ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೈನ ಟ್ರಸ್ಟ್‌ಗೆ ಹೆಚ್ಚುವರಿ ಜಮೀನು ಮಂಜೂರು ಅಸಾಧ್ಯ

Srinivasa Murthy VN
Updated On : 4 Jul 2013, 12:35 pm

ದೇವನಹಳ್ಳಿ: ಪಾರಿವಾಳ ಗುಟ್ಟದ ಎಲ್ಲ ಪ್ರದೇಶ ಸಾರ್ವಜನಿಕ ಆಸ್ತಿಯಾಗಿ ಉಳಿಯಬೇಕು ಎಂದು ಪಾರಿವಾಳ ಗುಟ್ಟ ಹೋರಾಟ ಸಮಿತಿಯವರು ಬುಧವಾರ ಪ್ರತಿಭಟನಾ ಮೆರವಣಿಗೆ ಹಾಗೂ ಮಿನಿ ವಿಧಾನಸೌಧದ ಬಳಿ ಬಹಿರಂಗ ಸಭೆ ಆಯೋಜಿಸಿದ್ದರು.
ಜೈನ ಟ್ರಸ್ಟ್‌ನವರಿಗೆ ಈಗಾಗಲೇ 1999 ರಲ್ಲಿ 30 ಎಕರೆ ಪ್ರದೇಶವನ್ನು ಪಾರಿವಾಳ ಗುಟ್ಟದಲ್ಲಿ ಸರ್ಕಾರ ಉಚಿತವಾಗಿ ನೀಡಿದ್ದು ಎರಡನೇ ಬಾರಿಗೆ ಉಳಿದಿರುವ 16 ಎಕರೆ ಪ್ರದೇಶದ ಮಂಜೂರಿಗಾಗಿ ಸರ್ಕಾರಕ್ಕೆ ಜೈನ ಸಂಸ್ಥೆಯವರು ಮತ್ತೆ ಬೇಡಿಕೆ ಇಟ್ಟಿದ್ದು ಹಿಂದಿನ ತಹಸೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಿದ್ದರು. ಜಿಲ್ಲಾಧಿಕಾರಿಗಳ ಮಂಜೂರಾತಿಗಾಗಿ ಪ್ರಕರಣ ಇರುವುದರಿಂದ ಯಾವುದೇ ಕಾರಣಕ್ಕೂ ಮಂಜೂರು ಮಾಡಬಾರದು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ ತಿಳಿಸಿದರು.
ದೇವನಹಳ್ಳಿಗೆ ಶೋಭೆ ಇರುವುದು ಪಾರಿವಾಳ ಗುಟ್ಟದಿಂದ ಮಾತ್ರ. ಈ ಗುಟ್ಟ ಮುಂದಿನ ಪೀಳಿಗೆಗೆ ಪ್ರವಾಸಿ ತಾಣವಾಗಿ ಉಳಿಸಿಕೊಳ್ಳಲು ಎಲ್ಲ ಸಂಘ ಸಂಸ್ಥೆಗಳ ಹೋರಾಟವಾಗಿದೆ ಎಂದು ವಕೀಲರಾದ ಸಿದ್ದಾರ್ಥ ತಿಳಿಸಿದರಲ್ಲದೆ ಸಾರ್ವಜನಿಕ ಭೂಕಬಳಿಕೆಯಾಗಿರುವುದರಿಂದ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಬಿಡುವುದಿಲ್ಲ: ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕರಾದ ಪಿಳ್ಳಮುನಿಶಾಮಪ್ಪರವರು ಆಗಮಿಸಿ ಹೋರಾಟಗಾರರಿಂದ ಮನವಿ ಪಡೆದು ಯಾವುದೇ ಕಾರಣಕ್ಕೂ ಜೈನ ಸಂಸ್ಥೆಗೆ ಹೆಚ್ಚುವರಿ ಜಮೀನು ಮಂಜೂರಾಗಲು ಬಿಡುವುದಿಲ್ಲ ಅಲ್ಲೆದ ಈಗಾಗಲೇ ಮಂಜೂರಿಯಾಗಿರುವ ಜಮೀನು ಸರ್ಕಾರದ ಷರತ್ತು ಉಲ್ಲಂಘನೆಯಾಗಿದ್ದರೆ ವಕೀಲರಲ್ಲಿ ಚರ್ಚಿಸುವುದಾಗಿ ತಿಳಿಸಿದರಲ್ಲದೆ ತಾಲೂಕಿನಲ್ಲಿ ಯಾವುದೇ ಕುಂಟೆಗಳು ಭೂಗಳ್ಳರ ಪಾಲಾಗಲು ಬಿಡುವುದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ವೆಂಕಟರಾಜುರವರು ಮಾತನಾಡಿ ಈ ಪ್ರಕರಣ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಭೆ ನಡೆದಿದ್ದು ಜು.5 ರಂದು ಉಪ ವಿಭಾಗಾಧಿಕಾರಿಗಳು ಹಾಗೂ ತಾವು ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ  ವರದಿ ಸಲ್ಲಿಸುತ್ತೇವೆ ಎಂದರು. ಹೋರಾಟ ಸಮಿತಿಯ ಸಂಚಾಲಕರಾದ ಸಿ.ಮುನಿರಾಜು ಮಾತನಾಡಿ ಪಾರಿವಾಳ ಗುಟ್ಟ ದೇವನಹಳ್ಳಿ ಎಲ್ಲ ಧಾರ್ಮಿಕ ಜನಾಂಗದವರ ಸ್ವತ್ತಾಗಿದ್ದು ಸರ್ಕಾರ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡದಂತೆ ಎಚ್ಚರವಹಿಸಬೇಕು. ಪಾರಿವಾಳ ಗುಟ್ಟದಲ್ಲಿ ಎಲ್ಲ ಹಿಂದೂ ಧಾರ್ಮಿಕ ಕಾರ್ಯಗಳು ಹಿಂದಿನಂತೆ ನಡೆಯಲು ಅವಕಾಶ ಆಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement