ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಡ್ಡಾಯವಾಗಿ ನಾಮಫಲಕ ಹಾಕಿ: ರೇಖಾ

Srinivasa Murthy VN
Updated On : 6 Jul 2013, 12:40 pm

ಮಾಗಡಿ: ಮಹಾತ್ಮ ಗಾಂಧಿ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ 15 ದಿನಗಳ ಒಳಗಾಗಿ ಪಂಚಾಯ್ತಿಗಳು ಕಡ್ಡಾಯವಾಗಿ ನಾಮಫಲಕ ಹಾಕಬೇಕು ಎಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಲೆಕ್ಕಪರಿಶೋಧನಾಧಿಕಾರಿ ರೇಖಾ ನುಡಿದರು.
ತಾಲೂಕಿನ ಕಣ್ಣೂರು ಗ್ರಾಮ ಪಂಚಾಯ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2013-14ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನೆಯ ಮೊದಲ ಸುತ್ತಿನ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಗ್ರಾಮ ಪಂಚಾಯ್ತಿಗಳು ನರೇಗ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಪೂರ್ಣಗೊಂಡ ಮೇಲೆ ಕಡ್ಡಾಯವಾಗಿ ನಾಮಫಲಕ ಹಾಕಬೇಕು. ಜಿಲ್ಲೆ ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದು, ಕೂಲಿಗಾಗಿ ಪಂಚಾಯ್ತಿಗಳು ಜಾಬ್‌ಕಾರ್ಡ್ ಜಾಸ್ತಿ ಮಾಡಿಸಬೇಕು. 100 ದಿನದ ಬದಲಾಗಿ 150 ದಿನದ ಕೂಲಿಗೆ ಹೆಚ್ಚಿಸಬೇಕು.  ಪ್ರಸ್ತುತ ವರ್ಷದಲ್ಲಿ ಸರ್ಕಾರ ಜಾಬ್‌ಕಾರ್ಡ್ ಹೊಂದಿರುವ ಕೂಲಿಯಾಳುಗಳಿಗೆ ಪ್ರತಿದಿನಕ್ಕೆ 174 ರು. ಕೂಲಿ ನೀಡಲಿದೆ. ಕೂಲಿ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುವ ಸುಲಭ ವ್ಯವಸ್ಥೆಯನ್ನು ಸರ್ಕಾರ ಕೈಗೊಂಡಿದೆ. ಪಂಚಾಯ್ತಿಗೊಬ್ಬ ಕಾಯಕ ಬಂಧುವನ್ನು ನೇಮಕ ಮಾಡಿಕೊಳ್ಳುವ ಅವಕಾಶ ಸರ್ಕಾರ ಕಲ್ಪಿಸಿದೆ ಎಂದರು.
ನರೇಗ ಯೋಜನೆಯಡಿ ನಡೆಯುವ ಕಾಮಗಾರಿ ಪರಿಶೀಲನೆಗೆ ಗ್ರಾಮ ಸಂಪನ್ಮೂಲ ವ್ಯಕ್ತಿಯನ್ನು  ಸರ್ಕಾರ ನೇಮಿಸಿದೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ಎಸ್. ಕುಮಾರಯ್ಯ ಮಾತನಾಡಿ, ಗ್ರಾಮ ಪಂಚಾಯ್ತಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಭಿವೃದ್ಧಿ ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ನಡೆದಿಲ್ಲ ಎಂದರು
ಕೃಷಿ, ರೇಷ್ಮೆ ತೋಟಗಾರಿಕೆ, ಮೀನುಗಾರಿಕೆ, ಅಂಗನವಾಡಿ, ಶಿಕ್ಷಣ  ಇತರೆ ಇಲಾಖೆಗಳ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವಿವರಿಸಿದರು.
ಮೀನುಗಾರಿಕೆ ಇಲಾಕೆಯ ಸಹಾಯಕ ನಿರ್ದೇಶಕ  ಹಾಗೂ ನಿಯೋಜಿತ ಅಧಿಕಾರಿ  ಯೋಗೇಶ್, ಪಂಚಾಯ್ತಿ  ಉಪಾಧ್ಯಕ್ಷ  ಜಿ.ಶಿವಕುಮಾರಸ್ವಾಮಿ, ಸದಸ್ಯರಾದ ಈಶ್ವರಯ್ಯ,ಎಂ.ಜಿ. ನರಸಿಂಹಮೂರ್ತಿ, ಸುಲೋಚನಾ, ಪದ್ಮಾವತಿ, ಗಾಯಿತ್ರಿ, ಪಾರ್ವತಿ, ಮಂಗಳಮ್ಮ, ರತ್ನಮ್ಮ, ಪಿಡಿಓ ಟಿ.ಎಂ.ಚಂದ್ರಶೇಖರಯ್ಯ, ಹನುಮಂತಯ್ಯ ಗ್ರಾಮದ ಮುಖಂಡರು ಹಾಜರಿದ್ದರು.

ಜಿಪಂ ಪ್ರಭಾರ ಅಧ್ಯಕ್ಷರಾಗಿ ಗೌರಮ್ಮ
ರಾಮನಗರ:
  ಕೆ.ಮುದ್ದುರಾಜ್ ಯಾದವ್ ಅವರ ರಾಜಿನಾಮೆಯಿಂದ ತೆರವಾಗಿದ್ದ ಜಿಲ್ಲಾ ಪಂಚಾಯಿತಿ ಸ್ಥಾನಕ್ಕೆ ಉಪಾಧ್ಯಕ್ಷೆ ಎಸ್.ಬಿ. ಗೌರಮ್ಮ ಪ್ರಭಾರ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಬಿ. ಗೌರಮ್ಮ ಅವರು, ಪ್ರಭಾರಿ ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ಇದಕ್ಕೆ ಕಾರಣರಾದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಭಾರಿಯಾಗಿದ್ದೇನೆ ಎಂದರು.
ಜಿ.ಪಂ.ನ ಸ್ವಪಕ್ಷ ಹಾಗೂ ವಿರೋಧ ಪಕ್ಷದ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅಧ್ಯಕ್ಷರಾಗಿರುವಷ್ಟು ದಿನ ಜನರು ಅನುಭವಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸುವೆ. ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಡೆಂಘೀ ಕಾಯಿಲೆಯನ್ನು ತಡೆಗಟ್ಟಲು ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಡಾ.ಸಿ. ಸಿದ್ದರಾಮಯ್ಯ, ಸದಸ್ಯ ಎಚ್.ಸಿ. ರಾಜಣ್ಣ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement