ್ರ ಸಾಮಾಜಿಕ ಸಮಾನತೆ

Srinivasa Murthy VN
Updated On : 27 Jan 2013, 12:27 pm

ನೆಲಮಂಗಲ:  ದೇಶದಲ್ಲಿ ಎಲ್ಲರೂ ವಿದ್ಯಾವಂತರಾದರೆ  ಮಾತ್ರ ಸಾಮಾಜಿಕ ಸಮಾನತೆ ಮೂಡಿ, ಬಡತನ ನಿವಾರಣೆಯಾಗಿ ಸರ್ವರೂ ಅಭಿವೃದ್ಧಿಯಾಗಬೇಕು ಎಂದು ಶಾಸಕ ಎಂ.ವಿ.ನಾಗರಾಜು  ಹೇಳಿದರು.
ಅವರು ಶನಿವಾರ ಪಟ್ಟಣದ  ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಲ್ಲಿ  ಭಾರತ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದದೇಶಭಕ್ತರ ಕನಸಿನಂತೆ ಭವ್ಯ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ನಿಸ್ವಾರ್ಥವಾಗಿ ದುಡಿಯಬೇಕೆಂದು ನುಡಿದರು.
ದೇಶದ ಸ್ವತಂತ್ರ್ಯಕ್ಕಾಗಿ ದುಡಿದ ವೀರಯೋಧರು  ಹಾಗೂ ವೀರ ಮಹಿಳೆಯರ ಸಾಹಸ ನೆನೆಯುತ್ತಾ, ಹಿರಿಯರ ಮಾರ್ಗದರ್ಶನ ಸಲಹೆ ಪಡೆದು ಯುವಕರು ದೇಶವನ್ನು ಮಾದರಿ ಮಾಡುವುದಕ್ಕಾಗಿ ಕಂಕಣಬದ್ಧರಾಗಿ ನಿಲ್ಲಬೇಕು. ಭಯೋತ್ಪದನೆಯನ್ನು ನಿಗ್ರಹಿಸಲು ಭಾರತ ದೇಶ  ಶಕ್ತಿಯುತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ತಿಳಿಸಿದರು. ತಹಶೀಲ್ದಾರ್ ಆರ್. ಅನಿಲ್‌ಕುಮಾರ್  ರಾಷ್ಟ್ರಧ್ವಜಾರೋಹಣ ನೆರವೇರಿಸಿ ಶಾಲಾಮಕ್ಕಳಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ಎನ್.ಪಿ.ಎ.ಅಧ್ಯಕ್ಷ ಎಸ್.ಮಲ್ಲಯ್ಯ, ಪುರಸಭೆ ಉಪಾಧ್ಯಕ್ಷ ಶಿವಕುಮಾರ್, ತಾ.ಪಂ. ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ತಾ.ಕ.ಸಾ.ಪ.ಅಧ್ಯಕ್ಷ ಎನ್.ರಾಜಶೇಖರ್,, ಜಿ.ಪಂ.ಸದಸ್ಯ ರಾಮು,  ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್, ಡಿ.ವೈ.ಎಸ್ಪಿ. ಆರ್.ಮಲ್ಲೇಶ್, ಭೂ ನ್ಯಾಯ ಮಂಡಳಿ ಸದಸ್ಯ ಉಮೇಶ್, ಪುರಸಭಾ ಸದಸ್ಯರಾದ ಎಚ್.ಜಿ.ರಾಜು, ಎನ್.ಎಸ್. ಮೂರ್ತಿ, ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement