ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೆರೆ ಸಂರಕ್ಷಣೆಗೆ ಆದ್ಯತೆ: ಬೆಂ. ನಗರ ಜಿಲ್ಲಾಧಿಕಾರಿ

Srinivasa Murthy VN
Updated On : 26 Jul 2013, 12:48 pm

ಆನೇಕಲ್ಲು: ತಾಲೂಕಿನಲ್ಲಿ 234 ಕೆರೆಗಳಿದ್ದು 70 ಕೆರೆಗಳನ್ನು ಬೇಲಿ ಸುತ್ತಿ ಒತ್ತುವರಿಯಾಗುವುದನ್ನು ತಪ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಡಾ. ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ. ಅವರು ಅತ್ತಿಬೆಲೆ ಭೇಟಿ ಸಂದರ್ಭದಲ್ಲಿ ಬೇಲೂರು ಬಸ್ ಘಟನೆ ಬಗ್ಗೆ ಪ್ರಶ್ನಿಸಿದಾಗ ಮೇಲಿನಂತೆ ಉತ್ತರಿಸಿ ಜಿಲ್ಲಾಧಿಕಾರಿಗಳ ನಿಧಿಯನ್ನು ಬಳಸಿ ಕೆರೆಗಳ ಅಚ್ಚುಕಟ್ಟನ್ನು ಭದ್ರಪಡಿಸಲಾಗವುದು. ತಾಲೂಕಿನಲ್ಲಿ ಗೃಹ ನಿರ್ಮಾಣ ಉದ್ಯಮ ಬೆಳೆಯುತ್ತಿದ್ದು ತ್ಯಾಜ್ಯ ಹಾಗೂ ಶೌಚವನ್ನು ಕೆರೆ ಅಂಗಳಕ್ಕೆ ಬಿಡುತ್ತಿದ್ದಾರೆ. ಕಟ್ಟಡ ಮಾಲಿಕರಿಗೆ ಟ್ರೀಟ್ಮೆಂಟ್ ಪ್ಲಾಂಟ್ ಅಳವಡಿಸುವಂತೆ ಸೂಚಿಸಲಾಗಿದೆ. ಪುರಸಭೆ ಹಾಗೂ ಗ್ರಾಪಂಗಳಿಗೂ ಟ್ರೀಟ್ಮೆಂಟ್ ಪ್ಲಾಂಟ್ ಅಳವಡಿಸಲು ಸೂಚನೆ ನೀಡಲಾಗಿದೆ. ಕೆರೆಗಳ ಒತ್ತುವರಿ ತೆರವು ಮಾಡಿಸುವುದು, ಕಬ್ಬಿಣದ ಬೇಲಿ ಹಾಕುವುದು, ಗಲೀಜು ನೀರು ಸೇರದಂತೆ ತಡೆಯಲು ವಿಶೇಷ ಕಾಳಜಿ ನೀಡಲಾಗುವುದು ಎಂದರು. ಕೆರೆ ಏರಿ ತಿರುವು: ಆನೇಕಲ್ ಪಟ್ಟಣ ದೊಡ್ಡ ಕೆರೆ ಏರಿ ತಿರುವು, ಬಿದರಗುಪ್ಪೆ ಕೆರೆ ತಿರವು, ಮುತ್ತಾನಲ್ಲೂರು ರಸ್ತೆ ತಿರುವುಗಳ ಬಗ್ಗೆ ಆನೇಕ ದೂರುಗಳು ಬಂದಿದ್ದು ತಡೆ ಗೋಡೆ ನಿರ್ಮಾಣ ಹಾಗೂ ರಸ್ತೆ ವಿಭಜಕ ಹಾಕುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗುವುದು. ಅಪಾಯಕಾರಿ ತಿರುವಿನಲ್ಲಿ ಬೋರ್ಡ್ ಹಾಕಲಾಗುವುದು ಎಂದರು.

ದೇವನಹಳ್ಳಿಯಲ್ಲಿ ಗಾಳಿಪಟ ಉತ್ಸವ
ದೇವನಹಳ್ಳಿ:
ಇಲ್ಲಿನ ಜೇಸಿಐ ಸಂಸ್ಥೆಯವರು ಪ್ರತಿ ವರ್ಷದ ಆಷಾಢಮಾಸದಲ್ಲಿ ಗಾಳಿಪಟ ಉತ್ಸವ ಆಯೋಜಿಸುತ್ತಿದ್ದು ಜು.28 ರಂದು ಇಲ್ಲಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ಗಾಳಿಪಟ ಉತ್ಸವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎ.ಎಂ.ಹರೀಶ್ ತಿಳಿಸಿದ್ದಾರೆ.ಗಾಳಿಪಟ ಸ್ಪರ್ಧೆಯಲ್ಲಿ ಬಾಗವಹಿಸುವವರು ತಮ್ಮ ಹೆಸರುಗಳನ್ನು ಜು.28 ರಂದು 10 ಗಂಟೆಯೊಳಗಾಗಿ ದಾಖಲಿಸಿಕೊಳ್ಳಬೇಕೆಂದು ಕೋರಲಾಗಿದ್ದು ಹೆಚ್ಚಿನ ವಿವರಗಳಿಗೆ ಮೊ. 9880666791, 9739986999, 9900368297 ಸಂಪರ್ಕಿಸಬೇಕೆಂದು ಕಾರ್ಯದರ್ಶಿ ಎಸ್.ಪ್ರಭುದೇವ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement