ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಧಾರ್ ಕಾರ್ಡ್ ವಿತರಣೆಗೆ ಕ್ರಮ: ಬಾಲಕೃಷ್ಣ

Srinivasa Murthy VN
Updated On : 6 Jul 2013, 12:40 pm

ಕ.ಪ್ರ.ವಾರ್ತೆ ಮಾಗಡಿ ಜು.4
ಇನ್ನು ಮುಂದೆ ಆದಾರ್ ಕಾರ್ಡ್ ಮಾಡಿಸಲು ಕ್ಷೇತ್ರದ ಜನತೆ ಗಂಟೆಗಟ್ಟಲೆ ಕೇಂದ್ರದ ಬಳಿ ಕಾಯಬೇಕಾಗಿಲ್ಲ ಹತ್ತಿರದಲ್ಲೇ ಆಧಾರ್  ಕಾರ್ಡ್ ಮಾಡಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ಆಧಾರ್  ಕಾರ್ಡ್ ಮಾಡಿಸಲು 6 ತಿಂಗಳಿಂದ ಅಲೆಯುತ್ತಿದ್ದೇವೆ. ಇನ್ನೂ ಮಾಡಿಸಲಾಗಲಿಲ್ಲ, ದಿನನಿತ್ಯ ಆಧಾರ್ ಕಾರ್ಡಿಗಾಗಿ ಅಲೆಯುವುದನ್ನು ತಪ್ಪಿಸಿ  ಶಾಸಕರೇ... ಎಂದು ಗ್ರಾಮೀಣ ಭಾಗದ ಜನತೆ ಅಹಾವಾಲಿಗೆ ಈ ರೀತಿ ಉತ್ತರಿಸಿದರು.
 ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸುಮಾರು  19 ಆಧಾರ್ ಕೇಂದ್ರಗಳನ್ನು ತೆರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹೀಗಾಗಿ ಇನ್ನು ಮಂದೆ ಕ್ಷೇತ್ರದ ಜನತೆ ಆಧಾರ್ ಕಾರ್ಡ್ ಮಾಡಿಸಲು ಅಲೆಯಬೇಕಾಗಿಲ್ಲ. ಸುಲಭವಾಗಿ ಮಾಡಿಸಿಕೊಳ್ಳಬಹುದು ಎಂದು ಶಾಸಕ ಬಾಲಕೃಷ್ಣ ವಿವರಿಸಿದರು.
ಆಧಾರ್ ಕಾರ್ಡ್ ಕೇಂದ್ರಗಳು: ಪಟ್ಟಣದ ಕಲ್ಯಾಗೇಟ್, ಮಾರುಕಟ್ಟೆ, ಹೊಸಪೇಟೆ, ತಾಲೂಕು ಕಚೇರಿ ಬಳಿ. ಮಾಡಬಾಳ್ ಹೋಬಳಿ ಕೇಂದ್ರಗಳು. ಮಾಡಬಾಳ್, ವೀರೇಗೌಡನದೊಡ್ಡಿ, ಗೆಜ್ಜಗಾರೆಕುಪ್ಪೆ, ಆಗಲಕೋಟೆ
ಹ್ಯಾಂಡ್‌ಪೋಸ್ಟ್, ಕುದೂರು ಹೋಬಳಿ. ಮರೂರು ಹ್ಯಾಂಡ್‌ಪೋಸ್ಟ್, ತಿಪ್ಪಸಂದ್ರ ಹೋಬಳಿ.. ತಿಪ್ಪಸಂದ್ರ, ಚಿಕ್ಕಮುದಿಗೆರೆ. ಹುಳ್ಳೇನಹಳ್ಳಿ, ಕುದೂರು ಹೋಬಳಿ. ಕುದೂರು, ಹುಲೀಕಲ್ಲು. ಸೋಲೂರು ಹೋಬಳಿ. ಸೋಲೂರು, ಲಕ್ಕೇನಹಳ್ಳಿ, ಬಾಣವಾಡಿ, ಗುಡೇಮಾರನಳ್ಳಿ, ಮೋಟಗಾನಹಳ್ಳಿ ಕೇಂದ್ರಗಳು ಆರಂಭವಾಗಲಿದೆ ಎಂದರು. ಕೆಲ ಹಳ್ಳಿಗಳಲ್ಲಿ ನೆಟ್‌ವರ್ಕ್ ಸರ್ವರ್ ಸಮಸ್ಯೆಯಿದ್ದರೆ, ಸಾರ್ವಜನಿಕರು ಪಕ್ಕದ ಕೇಂದ್ರಗಳಿಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದು ಎಂದು ಶಾಸಕರು ವಿವರಿಸಿದರು.
ಡಿಸೆಂಬರ್  ಅಂತ್ಯದ ವರೆಗೆ ಆಧಾರ್ ಕಾರ್ಡ್ ಪ್ರಕ್ರಿಯೆ ನಿರಂತರವಾಗಿರುತ್ತದೆ. ಈಗಾಗಲೇ 78 ಸಾವಿರ ಆಧಾರ್ ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.
ತಾ.ಪಂ. ಅಧ್ಯಕ್ಷ ಬಿ.ಟಿ.ವೆಂಕಟೇಶ್, ಸದಸ್ಯರಾದ ಜಿ.ಕೃಷ್ಣ, ಪೊಲೀಸ್ ರಾಮಣ್ಣ, ಕಾಂತರಾಜು, ಅರುಂಧತಿ ಚಿಕ್ಕಣ್ಣ, ಆಧಾರ್ ಕೇಂದ್ರದ ಸಿಬ್ಬಂದಿಗಳು ಹಾಗು ಪಿಡಿಓಗಳು ಹಾಜರಿದ್ದರು.

ವಾಹನ ಚಾಲನಾ ಪರವಾನಗಿ ವಿತರಣೆ
ಕನ್ನಡಪ್ರಭ ವಾರ್ತೆ ಕನಕಪುರ ಜು. 2

ಗ್ರಾಮೀಣ ಪ್ರದೇಶಗಳ ಯುವಕರು ವಿದ್ಯಾಭ್ಯಾಸದ ಕೊರತೆಯಿಂದ ಜೀವನ ನಿರ್ವಹಣೆಗಾಗಿ ಟ್ರ್ಯಾಕ್ಟರ್ ಚಾಲನೆಯನ್ನು ಮಾಡುತ್ತಿದ್ದು ವಾಹನ ಚಾಲನಾ ಪರವಾನಗಿಯಿಲ್ಲದ ಕಾರಣ ಅಪಘಾತಗಳು ಅವಘಡಗಳು ಸಂಭವಿಸಿದಾಗ ವಿಕಲಾಂಗರಾಗಿ ಅನೇಕ ವೇಳೆ ಜೀವವನ್ನೇ ಕಳೆದುಕೊಂಡರೂ ಯಾವುದೇ ಪರಿಹಾರ ದೊರೆಯದೆ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ಇದನ್ನು ನೀಗಿಸಲು ಕನಕಪುರದ ರೋಟರಿ ಸಂಸ್ಥೆ ಗ್ರಾಮೀಣ ಟ್ರ್ಯಾಕ್ಟರ್ ಚಾಲಕರಿಗೆ ಉಚಿತವಾಗಿ ವಾಹನ ಚಾಲನಾ ಪರವಾನಗಿಯನ್ನು ಮಾಡಿಸಿಕೊಟ್ಟು ಜೀವನಕ್ಕೆ ನೆಲೆ ಭದ್ರತೆಗಳನ್ನು ಕಲ್ಪಿಸುವ ಪ್ರಶಂಸಾರ್ಹ ಕಾರ್ಯ ನಡೆಸಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ ಹೇಳಿದ್ದಾರೆ.
ಅವರು ಕನಕಪುರದ ರೋಟರಿ ಭವನದಲ್ಲಿ 150 ಯುವಕರಿಗೆ ವಾಹನಚಾಲನಾ ಪರವಾನಗಿ ವಿತರಿಸುತ್ತಾ ಮಾತನಾಡಿದರು. ರೋಟರಿ ಅಧ್ಯಕ್ಷ ಸಿ. ವಿಜಯ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಅತಿಥಿಗಳಾಗಿ ಡಿಕೆಎಸ್ ವಾಹನ ತರಬೇತಿ ಶಾಲೆಯ ಮಾಲೀಕ ವೆಂಕಟೇಶ್ ಆಗಮಿಸಿದ್ದರು. ಕಾರ್ಯದರ್ಶಿ ಉಮಾರಾಜ್ ಸ್ವಾಗತಿಸಿದರು. ಖಜಾಂಚಿ ದೇವರಾಜೇ ಅರಸ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement