ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಮಾಜಘಾತುಕ ಚಟುವಟಿಕೆ ನಿಲ್ಲಲಿ: ಸ್ವಾಮೀಜಿ

Srinivasa Murthy VN
Updated On : 27 Jan 2013, 12:27 pm

ವಿಜಯಪುರ: ನಮ್ಮ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಅನಾಚಾರಗಳಂತಹ ಸಮಾಜ ಘಾತಕ ಚಟುವಟಿಕೆಗಳು ನಿಲ್ಲಬೇಕು. ಅದನ್ನು ತಡೆಯುವುದು ನಮ್ಮೆಲ್ಲರ ಕೈಯಲಿದೆ ಎಂದು ಇಲ್ಲಿನ ಮಹಂತಿ ಮಠದ  ಶ್ರೀ ಮಹದೇವ ಸ್ವಾಮಿಗಳು ತಿಳಿಸಿದರು.
ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪ್ರತಿ ವರ್ಷದಂತೆ ಪುರಸಭಾ ವತಿಯಿಂದ ಹಮ್ಮಿಕೊಂಡಿದ್ದ 64ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಮಖ್ಯ ಅತಿಥಿಗಳಾಗಿ ಮಾಜಿ ಶಾಸಕ ಜಿ. ಚಂದ್ರಣ್ಣ ಮಾತನಾಡಿ ಇಂದು ದೆಹಲಿಯ ರಾಜಪಥದಲ್ಲಿ ನಡೆಯುತ್ತಿರುವ ಪಥ ಸಂಚಲನ ಪ್ರದರ್ಶನದಲ್ಲಿ  ನಮ್ಮ ದೇಶವೂ ಯಾವ ಮಟ್ಟದಲ್ಲಿ ಎಲ್ಲಾ ಸಮರ್ಥ್ಯವನ್ನು ಹೊಂದಿದೆ ಎಂದು ಪ್ರಪಂಚಕ್ಕೆ ತಿಳಿಸಿಕೊಡುತ್ತದೆ.ಇದರ ಜೊತೆ ಜೊತೆಗೆ ಪ್ರತಿಯೊಬ್ಬರು ತಮ್ಮ ಸ್ಥಾನಮಾನಗಳ ಬಗ್ಗೆ ಅರಿತು ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ಗೌರವ ಸಲ್ಲಿಸುವಂತಾಗಬೇಕು ಎಂದು ತಿಳಿಸಿದರು. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ. ಸತೀಶ್ ಕುಮಾರ್ ಮಾತನಾಡಿ ನಮ್ಮ ದೇಶದಲ್ಲಿ ಹಲವಾರು ಜಾತಿ ಭಾಷೆಗಳಿದ್ದು ನಾವೆಲ್ಲಾ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು ಎಂದರು.
ಅಧ್ಯಕ್ಷತೆ ಹಾಗೂ ಧ್ವಜಾರೋಹಣವನ್ನು ಪುರಸಭಾ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ನೆರವೇರಿಸಿದರು.ಪಟ್ಟಣದ 22 ಶಾಲೆಗಳ ಮಕ್ಕಳು ಪಥಸಂಚಲನೆಯ ಮೂಲಕ ಧ್ವಜ ವಂದನೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ, ಪ್ರಬಂಧ, ಪತಸಂಚಲನ ಮತ್ತಿತರೆ ಸ್ಪರ್ಧೆಗಳಲ್ಲಿ ವಿಜೇತರಾದ  ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಪುರಸಭಾ ವತಿಯಿಂದ ಶೇ. 7.25 ಮತ್ತು 22.75 ನಿಧಿಯಲ್ಲಿ 10000 ರು.ಗಳ ಫಿಕ್ಸೆಡ್ ಬಾಂಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement