ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಸಂಸ್ಥೆಗಳು ಸಮಾಜದ ಏಳಿಗೆಗಾಗಿ ಶ್ರಮಿಸಲಿ'

Srinivasa Murthy VN
Updated On : 3 Jul 2013, 11:18 am

ಆನೇಕಲ್ಲು: ಸಂಘಟನೆಗಳು ಹೋರಾಟದ ಜೊತೆಗೆ ಬಡವರ ಹಾಗೂ ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಪ್ರಜಾ ವಿಮೋಚನಾ ಚಳುವಳಿ (ಸಮತಾವಾದ) ಸಂಘಟನೆಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ತಿಳಿಸಿದರು. ಅವರು ಆನೇಕಲ್ ತಾಲೂಕಿನ ರಾಯಸಂದ್ರ ಹಾಗೂ ನಾಗನಾಥಪುರದಲ್ಲಿ ಸಂಘಟನೆಯ ನೂತನ ಶಾಖೆಗಳನ್ನು ಉದ್ಘಾಟಿಸಿ ಮಾತನಾಡಿ  ದೇಶದಲ್ಲಿ  ಅಸಮಾನತೆ, ಅಸ್ಪೃಶ್ಯತೆ ಜೊತೆಗೆ ಭ್ರಷ್ಟಾಚಾರ ಸೇರಿಕೊಂಡು ಬಡವರು ಬಡವರಾಗಿಯೇ ಉಳಿದಿದ್ದಾರೆ.
ತೋಳ್ಬಲ ಇದ್ದವರು ಹಿಂಬಾಗಿಲ ಮೂಲಕ ಸ್ವಾರ್ಥ ಮೆರೆಯುತ್ತಾರೆ. ಪಿವಿಸಿ(ಎಸ್) ಸಮಾನತೆ ಹಾಗೂ ಸಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದು ಯುವ ಜನತೆ ಗ್ರಾಮಗಳ ಸಮಸ್ಯೆಯ ನಿವಾರಣೆಗೆ ಹೋರಾಟ ಮಾಡಬೇಕೆಂದು ಕರೆ ನೀಡಿದರು. ತಾಲೂಕಿನಲ್ಲಿ 3 ಬಾರಿ ಗೆದ್ದು ಬಿಜೆಪಿ ಶಾಸಕರು ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಮಾಡುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ನೂತನ ಶಾಸಕ ಬಿ.ಶಿವಣ್ಣನವರು ಡಾ. ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಆಂಜಿನಪ್ಪ ಮಾತನಾಡಿ  ಇಂದಿನ ಶಿಕ್ಷಣ ವ್ಯಾಪಾರೀಕರಣವಾಗಿದ್ದು, ಹಣ ಇದ್ದವರಿಗೆ ಮಾತ್ರ ಉತ್ತಮ ಶಿಕ್ಷಣ ಎಂಬ ಧೋರಣೆ ತೊಲಗಬೇಕು. ಬಡವ ಹಾಗೂ ಬಲ್ಲಿದ ಎಂಬ ಭೇದ ಭಾವ  ತೊರೆದು ಎಲ್ಲರಿಗೂ ಉತ್ತಮ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕೆಂದರು. ಬೆಂಗಳೂರು ವಿಭಾಗದ ಶಾಖಾ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಶಂಕರ್, ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಸ್. ಭಾಸ್ಕರ್, ಬೆಂಗಳೂರು ವಿಭಾಗ ಶಾಖೆಯ ಅಧ್ಯಕ್ಷ ಬಸವರಾಜು, ಗ್ರಾಮೀಣ ಜಿಲ್ಲಾ ಅಧ್ಯಕ್ಷ ಮುನಿಕೃಷ್ಣಪ್ಪ, ನಗರ ಜಿಲ್ಲಾ ಕಾರ್ಯಧ್ಯಕ್ಷ ವೈ. ಕೃಷ್ಣಪ್ಪ, ನಾಗರಾಜು, ಕೊಪ್ಪ ರಾಂಮಾಜಿ, ಭವಾನಿ, ಪ್ರಸಾದ್, ಪ್ರವೀಣ್, ಮತ್ತು ಗಜೇಂದ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement